ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

16ನೇ ಲೋಕಸಭೆ ಸ್ಪೀಕರ್ ಸ್ಥಾನ ಅಡ್ವಾಣಿಗೆ?

By Mahesh
|
Google Oneindia Kannada News

ಬೆಂಗಳೂರು, ಮೇ.15: ದೇಶ, ವಿದೇಶಗಳಲ್ಲಿನ ವಿದ್ಯಮಾನಗಳ ಈ ದಿನದ ರೌಂಡ್ ಆಪ್ ನಿಮಗಾಗಿ ಇಲ್ಲಿದೆ. ಇಲ್ಲಿ ಬರೀ ಹೆಡ್ ಲೈನ್ ಗಳು, ಟೂ ಲೈನ್ ಅಥವಾ ಒಂದು ಪ್ಯಾರಾ ಸುದ್ದಿಗಳು, ಚುಟುಕು ಮಾಹಿತಿ ಮಾತ್ರ ನಿಮಗೆ ಸಿಗುತ್ತದೆ.ದೇಶದ ಒಟ್ಟಾರೆ ಸುದ್ದಿಗಳ ಅಸಮಗ್ರ ಸಂಗ್ರಹ ನಿಮ್ಮ ಪರದೆ ಮೇಲೆ ಚೆಲ್ಲುವ ಪ್ರಯತ್ನ ಇದಾಗಿದೆ.

5.45: ಚುನಾವಣಾ ಫಲಿತಾಂಶಕ್ಕೂ ಮುನ್ನ ರಾಹುಲ್ ಗಾಂಧಿ ಭಾವಚಿತ್ರ ಕಾಂಗ್ರೆಸ್ ಪೋಸ್ಟರ್ ಗಳಿಂದ ಮಾಯ.
4.45: ಫಲಿತಾಂಶಕ್ಕೆ ಮುನ್ನವೇ ಸೋಲೊಪ್ಪಿಕೊಂಡ ಕಾಂಗ್ರೆಸ್ ಅಭ್ಯರ್ಥಿ. ಪೂರ್ವ ದೆಹಲಿಯ ಕಾಂಗ್ರೆಸ್ ಅಭ್ಯರ್ಥಿ ಸಂದೀಪ್ ದೀಕ್ಷಿತ್ ಪಕ್ಷದ ವಿಫಲತೆ ಒಪ್ಪಿಕೊಂಡಿದ್ದಾರೆ.

10.30: 16 ನೇ ಲೋಕಸಭೆಯ ಸ್ಪೀಕರ್ ಸ್ಥಾನಕ್ಕೆ ಎಲ್ ಕೆ ಅಡ್ವಾಣಿ ಹೆಸರು ಕೇಳಿ ಬಂದಿತ್ತು. ಅಡ್ವಾಣಿ ಕೂಡಾ ಒಪ್ಪಿಕೊಳ್ಳುವ ಸಾಧ್ಯತೆ ಕಂಡು ಬಂದಿದೆ.
10.15: ಮೂಲಗಳ ಪ್ರಕಾರ ನರೇಂದ್ರ ಮೋದಿ ಅವರು ಶುಕ್ರವಾರ ವಡೋದರಾ ಹಾಗೂ ಅಹಮದಾಬಾದಿನಲ್ಲಿ ಬೃಹತ್ ಮೆರವಣಿಗೆ ನಡೆಸಿ ಮತದಾರರಿಗೆ ಧನ್ಯವಾದ ಅರ್ಪಿಸಲಿದ್ದಾರೆ.
10.00: ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಆಯೋಜಿಸಿದ್ದ ಪ್ರಧಾನಿ ಮನಮೋಹನ್ ಸಿಂಗ್ ವಿದಾಯ ಔತಣ ಕೂಟಕ್ಕೆ ರಾಹುಲ್ ಗಾಂಧಿ ಗೈರು ಹಾಜರಿ. ಆದರೆ, ರಾಹುಲ್ ಊರಿನಲ್ಲಿರಲಿಲ್ಲ ಎಂದು ಕಾಂಗ್ರೆಸ್ ಸಮರ್ಥನೆ.

Top news in brief for the day

9.45: 2014ನೇ ಸಾಲಿನ ಎಲ್ಲಿಸ್ ಐಲ್ಯಾಂಡ್ ಮೆಡಲ್ ಆಫ್ ಹಾನರ್ ಪ್ರಶಸ್ತಿಗೆ ಭಾರತೀಯ ಮೂಲದ ಆರು ಅಮೆರಿಕನ್ನರು ಭಾಜನರಾಗಿದ್ದಾರೆ.
9.30: ಎನ್ಡಿಎ ಜತೆ ಎನ್ ಸಿಪಿ ಸಖ್ಯ ಬೆಳೆಯುವುದಕ್ಕೆ ಬಿಡುವುದಿಲ್ಲ ಎಂದ ಎನ್ ಸಿಪಿ ಹಾಗೂ ಮಹಾರಾಷ್ಟ್ರ ಬಿಜೆಪಿ.
9.15: ಅಜಯ್ ಮಾಕೆನ್ ನೇತೃತ್ವದಲ್ಲಿ ಕಾಂಗ್ರೆಸ್ ವಕ್ತಾರರ ಸಭೆ ನಡೆಯಲಿದೆ.
9.00 : ಬ್ಯಾಂಕಾಕ್ ವಿಮಾನ ನಿಲ್ದಾಣದಲ್ಲಿ ಭಾರತದಿಂದ ಕದ್ದೊಯ್ಯುತ್ತಿದ್ದ 230 ಆಮೆಗಳ ರಕ್ಷಣೆ.
8.45: ಟರ್ಕಿ ಗಣಿ ಕುಸಿತ ದುರಂತದಲ್ಲಿ ಸಾವನ್ನಪ್ಪಿರುವ ಸಂಖ್ಯೆ 274ಕ್ಕೇರಿದೆ.
English summary
Top news in brief for the day: LK Advani may become the Speaker in 16th Lok Sabha. Narendra Modi will address rally in Vadodra and Ahmedabad to thank voters, after the results.and Here are the other news in brief for the day from across the globe.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X