ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜಯಲಲಿತಾ ಅಕ್ರಮ ಆಸ್ತಿಗಳಿಕೆ ಪ್ರಕರಣ ತೀರ್ಪು ಸೆ.27ಕ್ಕೆ

|
Google Oneindia Kannada News

ಬೆಂಗಳೂರು, ಸೆ. 16 : ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರ ವಿರುದ್ಧದ ಅಕ್ರಮ ಆಸ್ತಿಗಳಿಕೆ ಪ್ರಕರಣದ ತೀರ್ಪನ್ನು ಬೆಂಗಳೂರಿನ ವಿಶೇಷ ನ್ಯಾಯಾಲಯ ಸೆ.20ರ ಬದಲಿಗೆ 27ಕ್ಕೆ ಪ್ರಕಟಿಸಲಿದೆ. ತೀರ್ಪು ಪ್ರಕಟವಾಗುವ ದಿನ ಜಯಲಲಿತಾ ಸೇರಿದಂತೆ ಪ್ರಕರಣದ ಆರೋಪಿಗಳು ಖುದ್ದು ಹಾಜರಿರಬೇಕೆಂದು ನ್ಯಾಯಾಲಯ ಆದೇಶ ನೀಡಿದೆ.

ಪ್ರಕರಣದ ವಿಚಾರಣೆ ಮುಗಿಸಿದ್ದ ವಿಶೇಷ ನ್ಯಾಯಾಲಯ ಸೆ.20ರಂದು ತೀರ್ಪು ಪ್ರಕಟಿಸುವುದಾಗಿ ಹೇಳಿತ್ತು. ಸಿಟಿ ಸಿವಿಲ್ ಕೋರ್ಟ್‌ನಲ್ಲಿ ತೀರ್ಪು ಪ್ರಕಟಿಸಬೇಕಾಗಿತ್ತು. ಆದರೆ, ಜಯಲಲಿತಾ ಅವರು ಹೈಕೋರ್ಟ್‌ಗೆ ಭದ್ರತಾ ದೃಷ್ಟಿಯಿಂದ ಕೋರ್ಟ್‌ಅನ್ನು ಸ್ಥಳಾಂತರ ಮಾಡುವಂತೆ ಮನವಿ ಮಾಡಿದ್ದರು. [ಜಯಲಲಿತಾ ಅಕ್ರಮ ಆಸ್ತಿ ಪ್ರಕರಣ ಸೆ.20ಕ್ಕೆ ತೀರ್ಪು]

Jayalalithaa

ಈ ಬಗ್ಗೆ ಬೆಂಗಳೂರು ನಗರ ಪೊಲೀಸ್ ಆಯುಕ್ತರ ಅಭಿಪ್ರಾಯ ಪಡೆದ ನ್ಯಾಯಾಲಯ ಕೋರ್ಟ್‌ ಸ್ಥಳಾಂತರ ಮಾಡಲು ಆದೇಶ ನೀಡಿದೆ. ಸೂಕ್ತ ಭದ್ರತಾ ವ್ಯವಸ್ಥೆ ಕೈಗೊಳ್ಳಲು ಒಂದು ವಾರಗಳ ಸಮಯವನ್ನು ಬೆಂಗಳೂರು ಪೊಲೀಸರಿಗೆ ನೀಡಿದ್ದು, ಸೆ.27ರ ಶನಿವಾರ ತೀರ್ಪು ಪ್ರಕಟಗೊಳ್ಳಲಿದೆ. [ಜಯಲಲಿತಾ ವಿರುದ್ಧದ ವಿಚಾರಣೆಗೆ ತಡೆ ಇಲ್ಲ]

2011ರಲ್ಲಿ ಪ್ರಕರಣದ ವಿಚಾರಣೆ ನಡೆಯುವಾಗ ಜಯಲಲಿತಾ ಅವರ ಹೇಳಿಕೆ ದಾಖಲಿಸಿಕೊಂಡಿದ್ದ ಪರಪ್ಪನ ಅಗ್ರಹಾರದ ಗಾಂಧಿ ಭವನಕ್ಕೆ ಕೋರ್ಟ್‌ಅನ್ನು ಸ್ಥಳಾಂತರಗೊಳಿಸಲಾಗಿದ್ದು, ಸೆ.27ರಂದು ಅಲ್ಲಿಯೇ ನ್ಯಾಯಮೂರ್ತಿ ಮೈಕಲ್ ಜಾನ್ ಕುನ್ಹ ಅವರ ಪೀಠ ಅಂತಿಮ ತೀರ್ಪು ಪ್ರಕಟಸಲಿದೆ. ಅಲ್ಲಿ ಅಗತ್ಯ ಭದ್ರತಾ ಸೌಲಭ್ಯ ಒದಗಿಸುವಂತೆ ಪೊಲೀಸರಿಗೆ ಸೂಚನೆ ನೀಡಲಾಗಿದೆ.

ತೀರ್ಪು ಪ್ರಕಟಗೊಳ್ಳುವಾಗ ಪ್ರಕರಣದಲ್ಲಿನ ಆರೋಪಿಗಳಾದ ತಮಿಳುನಾಡಿನ ಮುಖ್ಯಮಂತ್ರಿ ಜಯಲಲಿತಾ ಹಾಗೂ ಇತರೆ ಮೂವರು ಆರೋಪಿಗಳಾದ ಸುಧಾಕರನ್, ಶಶಿಕಲಾ ಹಾಗೂ ಇಲವರಸಿ ಖುದ್ದು ಹಾಜರಿರಬೇಕು ಎಂದು ನ್ಯಾಯಾಲಯ ಸೂಚನೆ ನೀಡಿದೆ.

ಪ್ರಕರಣವೇನು : ಜಯಲಲಿತಾ 1991 ರಿಂದ 1996ರ ಅವಧಿಯಲ್ಲಿ ತಮಿಳುನಾಡು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ 66.65 ಕೋಟಿ ರೂ. ಮೌಲ್ಯದ ಅಕ್ರಮ ಆಸ್ತಿ ಸಂಪಾದನೆ ಮಾಡಿದ್ದಾರೆ ಎಂಬ ಆರೋಪದ ಸಂಬಂಧ ದೂರು ದಾಖಲಾಗಿದ್ದು. ಆ ಸಂದರ್ಭದಲ್ಲಿ ಅವರ ಮನೆ ಮೇಲೆ ದಾಳಿ ನಡೆದಿತ್ತು.

1997ರಲ್ಲಿ ದಾಳಿ ನಡೆಸಿದ ಸಂದರ್ಭದಲ್ಲಿ, 800 ಕೆಜಿ ಬೆಳ್ಳಿ, 28 ಕೆಜಿ ಚಿನ್ನ, 750 ಜತೆ ಶೂ, 10,500 ಸೀರೆ, 91 ವಾಚ್‌ ಸೇರಿದಂತೆ ಇತರೆ ಬೆಲೆಬಾಳುವ ವಸ್ತುಗಳನ್ನು ಜಪ್ತಿ ಮಾಡಲಾಗಿತ್ತು. ಈ ವಸ್ತುಗಳು ಸದ್ಯ ನ್ಯಾಯಾಲಯದ ವಶದಲ್ಲಿವೆ.

English summary
The Special Court in Bangalore will pronounce verdict on the disproportionate assets case against Tamil Nadu Chief Minister Jayalalithaa on September 27. Also, the court will shift to a temporary location on that day in view of security to be provided to Jayalalithaa for her personal appearance.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X