ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಐಎಎಸ್ ಅಧಿಕಾರಿ ಪೆರುಮಾಳ್ ಈಗ ಸ್ವಾಮೀಜಿ!

|
Google Oneindia Kannada News

ಬೆಂಗಳೂರು, ಜು. 9 : ನಿವೃತ್ತ ಐಎಎಸ್‌ ಅಧಿಕಾರಿ ಐ.ಆರ್‌.ಪೆರುಮಾಳ್‌ ಅವರು ಆಧ್ಯಾತ್ಮ ಜೀವನದೆಡೆಗೆ ಆಕರ್ಷಿತರಾಗಿದ್ದು, ಕಾವಿ ಧರಿಸಿ ಸನ್ಯಾಸ ಜೀವನಕ್ಕೆ ಕಾಲಿಟ್ಟಿದ್ದಾರೆ. ಕರ್ನಾಟಕದಲ್ಲಿ ಆರೋಗ್ಯ ಸೇರಿದಂತೆ ವಿವಿಧ ಇಲಾಖೆಗಳಲ್ಲಿ ಕಾರ್ಯನಿರ್ವಹಿಸಿದ್ದ ಅವರು, ಶಿವನ ಪರಮ ಭಕ್ತರಾಗಿದ್ದರು.

ಮೂಲತಃ‌ ತಮಿಳುನಾಡಿನವರಾದ ಪೆರುಮಾಳ್‌ ಬಾಲ್ಯದಿಂದಲೂ ಶಿವನ ಭಕ್ತರಾಗಿದ್ದರು. ತಮ್ಮ ತವರು ಗ್ರಾಮದಲ್ಲಿ ಶಿವಲಿಂಗವಿದ್ದ ಪ್ರದೇಶದಲ್ಲಿ ಭವ್ಯವಾದ ಶಿವನ ದೇವಾಲಯವನ್ನೂ ಇತ್ತೀಚೆಗೆ ಕಟ್ಟಿಸಿದ್ದ ಅವರು, ಸನ್ಯಾಸ ಜೀವನಕ್ಕೆ ಕಾಲಿಟ್ಟಿದ್ದು, ಶ್ರೀ ಶಿವಯೋಗಿ ಪೆರುಮಾಳ್‌ ಸ್ವಾಮಿಜಿಯಾಗಿ ಬದಲಾಗಿದ್ದಾರೆ.

I.R.Perumal

ಬಡ ರೈತ ಕುಟುಂಬದಲ್ಲಿ ಜನಿಸಿದ ಪೆರುಮಾಳ್ ಅವರು ಐಎಎಸ್ ನಂತಹ ಉನ್ನತ ಪದವಿ ಪಡೆಯಲು ಶಿವನ ಅನುಗ್ರಹ ಕಾರಣ ಎಂದು ಹೇಳುತ್ತಿದ್ದರು. ಪೆರುಮಾಳ್‌ ಅವರು ಕರ್ನಾಟಕ ಸರ್ಕಾರದ ಆರೋಗ್ಯ ಇಲಾಖೆ, ಸರ್ಕಾರದ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದರು. [ಬಿಇ ಪದವೀಧರ ಉಡುಪಿ ಕೃಷ್ಣಮಠದ ಉತ್ತರಾಧಿಕಾರಿ]

ಚುನಾವಣೆಗೆ ಸ್ಪರ್ಧಿಸಿದ್ದರು : ಬಿಜೆಪಿ ತೊರೆದು ಕೆಜೆಪಿ ಪಕ್ಷ ಕಟ್ಟಿದ್ದ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ಒತ್ತಾಯಕ್ಕೆ ಮಣಿದು 2013ರ ವಿಧಾನಸಭಾ ಚುನಾವಣೆಯಲ್ಲಿ ಬೆಂಗಳೂರಿನ ಶಿವಾಜಿನಗರ ಕ್ಷೇತ್ರದಿಂದ ಕೆಜೆಪಿ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧಿಸಿ, ಸೋಲು ಅನುಭವಿಸಿದ್ದರು.

ಸದ್ಯ, ಲೌಕಿಕ ಬದುಕಿನಿಂದ ಸಂಪೂರ್ಣವಾಗಿ ಆಧ್ಯಾತ್ಮ ಜೀವನದೆಡೆಗೆ ವಾಲಿರುವ ಪೆರುಮಾಳ್‌ ಅವರು ಶ್ರೀ ಶಿವಯೋಗಿ ಪೆರುಮಾಳ್‌ ಸ್ವಾಮಿಯಾಗಿ ಬದಲಾಗಿದ್ದು, ಸನ್ಯಾಸ ದೀಕ್ಷೆ ಸ್ವೀಕರಿಸಿದ್ದಾರೆ.

ಅಂದಹಾಗೆ 2013ರ ವಿಧಾನಸಭೆ ಚುನಾವಣೆಯಲ್ಲಿ ಪೆರುಮಾಳ್ ಅವರಿಗೆ ಶಿವಾಜಿನಗರ ಕ್ಷೇತ್ರದಲ್ಲಿ 2,869 ಮತಗಳು ಬಂದಿದ್ದವು. 49,649 ಮತಗಳನ್ನು ಪಡೆದಿದ್ದ ಕಾಂಗ್ರೆಸ್ ಅಭ್ಯರ್ಥಿ ರೋಷನ್ ಬೇಗ್ ಜಯಗಳಿಸಿದ್ದರು. [ಮಾಹಿತಿ : indiavotes.com]

English summary
IAS Officer I.R. Perumal who worked in Karnataka Health and Family Welfare Department has turned to spirituality and has become Perumal Swamiji. He is originally from Tamil Nadu contested for assembly election from Shivajinagar constituency in 2013 as KJP candidate.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X