ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರು ಹಾಪ್‌ಕಾಮ್ಸ್‌ನಲ್ಲಿ ‘ಆರ್ಗಾನಿಕ್ ಕಾರ್ನರ್’

|
Google Oneindia Kannada News

ಬೆಂಗಳೂರು, ಅ.10 : ಬೆಂಗಳೂರಿಗರು ಇನ್ನುಮುಂದೆ ಹಾಪ್‌ಕಾಮ್ಸ್‌ಗಳಲ್ಲಿ ಸಾವಯವ ಪದ್ಧತಿಯಲ್ಲಿ ಬೆಳೆದ ಹಣ್ಣು ಮತ್ತು ತರಕಾರಿಗಳನ್ನು ಖರೀದಿ ಮಾಡಬಹುದು. ಹಾಪ್‌ಕಾಮ್ಸ್‌ಗಳಲ್ಲಿ ಸಾವಯವ ಉತ್ಪನ್ನಗಳನ್ನು ಮಾರಾಟ ಮಾಡಲು ಸರ್ಕಾರ ನಿರ್ಧರಿಸಿದೆ.

ಸಾವಯವ ಉತ್ಪನ್ನಗಳಿಗೆ ಇತ್ತೀಚಿನ ದಿನಗಳಲ್ಲಿ ಬೇಡಿಕೆ ಹೆಚ್ಚುತ್ತಿದೆ. ಆದರೆ, ಅವುಗಳ ಮಾರಾಟಕ್ಕೆ ಸೂಕ್ತ ಸ್ಥಳಗಳಿಲ್ಲ. ಅಲ್ಲೊಂದು, ಇಲ್ಲೊಂದು ಮಳಿಗೆಗಳಲ್ಲಿ ಮಾತ್ರ ಮಾರಾಟ ಮಾಡಲಾಗುತ್ತಿದೆ. ಆದ್ದರಿಂದ ಸರ್ಕಾರ ಈ ಯೋಜನೆ ಜಾರಿಗೆ ತರಲು ಮುಂದಾಗಿದೆ.

Hopcoms

ಈ ಕುರಿತು ಮಾಹಿತಿ ನೀಡಿರುವ ಕೃಷಿ ಸಚಿವ ಕೃಷ್ಣಬೈರೇಗೌಡ ತೋಟಗಾರಿಕಾ ಇಲಾಖೆ ಅಧಿಕಾರಿಗಳು, ಹಾಪ್‌ಕಾಮ್ಸ್‌ನ ಆಡಳಿತ ಮಂಡಳಿಯೊಂದಿಗೆ ಈ ಕುರಿತು ಚರ್ಚೆ ನಡೆಸಿದ್ದಾರೆ. ಪ್ರಾಯೋಗಿಕವಾಗಿ ನಗರದ 25-30 ಹಾಪ್‌ಕಾಮ್ಸ್ ಮಳಿಗೆಗಳಲ್ಲಿ ಈ ಯೋಜನೆ ಜಾರಿಗೆ ಬರಲಿದೆ ಎಂದು ಹೇಳಿದ್ದಾರೆ.

ಸಾವಯವ ಉತ್ಪನ್ನಗಳ ಮಾರಾಟವನ್ನು ಮೊದಲು ನಗರದ ಪ್ರಮುಖ ಸ್ಥಳಗಳಲ್ಲಿರುವ ಹಾಪ್‌ಕಾಮ್ಸ್‌ನಲ್ಲಿ ಪ್ರಾರಂಭಿಸಲಾಗುವುದು. ಜನರ ಪ್ರತಿಕ್ರಿಯೆ ನೋಡಿಕೊಂಡು ಎಲ್ಲಾ ಕಡೆ ಯೋಜನೆ ವಿಸ್ತರಿಸಲಾಗುವುದು ಎಂದು ತಿಳಿಸಿದ್ದಾರೆ.

ಪ್ರತ್ಯೇಕ ವಿಭಾಗ : ಹಾಪ್‌ಕಾಮ್ಸ್‌ಗಳಲ್ಲಿ 'ಆರ್ಗಾನಿಕ್ ಕಾರ್ನರ್' ಎಂದು ಪ್ರತ್ಯೇಕ ವಿಭಾಗ ಮಾಡಿ ಅಲ್ಲಿ ಕೀಟನಾಶಕಗಳನ್ನು ಸಿಂಪಡಿಸದೆ ಸಂಪೂರ್ಣ ಸಾವಯವ ಮಾದರಿಯಲ್ಲಿ ಬೆಳೆದಂತಹ ಹಣ್ಣು ಮತ್ತು ತರಕಾರಿಗಳನ್ನು ಮಾರಾಟ ಮಾಡುವ ಉದ್ದೇಶಿಸಲಾಗಿದೆ.

ಗ್ರಾಹಕರ ಬೇಡಿಕೆ ಗಮನಿಸಿ ಮುಂದೆ ಸರ್ಕಾರ ಅನುಮತಿ ನೀಡಿದರೆ ಹಣ್ಣು ಮತ್ತು ತರಕಾರಿ ಜತೆಗೆ ಅಕ್ಕಿ, ಬೇಳೆ, ರಾಗಿ, ಜೋಳ, ಗೋಧಿ ಹೀಗೆ ಸಾವಯವ ಆಹಾರ ಪದಾರ್ಥಗಳನ್ನು ಮಾರಾಟ ಮಾಡಲು ಚಿಂತನೆ ನಡೆಸಲಾಗಿದೆ.

ಬೆಂಗಳೂರಿನಲ್ಲಿ 290 ಹಾಪ್‌ಕಾಮ್ಸ್ ಮಳಿಗೆಗಳಿವೆ. ಬೆಂಗಳೂರಿನ ವಾಪ್ತಿಗೆ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ ಮತ್ತು ರಾಮನಗರ ಜಿಲ್ಲೆಗಳು ಬರುತ್ತವೆ. ಹಾಪ್‌ಕಾಮ್ಸ್ ಆರ್ಗಾನಿಕ್ ತರಕಾರಿಗಳಿಗೂ ಬೆಲೆ ನಿಗದಿ ಮಾಡಲಿದೆ.

English summary
Karnataka horticulture department plans to set up Organic Corner in Hopcoms in Bangalore soon. In this Organic Corner people will get vegetables and fruits form Organic farming. this facility will begins soon said Agriculture Minister Krishna Byre Gowda.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X