ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಾಮಾಜಿಕ ಜವಾಬ್ದಾರಿ ಎಲ್ಲರಲ್ಲೂ ಬೆಳೆಯಲಿ

|
Google Oneindia Kannada News

ಬೆಂಗಳೂರು, ಸೆ. 17 : ವಿದ್ಯಾರ್ಥಿ ಮತ್ತು ಉಪನ್ಯಾಸಕರಲ್ಲಿ ಸಾಮಾಜಿಕ ಜವಾಬ್ದಾರಿ ಮತ್ತು ಕಳಕಳಿ ಹೆಚ್ಚಿಸಲು ಸಿಎಂಆರ್ ವಿಶ್ವ ವಿದ್ಯಾಲಯವು ವಿಶ್ವ ಸಂಸ್ಥೆಯ ಗ್ಲೋಬಲ್ ಕಾಂಪ್ಯಾಕ್ಟ್ ನೆಟ್‌ವರ್ಕ್(ಜಿಸಿಎನ್ಐ) ಇಂಡಿಯಾ ಜತೆಗೆ 'ವಿಮನ್ ಎಂಪವರ್‌ಮೆಂಟ್ ಪ್ರಿನ್ಸಿಪಲ್ಸ್' ಎಂಬ ವಿಷಯದ ಕುರಿತು ಜಂಟಿ ಸಭೆ ಆಯೋಜಿಸಿತ್ತು.

ಜಿಸಿಎನ್ಐ ಕಾರ್ಯನಿರ್ವಾಹಕ ನಿರ್ದೇಶಕ ಪೂರನ್ ಚಂದ್ರ ಪಾಂಡೆ ಮಾತನಾಡಿ, ವಿಶ್ವದಾದ್ಯಂತ ಆರ್ಥಿಕತೆ ಗಟ್ಟಿಗೊಳಿಸುವಲ್ಲಿ ಹಾಗೂ ಸಮಾಜ ಅಭಿವೃಧ್ಧಿಪಡಿಸುವಲ್ಲಿ ಮಹಿಳೆ ಪಾತ್ರ ಪ್ರಮುಖವಾಗಿದೆ. ವಿಶ್ವವಿದ್ಯಾಲಯವು ಸಮಾಜದ ಸಮಸ್ಯೆಗಳಿಗೆ ಸ್ಪಂದಿಸುತ್ತಿದೆ ಎಂದು ಹೇಳಿದರು.(ಸಿಎಂಆರ್ ನಲ್ಲಿ ಹೊಸ ಸಂಶೋಧನಾ ತರಗತಿ ಆರಂಭ)

cmr collage

ವಿದ್ಯಾರ್ಥಿಗಳ ನಡತೆ ಬಲಪಡಿಸಲು ಯೋಜನೆ ಹಮ್ಮಿಕೊಳ್ಳಲಾಗುತ್ತಿದೆ. ಮುಂದೆ ಇದೇ ವರ್ಗವು ಸಾಮಾಜಿಕ ಜವಾಬ್ದಾರಿ ಹೊಂದಿ ಮಹತ್ತರ ಬದಲಾವಣೆ ತರುತ್ತದೆ. ಮಹಿಳಾ ಸಬಲೀಕರಣ ಇಂದಿನ ಆದ್ಯತೆಯಾಗಿದ್ದು, ಮಾನವ ಹಕ್ಕುಗಳನ್ನು ಕಾಪಾಡಬೇಕು ಎಂದು ಹೇಳಿದರು.

ಸಿಎಂಆರ್ ವಿವಿಯ ಉಪ ಕುಲಪತಿ ಡಾ. ಆನಂದ ಕೆ ಜೋಶಿ ಮಾತನಾಡಿ, ವಿಶ್ವವಿದ್ಯಾಲಯದಲ್ಲಿ ಕೆಲಸ ಮಾಡುತ್ತಿರುವ ಮಹಿಳಾ ಸಿಬ್ಬಂದಿ ಮತ್ತು ವಿದ್ಯಾರ್ಥಿನಿಯರ ರಕ್ಷಣೆ ಮತ್ತು ಸರ್ವಾಂಗೀಣ ಅಭಿವೃದ್ಧಿಗೆ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದರು.(ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆ ಗುರಿ)

ವಿವಿ ಕುಲಪತಿ ಡಾ. ಸಬಿತಾ ರಾಮಮೂರ್ತಿ ಮಾತನಾಡಿ, ಎಲ್ಲರೂ ಸಮಾಜ ಕಟ್ಟುವ ಕೆಲಸದಲ್ಲಿ ನಿರತರಾಗಬೇಕು. ಪರಿಸರ ಸಂರಕ್ಷಣೆ ಮತ್ತು ಭವಿಷ್ಯದ ದೃಷ್ಟಿಯಲ್ಲಿ ಕೆಲಸ ನಿರ್ವಹಿಸಬೇಕು ಎಂದರು.

ಜಗತ್ತಿನ 534 ಉನ್ನತ ಶಿಕ್ಷಣ ಸಂಸ್ಥೆ ಹಾಗೂ ವಿಶ್ವ ವಿದ್ಯಾಲಯಗಳು 'ವಿಮನ್ ಎಮ್‌ಪವರ್‌ಮೆಂಟ್ ಪ್ರಿನ್ಸಿಪಲ್ಸ್' ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು 80 ದೇಶಗಳಲ್ಲಿ ಕಾರ್ಯಚಟುವಟಿಕೆ ಮಡೆಸಲಾಗಿದೆ. ಭಾರತದಲ್ಲಿ 24 ಮ್ಯಾನೇಜ್ ಮೆಂಟ್‌ ಶಿಕ್ಷಣ ಸಂಸ್ಥೆಗಳು ಮತ್ತು ಒಂದು ಯೂನಿವರ್ಸಿಟಿ ಕಾರ್ಯಕ್ರಮ ಅಳವಡಿಸಿಕೊಂಡಿದೆ. ನಮ್ಮ ವಿವಿಯಲ್ಲಿ ಇದನ್ನು ಕಡ್ಡಾಯಗೊಳಿಸಲಾಗಿದೆ ಎಂದು ತಿಳಿಸಿದರು.

English summary
The University and Higher Educational Institutions in India should focus on adoption of seven principles of Empowerment of Global Compact Network India (GCNI) said, Pooran C Pandey, Executive Director, GCNI, New Delhi. Pooran C Pandey addressed academic leaders, faculty and students at a joint meeting of CMR University and GCNI at CMR University, Bangalore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X