ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅಧಿಕಾರಿಯ ಲಂಚಬಾಕತನ ತಣಿಸಲು ಕಿಡ್ನಿ ಮಾರಿದ ಮಹಿಳೆ

By Kiran B Hegde
|
Google Oneindia Kannada News

ಬೆಂಗಳೂರು, ಜ. 17: ಭ್ರಷ್ಟಾಚಾರದ ವಿರುದ್ಧ ಎಷ್ಟೇ ಜಾಗೃತಿ ಜಾಥಾಗಳು ನಡೆದರೂ, ಕಠಿಣ ಕಾನೂನುಗಳು ಜಾರಿಗೆ ಬಂದಿದ್ದರೂ ಅನಕ್ಷರಸ್ಥ ಬಡವರಿಗೆ ಮಾತ್ರ ಅದರ ಪ್ರಯೋಜನ ಸಿಗುತ್ತಿಲ್ಲ.

ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಚಿಕ್ಕತಾಯಮ್ಮ (55) ಇದಕ್ಕೊಂದು ಜ್ವಲಂತ ಉದಾಹರಣೆ. ಕಂದಾಯ ಇಲಾಖೆಯ ಅಧಿಕಾರಿಯೋರ್ವನ ಲಂಚಬಾಕತನ ತಣಿಸಲು ಈ ಮಹಿಳೆ ತಮ್ಮ ಕಿಡ್ನಿಯನ್ನೇ ಮಾರಿದ್ದಾರೆ. ಅದೂ ತಮ್ಮದೇ ದಿವಂಗತ ತಂದೆಯ ಜಮೀನನ್ನು ವಾಪಸ್ ಪಡೆಯಲು! [ಲಂಚ ಕೊಟ್ರೆ ಕೊಂದು ಹಾಕ್ತೀನಿ ಅಂದಿದ್ರು ಸಿಎಂ]

"ನನ್ನ ತಂದೆಯ ಜಮೀನು ವಾಪಸ್ ಪಡೆಯಲು ನಾನು ಸುಮಾರು 15 ವರ್ಷಗಳಿಂದ ತಾಲೂಕು ಕಚೇರಿಗೆ ಅಲೆದಿದ್ದೇನೆ. ಆದರೆ, ಯಾವುದೇ ಪ್ರಯೋಜನ ಸಿಕ್ಕಿರಲಿಲ್ಲ. ಆದ್ದರಿಂದ ಕಿಡ್ನಿ ಮಾರುವ ತೀರ್ಮಾನ ಕೈಗೊಂಡೆ" ಎಂದು ಚಿಕ್ಕತಾಯಮ್ಮ ತಿಳಿಸಿದ್ದಾರೆ. [ಲಂಚ ಪಡೆಯುತ್ತಿದ್ದ ಪೇದೆ ಬಂಧನ]

money

ಅತಿಕ್ರಮಣವಾಗಿತ್ತು 15 ಎಕರೆ ಜಮೀನು : ಅವರ ತಂದೆ ಮೈಸೂರು ಸಮೀಪ ಸುಮಾರು 15 ಎಕರೆ ಜಮೀನು ಹೊಂದಿದ್ದರು. ಅವರು ನಿಧನ ಹೊಂದಿದ ನಂತರ ಕೆಲವರು ಅತಿಕ್ರಮಣ ಮಾಡಿಕೊಂಡಿದ್ದರು. ಜಮೀನು ಬಿಡಿಸಿಕೊಡುವಂತೆ ಚಿಕ್ಕತಾಯಮ್ಮ ಗೋಗರೆದರೂ ಅಧಿಕಾರಿಗಳ ಮನಸ್ಸು ಕರಗಿರಲಿಲ್ಲ. [ಪೊಲೀಸ್ ಇಲಾಖೆ ಹೆಚ್ಚು ಭ್ರಷ್ಟವೇ?]

"ದೊಡ್ಡಯ್ಯ ಎಂಬ ಅಧಿಕಾರಿಯೋರ್ವರು ತಮಗೆ 8,000 ರು. ನೀಡುವವರೆಗೂ ಜಮೀನನ್ನು ನನ್ನ ಹೆಸರಿಗೆ ಮಾಡಿಕೊಡುವುದಿಲ್ಲ ಎಂದು ಹೇಳಿದರು. ನನ್ನ ತಂದೆಯ ಜಮೀನಿಗೆ ನಾನೇಕೆ ಹಣ ಕೊಡಬೇಕೆಂದು ಕೇಳಿದರೂ ಒಪ್ಪಿರಲಿಲ್ಲ. ಆದ್ದರಿಂದ ಅನಿವಾರ್ಯವಾಗಿ ನನ್ನ ಕಿಡ್ನಿ ಮಾರಿದ್ದೇನೆ" ಎಂದು ಚಿಕ್ಕತಾಯಮ್ಮ ಹೇಳಿಕೊಂಡಿದ್ದಾರೆ.

ಅಧಿಕಾರಿ ಅಮಾನತು : ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಕರ್ನಾಟಕ ಲೋಕಾಯುಕ್ತ ತನಿಖೆಗೆ ಆದೇಶ ನೀಡಿದೆ. ಲಂಚ ಕೇಳಿದ್ದ ಆರೋಪ ಹೊತ್ತಿರುವ ಕಂದಾಯ ಇಲಾಖೆ ಅಧಿಕಾರಿಯನ್ನು ಅಮಾನತು ಮಾಡಲಾಗಿದೆ. [ಲಂಚ ನೀಡಿದ ಎಚ್ ಪಿ ಕಂಪನಿಗೆ ದಂಡ]

ಕಠಿಣ ಕ್ರಮ ಕೈಗೊಂಡು ಮಹಿಳೆಗೆ ನ್ಯಾಯ ದೊರಕಿಸುವುದಾಗಿ ನ್ಯಾ. ಡಾ. ವೈ. ಭಾಸ್ಕರ ರಾವ್ ಭರವಸೆ ನೀಡಿದ್ದಾರೆ. "ಅಧಿಕಾರಿಯು ಕೆಲಸ ಮಾಡಿ ಕೊಡಲು ನಿಧಾನ ಮಾಡಿದ್ದೇಕೆ ಎಂಬುದನ್ನು ಮೊದಲು ಅರಿಯುತ್ತೇವೆ. ಅನಗತ್ಯವಾಗಿ ನಿಧಾನ ಮಾಡುವುದು ನಿಯಮದ ಉಲ್ಲಂಘನೆಯಾಗುತ್ತದೆ" ಎಂದು ತಿಳಿಸಿದರು.

English summary
An illiterate woman Chikkatayamma in Srirangapatna Taluk of Mandya district said that she has sold her kidney to bribe a Revenue official to set right land records.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X