ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸುಳ್ಳು ಸುದ್ದಿ ಮಾಡಬೇಡಿ, ಜಯಲಲಿತಾ ಆರೋಗ್ಯ ಸ್ಥಿರ

|
Google Oneindia Kannada News

ಬೆಂಗಳೂರು,ಸೆ. 30 : ಅಕ್ರಮ ಆಸ್ತಿ ಸಂಪಾದನೆ ಪ್ರಕರಣಕ್ಕೆ ಸಂಬಂಧಿಸಿ ಶಿಕ್ಷೆಗೆ ಗುರಿಯಾಗಿ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ತಮಿಳುನಾಡು ಮಾಜಿ ಸಿಎಂ ಜಯಲಲಿತಾ ಆರೋಗ್ಯದಲ್ಲಿ ಯಾವುದೇ ಸಮಸ್ಯೆಯಿಲ್ಲ ಎಂದು ಪೊಲೀಸ್‌ ಆಯುಕ್ತ ಎಂ.ಎನ್.ರೆಡ್ಡಿ ಸ್ಪಷ್ಟಪಡಿಸಿದ್ದಾರೆ.

ಕನ್ನಡದ ಸುದ್ದಿ ವಾಹಿನಿಯೊಂದು ಜಯಲಲಿತಾ ಆರೋಗ್ಯದಲ್ಲಿ ಏರುಪೇರಾಗಿದೆ ಎಂದು ಮಾಡಿರುವ ವರದಿಗೆ ತಮ್ಮ ಟ್ವಿಟ್ಟರ್‌ ಖಾತೆಯಲ್ಲಿ ಉತ್ತರ ನೀಡಿದ್ದಾರೆ. ಜಯಲಲಿತಾ ಆರೋಗ್ಯವಾಗಿದ್ದಾರೆ. ಅವರಿಗೆ ಸಂಪೂರ್ಣ ಭದ್ರತೆ ಒದಗಿಸಲಾಗಿದೆ ಎಂದು ರೆಡ್ಡಿ ತಿಳಿಸಿದ್ದಾರೆ.(ಜಯಲಲಿತಾ ಜೈಲು ಶಿಕ್ಷೆಯ ಹಿಂದೆ ಕರ್ನಾಟಕದ ಪಿತೂರಿ!)

mn reddi

ಜನರು ಇಂಥ ವದಂತಿಗಳಿಗೆ ಬೆಲೆ ನೀಡಬಾರದು. ನಿಯಮಿತವಾಗಿ ವೈದ್ಯರು ಅವರ ಆರೋಗ್ಯ ತಪಾಸಣೆ ಮಾಡುತ್ತಿದ್ದಾರೆ ಎಂದು ತಿಳಿಸಿದ್ದಾರೆ. ಸುಳ್ಳು ಸುದ್ದಿ ಪ್ರಕಟಮಾಡಿ ಶಾಂತಿ ಕದಡುವ ಕೆಲಸ ಮಾಡಬಾರದು ಎಂದು ಹೇಳಿದ್ದಾರೆ.(ಅಮ್ಮಾ ಜೈಲಿಗೆ ಕಳುಹಿಸಿದ ಕುಡ್ಲದ ನ್ಯಾ.ಕುನ್ಹಾ)

ತಮ್ಮ ಮೇಲಿನ ಶಿಕ್ಷೆ ರದ್ದು ಮಾಡಲು ಒತ್ತಾಯಿಸಿ ಜಯಲಲಿತಾ ಹೈಕೋರ್ಟ್‌ಗೆ ಮನವಿ ಸಲ್ಲಿಸಿದ್ದರು. ಆದರೆ ಸರ್ಕಾರಿ ಅಭಿಯೋಜಕರಿಲ್ಲದ ಕಾರಣ ಅರ್ಜಿ ವಿಚಾರಣೆಯನ್ನು ಮುಂದಕ್ಕೆ ಹಾಕಲಾಗಿದೆ.

English summary
The Bangalore police on Tuesday denied reports that said AIADMK leader J Jayalalithaa, lodged in a city jail after her conviction in a corruption case, was unwell, calling them incorrect. M N Reddi, Commissioner of Police, Bangalore City, posted on Twitter, “Some Kannada news channels are showing that Kum. Jayalalithaa is unwell and having heart problem, This is not correct".
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X