ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಾಜ್ಯದಲ್ಲಿ ಹೆಚ್ಚು ಮತದಾನ: ಮೋದಿ ಹವಾಗೆ ಹಿತಕರ?

By Srinath
|
Google Oneindia Kannada News

ಬೆಂಗಳೂರು, ಏಪ್ರಿಲ್ 19- ಲೋಕಸಭಾ ಚುನಾವಣೆಗೆ ಮೊನ್ನೆ ನಡೆದ ಚುನಾವಣೆಯಲ್ಲಿ ರಾಜ್ಯದ ಮತದಾರರು ಮೊದಲ ಬಾರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಮತ ಹಕ್ಕು ಚಲಾಯಿಸಿದ್ದಾರೆ.

ಸೂಪರ್ ಗುರುವಾರ:
ಹಾಗೆ ನೋಡಿದರೆ ದೇಶದಲ್ಲಿ ನಡೆದ 5ನೇ ಹಂತದ ಚುನಾವಣೆ ನಿರ್ಣಾಯಕವಾಗಿದೆ. ಅತಿ ಹೆಚ್ಚು ಸ್ಥಾನಗಳಿಗೆ (121) ಅಂದು ಮತದಾನ ನಡೆದಿದೆ. ಮುಂದಿನ ಪ್ರಧಾನಿ ಎಂದೇ ಬಿಂಬಿತರಾಗಿರುವ ನರೇಂದ್ರ ಮೋದಿ ಅವರ ಬಿಜೆಪಿ ಪಕ್ಷಕ್ಕೆ ಅಧಿಕ ಮತದಾನವಾಗಿರುವುದು ವರವಾಗುವ ಸಾಧ್ಯತೆಯಿದೆ. ಕರ್ನಾಟಕ ಅಂತಲೇ ಅಲ್ಲ ಅಂದು ಚುನಾವಣೆ ನಡೆದ ಮಹಾರಾಷ್ಟ್ರ ಮತ್ತು ರಾಜಸ್ಥಾನಗಳಲ್ಲೂ ಮತದಾನ ಪ್ರಮಾಣ ಆಶಾದಾಯಕವಾಗಿದೆ. ಹಾಗಾಗಿ ಬಿಜೆಪಿ ಈ 121 ಕ್ಷೇತ್ರಗಳಲ್ಲಿ ಹೆಚ್ಚು ಸ್ಥಾನ ಗಳಿಸುವ ಆಶಾಭಾವ ಹೊಂದಿದೆ.

high-polling-in-karnataka-could-be-comfort-for-modi-led-bjp
India Shining ವೈಫಲ್ಯ: ಆದರೆ ದೀರ್ಘ ಕಾಲ ಚುನಾವಣೆ ನಡೆದರೆ ಮುಂಚೂಣಿಯಲ್ಲಿರುವ ಪಕ್ಷಕ್ಕೆ ಹೆಚ್ಚು ಸವಾಲಿನದ್ದು ಮತ್ತು ತ್ರಾಸದಾಯಕವಾಗಿರುತ್ತದೆ. 2004ರಲ್ಲಿ ಏನಾಗಿತ್ತೆಂದರೆ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಬಿಜೆಪಿ ಮುಂಚೂಣಿ ಪಕ್ಷವಾಗಿತ್ತು.

ಆರಂಭದ ಹಂತಗಳಲ್ಲಿ ನಡೆದ ಮತದಾನದಲ್ಲಿ ಪಕ್ಷ ಹೆಚ್ಚು ಸ್ಥಾನಗಳನ್ನು ಬಾಚಿಕೊಂಡಿತ್ತು. ಆದರೆ ಕೊನೆ ಕೊನೆಯ ಹಂತಗಳಲ್ಲಿ ಪಕ್ಷದ ಪ್ರದರ್ಶನ ನಿರಾಶಾದಾಯಕವಾಗಿತ್ತು. India Shining ಹೆಸರಿನಲ್ಲಿ ಮಿಂಚುತ್ತಿದ್ದ ಬಿಜೆಪಿ ಕೊನೆಯವರೆಗೂ ಮತದಾರನ ಒಲವನ್ನು ಹಿಡಿದಿಡುವಲ್ಲಿ ವಿಫಲವಾಯಿತು. ಅತಿ ಆತ್ಮವಿಶ್ವಾಸವೂ ಪಕ್ಷಕ್ಕೆ ಮುಳುವಾಯಿತು.

ಈ ವೈಫಲ್ಯಗಳನ್ನು ಬಿಜೆಪಿ ಈ ಬಾರಿ ಆದ್ಯವಾಗಿ ಗಮನದಲ್ಲಿಟ್ಟುಕೊಂಡಿದೆ. ಆದ್ದರಿಂದ ಪ್ರತಿ ಹಂತದ ಚುನಾವಣೆಗೂ ಮುನ್ನ ಮತದಾರನ ಒಲವನ್ನು ಹಿಡಿದಿಟ್ಟುಕೊಳ್ಳಲು ವಿಶೇಷ ಪ್ರಚಾರ ಯೋಜನೆಗಳನ್ನು ಕಾರ್ಯಗತಗೊಳಿಸುತ್ತಿದೆ. ಇದು ಕರ್ನಾಟಕದಲ್ಲಿ ಫಲಪ್ರದವಾಗಿದೆ. ಹಾಗಾಗಿ ರಾಜ್ಯದಲ್ಲಿ ಮತದಾನ ಪ್ರಮಾಣ ಹೆಚ್ಚಾಗಿರುವುದು ತನಗೆ ಹಿತಕರವಾಗಿದೆ ಎಂದು ಬಿಜೆಪಿ ಆಶಿಸುತ್ತಿದೆ.

English summary
Lok Sabha Election 2014 - High polling in Karnataka could be comforting for Narendra Modi-led BJP. The repeated and rigorous party appeals to voters, before every round of polling, to exercise their franchise could yeild more seats to BJP.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X