ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೊಡಗಿನಲ್ಲಿ ಮಳೆ: ಯಾವ ಜಲಾಶಯದಲ್ಲಿ ಎಷ್ಟು ನೀರಿದೆ?

By Ashwath
|
Google Oneindia Kannada News

ಬೆಂಗಳೂರು, ಜು. 23: ಕರಾವಳಿಯಲ್ಲಿ ಮಳೆಯ ಅಬ್ಬರ ಕಡಿಮೆಯಾಗಿದ್ದರೆ, ಕೊಡಗು, ಹಾಸನ,ಚಿಕ್ಕಮಗಳೂರಿನಲ್ಲಿ ವ್ಯಾಪಕ ಮಳೆಯಾಗುತ್ತಿದೆ.ಭಾರೀ ಮಳೆ ಸುರಿಯುತ್ತಿರುವ ಕಾರಣ ಕೊಡಗು ಜಿಲ್ಲೆಯ ಶಾಲಾ ಕಾಲೇಜುಗಳಿಗೆ ಮುಂಜಾಗ್ರತೆಯಾಗಿ ಬುಧವಾರ ರಜೆ ಘೋಷಿಸಲಾಗಿದೆ.

ಕೊಡಗಿನಲ್ಲಿ ಭಾರೀ ಮಳೆಯಾಗುತ್ತಿರುವುದರಿಂದ ಕಾವೇರಿ ನದಿಯು ಮೈದುಂಬಿ ಹರಿಯುತ್ತಿದ್ದು, ಹಾರಂಗಿ ಮತ್ತು ಕೆಆರ್‌ಎಸ್‌ ಜಲಾಶಗಳ ಒಳ ಹರಿವು ಹೆಚ್ಚಾಗಿದೆ. ಮೈಸೂರಿನ ಕೆಆರ್‌ಎಸ್‌‌ ಡ್ಯಾಂನ ಗರಿಷ್ಠ ಮಟ್ಟ 124 ಅಡಿಗಳಿದ್ದು, ಪ್ರಸ್ತುತ ಜಲಾಶಯದಲ್ಲಿ 103.60 ಅಡಿ ನೀರು ಸಂಗ್ರಹವಾಗಿದೆ.

ಹಾರಂಗಿ ಡ್ಯಾಂನ ಗರಿಷ್ಠ ಮಟ್ಟ 2,859 ಅಡಿಗಳಿದ್ದು, ಇಂದು ಜಲಾಶಯದಲ್ಲಿ 2856.68 ಅಡಿಗಳಷ್ಟು ನೀರಿದೆ. ಕಳೆದ ವರ್ಷ ಇದೇ ದಿನ 2854.87 ಅಡಿ ನೀರು ಸಂಗ್ರಹವಾಗಿತ್ತು. ಜಲಾಶಯದ ಒಳಹರಿವು 16,164 ಕ್ಯೂಸೆಕ್ ಇದ್ದರೆ 15,000 ಕ್ಯೂಸೆಕ್ ನೀರನ್ನು ಹೊರ ಬಿಡಲಾಗುತ್ತಿದೆ.

ನಾಪೋಕ್ಲು 60.2, ಸಂಪಾಜೆ 83.2, ಭಾಗಮಂಡಲ 73.8, ವಿರಾಜಪೇಟೆ ಕಸಬಾ 47.8, ಹುದಿಕೇರಿ 44.7, ಶ್ರೀಮಂಗಲ 20, ಪೊನ್ನಂಪೇಟೆ 83.4, ಅಮ್ಮತ್ತಿ 35, ಬಾಳೆಲೆ 12.5, ಸೋಮವಾರಪೇಟೆ ಕಸಬಾ 120.2, ಶನಿವಾರಸಂತೆ 57.6, ಶಾಂತಳ್ಳಿ 154.2, ಕೊಡ್ಲಿಪೇಟೆ 59.2, ಕುಶಾಲನಗರ 18, ಸುಂಟಿಕೊಪ್ಪ 46.1 ಮಿ.ಮೀ. ಮಳೆಯಾಗಿದೆ.

rain

ಬೆಳಗಾವಿ ವರದಿ: ಜಿಲ್ಲೆಯ ಖಾನಾಪುರ ತಾಲ್ಲೂ­ಕಿನ ಪಶ್ಚಿಮ ಭಾಗದ ಅರಣ್ಯ ಪ್ರದೇಶದಲ್ಲಿ ಸತತ ಮಳೆಯಿಂದಾಗಿ ನೇರಸಾ, ಶಿರೋಲಿ, ಪಾರವಾಡ, ಅಮಟಾ ಗ್ರಾಮ ಪಂಚಾಯ್ತಿಗಳ ವ್ಯಾಪ್ತಿಯ 20ಕ್ಕೂ ಹೆಚ್ಚು ಹಳ್ಳಿಗಳು ನಡುಗಡ್ಡೆಯಾಗಿವೆ.

ಹಾಸನ ವರದಿ: ಎರಡು ದಿನಗಳಿಂದ ಪಶ್ಚಿಮಘಟ್ಟದ ಮಲೆನಾಡು ಪ್ರದೇಶದಲ್ಲಿ ಭಾರಿ ಮಳೆಯಾಗುತ್ತಿದ್ದು, ಹಾಸನ ಜಿಲ್ಲೆಯ ಜೀವನದಿ ಹೇಮಾವತಿ ನದಿ ಸೇರಿದಂತೆ ತಾಲೂಕಿನ ಎಲ್ಲಾ ಹಳ್ಳ, ಕೊಳ್ಳಗಳಲ್ಲಿ ನೀರಿನ ಹರಿವು ಹೆಚ್ಚಾಗಿದೆ.

ಚಿಕ್ಕಮಗಳೂರು ವರದಿ: ಕಳೆದ ದಿನ ಜಿಲ್ಲೆಯಾದ್ಯಂತ ವ್ಯಾಪಕ ಮಳೆಯಾಗುತ್ತಿದ್ದು, ಚಿಕ್ಕಮಗಳೂರಿನಲ್ಲಿ 8.8 ಮಿ.ಮೀ ಮಳೆಯಾಗಿದೆ. ವಸ್ತಾರೆ 14.2, ಜೋಳದಾಳಿನಲ್ಲಿ 22, ಆಲ್ದೂರು 15.5, ಕೆ.ಆರ್ ಪೇಟೆ 8.6, ಅತ್ತಿಗುಂಡಿ 28.3, ಸಂಗಮೇಶ್ವರ ಪೇಟೆಯಲ್ಲಿ 21, ಭೈರವಳ್ಳಿ 40, ಕಳಸಾಪುರ 1.6, ಮಳಲೂರಿನಲ್ಲಿ 8 ಹಾಗೂ ದಾಸರಹಳ್ಳಿ 2 ತಾಲ್ಲೂಕಿನ ಸರಾಸರಿ 15.5 ಮಿ.ಮೀ ಮಳೆಯಾಗಿದೆ.

ಕರಾವಳಿ ವರದಿ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆ ಇಳಿಮುಖವಾಗಿದೆ. ಬೆಳ್ತಂಗಡಿಯಲ್ಲಿ ಅತೀ ಹೆಚ್ಚು 52.2 ಮಿ.ಮೀ. ಮಳೆಯಾಗಿದೆ. ಉಡುಪಿ ಜಿಲ್ಲೆಯಲ್ಲಿ ಮಳೆ ಎರಡು ದಿನದಿಂದ ಇಳಿಮುಖವಾಗಿದ್ದು ಹೊಲ ಗದ್ದೆಗಳಿಗೆ ಪ್ರವೇಶಿಸಿದ್ದ ನೆರೆ ಇಳಿಯತೊಡಗಿದೆ.

ಭಾರೀ ಮಳೆ: ಯಾವ ಜಲಾಶಯದಲ್ಲಿ ಎಷ್ಟು ನೀರಿದೆ?
ಜಲಾಶಯ ಗರಿಷ್ಠ ಮಟ್ಟ ಇಂದಿನ ನೀರಿನ ಮಟ್ಟ
ಲಿಂಗನಮಕ್ಕಿ 1819 1775.90
ಭದ್ರಾ 186 161.20
ಹಾರಂಗಿ 2,859 2856.68
ಕೆಆರ್‌ಎಸ್‌‌ 124 103.60
ಹೇಮಾವತಿ 2922 2899.25
ಕಬಿನಿ 2284 2282

* ನೀರಿನ ಮಟ್ಟ ಅಡಿಗಳಲ್ಲಿ

English summary
Heavy rain continued to lash parts of Kodagu on Tuesday. The district administration has ordered the closure of all educational institutions for one days.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X