ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮುಂದಿನ ದಾರಿ ಯಾವುದಯ್ಯ? : ದೇವೇಗೌಡ

By Mahesh
|
Google Oneindia Kannada News

ಗಳೂರು, ಆ.17: ಜಾತ್ಯಾತೀತ ಜನತಾದಳದಲ್ಲಿ ಇತ್ತೀಚೆಗೆ ನಡೆದಿರುವ ವಿದ್ಯಮಾನಗಳು, ಗೊಂದಲಗಳು, ಕಾರ್ಯಕರ್ತರಲ್ಲಿ ಮೂಡಿರುವ ಗೊಂದಲ, ಅಸಮಾಧಾನದ ಬಗ್ಗೆ ಸ್ಪಷ್ಟನೆ ನೀಡಲು ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡ ಅವರು ಸುದ್ದಿಗೋಷ್ಠಿ ನಡೆಸಿದರು. ಮುಂದಿನ ದಾರಿ ಯಾವುದಯ್ಯ ಎಂಬ ಪ್ರಶ್ನೆ ಹಲವರಲ್ಲಿ ಕಾಡುತ್ತಿದೆ ಅದಕ್ಕೆ ಉತ್ತರ ನೀಡಲು ನಾನು ಬಂದಿದ್ದೇನೆ ಎಂದರು.

'ಇಲ್ಲಿ ಭವಿಷ್ಯವಿಲ್ಲ ನಾವ್ ಬೇರೆ ಮಾರ್ಗ ಹಿಡಿತ್ತೀವಿ ಎನ್ನುವವರನ್ನು ಕಟ್ಟಿ ಹಾಕಲು ಸಾಧ್ಯವಿಲ್ಲ. ಹಣ ಮಾಡುವ ಉದ್ದೇಶವುಳ್ಳವರಿಗಾಗಿ ಎರಡು ರಾಷ್ಟ್ರೀಯ ಪಕ್ಷಗಳಿವೆ. ಎಲ್ಲಿಗೆ ಬೇಕಾದರೂ ಹೋಗಬಹುದು' ಎಂದು ಜೆಡಿಎಸ್ ರಾಷ್ಟ್ರಾಧ್ಯಕ್ಷ ಎಚ್.ಡಿ.ದೇವೇಗೌಡ ಹೇಳಿದ್ದಾರೆ.

ಹೊಂದಾಣಿಕೆ ಇಲ್ಲ: ಮೂರು ಕ್ಷೇತ್ರಗಳ ಉಪ ಚುನಾವಣೆಗೆ ಜೆಡಿಎಸ್ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದಿಲ್ಲ ಮತ್ತು ಕಾಂಗ್ರೆಸ್ ಸೇರಿದಂತೆ ಯಾವುದೇ ಪಕ್ಷಕ್ಕೆ ಬೆಂಬಲ ನೀಡುವುದಿಲ್ಲ ಎಂದರು.[ಎಚ್ಡಿಕೆ ಸಿಡಿ ವಿವಾದ, ತನಿಖೆಗೆ ರಾಷ್ಟ್ರಪತಿ ಒಪ್ಪಿಗೆ]

ಬೆಂಗಳೂರಿನ ಪಕ್ಷದ ಕಚೇರಿಯಲ್ಲಿ ಭಾನುವಾರ ಪತ್ರಿಕಾಗೋಷ್ಠಿ ನಡೆಸಿದ ಎಚ್.ಡಿ.ದೇವೇಗೌಡರು, ಶಿಕಾರಿಪುರ, ಬಳ್ಳಾರಿ ಗ್ರಾಮಾಂತರ ಮತ್ತು ಚಿಕ್ಕೋಡಿ-ಸದಲಗಾ ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಯಾವ ಪಕ್ಷಕ್ಕೂ ಜೆಡಿಎಸ್ ಬೆಂಬಲ ನೀಡುವುದಿಲ್ಲ ಎಂದು ಮತ್ತೊಮ್ಮೆ ಘೋಷಿಸಿದರು.

ದೇವೇಗೌಡ ಅವರು ಜೆಡಿಎಸ್ ವರಿಷ್ಠ ಸ್ಥಾನ ಬಿಟ್ಟು ಮಾರ್ಗದರ್ಶಕನಾಗಿ ಉಳಿಯುವುದು, ಕುಮಾರಸ್ವಾಮಿ ಅವರಿಗೆ ಮತ್ತೊಮ್ಮೆ ರಾಜ್ಯಾಧ್ಯಕ್ಷ ಪಟ್ಟ ಕಟ್ಟುವುದು. ಯುವ ನಾಯಕರನ್ನು ಮುಂದೆ ತರುವುದು, ಕಾರ್ಯಕರ್ತರ ಗೊಂದಲ ನಿವಾರಣೆಗೆ ರಾಜ್ಯಪ್ರವಾಸ ಮುತಾಂದ ವಿಷಯ ಬಗ್ಗೆ ಸ್ಪಷ್ಟ ಚಿತ್ರಣ ನಾಳೆ ಸಂಜೆ ವೇಳೆಗೆ ಸಿಕ್ಕರೆ ಅಚ್ಚರಿಯೇನಿಲ್ಲ.

ಪಕ್ಷದಿಂದ ಹೊರಹೋಗುವವರಿಗೆ ಮುಕ್ತ ಅವಕಾಶ

ಪಕ್ಷದಿಂದ ಹೊರಹೋಗುವವರಿಗೆ ಮುಕ್ತ ಅವಕಾಶ

ಪಕ್ಷ ಬಿಡುವವರನ್ನು ಯಾವುದೇ ಕಾರಣಕ್ಕೂ ತಡೆಯುವುದಿಲ್ಲ. ಉಜ್ವಲ ಭವಿಷ್ಯವಿರುವವರು ಎಲ್ಲಿ ಬೇಕಾದರೂ ಹೋಗಲಿ. ದುಡ್ಡು ಮುಖ್ಯ ಎನಿಸಿದವರು, ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಇಲ್ಲವೆ ಬಿಜೆಪಿ ಸೇರಿಕೊಳ್ಳಬಹುದು.

ನಿಷ್ಠಾವಂತ ಕಾರ್ಯಕರ್ತರು ಪಕ್ಷದಲ್ಲಿರಲಿ. ಹೋಗುವವರು ಮತ್ತು ಬರುವವರಿಗೆ ಪಕ್ಷದ ಬಾಗಿಲು ಸದಾ ತೆರೆದಿರುತ್ತದೆ. ಆಯ್ಕೆ ಮಾಡಿಕೊಳ್ಳುವುದು ನಿಮಗೆ ಬಿಟ್ಟಿದ್ದು.

ನಮ್ಮ ಪಕ್ಷಕ್ಕೆ ಹಣ ಕೊಡುವವರು ಯಾರು ಇಲ್ಲ, ಆ ಎರಡೂ ಪಕ್ಷಗಳಿಗೆ ಎಲ್ಲಿಂದ ಹಣ ಬರುತ್ತದೇ ಎಂಬುದನ್ನು ನಾನು ವಿವರಿಸಬೇಕಾಗಿಲ್ಲ. ನಮ್ಮ ಪಕ್ಷದಿಂದಲೇ ಹೊರಹೋದವರು ಈಗ ನಾನು ಮುಖ್ಯಮಂತ್ರಿಯಾಗಿದ್ದೇನೆ ಎಂದು ಮಾತನಾಡುತ್ತಾರೆ ಎಂದು ಸಿದ್ದರಾಮಯ್ಯ ಅವರನ್ನು ಕೆಣಕಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ತೀವ್ರ ವಾಗ್ದಾಳಿ

ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ತೀವ್ರ ವಾಗ್ದಾಳಿ

* ನಮ್ಮ ಪಕ್ಷದಿಂದ ಬೆಳೆದವರು ಈಗ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ವಿಧಾನ ಪರಿಷತ್‍ನಲ್ಲಿ ಸಿದ್ದರಾಮಯ್ಯ, ಪರಿಷತ್ ಸದಸ್ಯರಾದ ಸಂದೇಶ್ ನಾಗರಾಜ್ ಮತ್ತು ವಿ.ಸೋಮಣ್ಣ ಅವರನ್ನು ಬಹಿರಂಗವಾಗಿಯೇ ಪಕ್ಷಕ್ಕೆ ಸೇರ್ಪಡೆಯಾಗುವಂತೆ ಆಹ್ವಾನಿಸುತ್ತಾರೆ.

* ಜೆಡಿಎಸ್ ನಲ್ಲಿದ್ದಾಗ ಎಲ್ಲವನ್ನೂ ಅನುಭವಿಸಿರುವ ಅವರು ಈಗ ನಾನು ಕಾಂಗ್ರೆಸ್ಸಿಗೆ ಬಂದು ಮುಖ್ಯಮಂತ್ರಿಯಾಗಿದ್ದೇನೆ. ನೀವು ಆ ಪಕ್ಷದಲ್ಲಿ ಉಳಿದು ಏನು ಮಾಡುತ್ತೀರಿ ಎಂದು ಕೇಳುತ್ತಿದ್ದಾರೆ. ಕಾಲ ಎಲ್ಲವನ್ನೂ ತೀರ್ಮಾನಿಸುತ್ತದೆ ಎಂದರು.

ಉಪ ಚುನಾವಣೆ ಹೊಂದಾಣಿಕೆ ಇಲ್ಲ ಸ್ಪಷ್ಟನೆ

ಉಪ ಚುನಾವಣೆ ಹೊಂದಾಣಿಕೆ ಇಲ್ಲ ಸ್ಪಷ್ಟನೆ

* ಕೆಲವರು ಪಕ್ಷ ಉಳಿಸಲು ಸ್ಥಳೀಯ ಮಟ್ಟದ ಹೊಂದಾಣಿಕೆ ಎಂದು ಹೇಳಿಕೊಳ್ಳುತ್ತಿದ್ದಾನೆ. ನಾನಾಗಲಿ, ಕುಮಾರಸ್ವಾಮಿಯವರಾಗಲಿ ಕಾಂಗ್ರೆಸ್ಸಿಗೆ ಬೆಂಬಲ ಕೊಡುವಂತೆ ಸೂಚನೆ ನೀಡಿಲ್ಲ ಎಂದು ಸ್ಪಷ್ಟಪಡಿಸಿದರು.

* ಯಾವ ಯಾವ ಪಕ್ಷ ಎಷ್ಟರ ಮಟ್ಟಿಗೆ ಭ್ರಷ್ಟಾಚಾರ ನಡೆಸಿದೆ ಎಂಬುದು ನನಗೆ ಗೊತ್ತು. ಕುಮಾರಸ್ವಾಮಿ ಮಾಡಿದ ಆರೋಪವನ್ನೇ ಮುಂದಿಟ್ಟುಕೊಂಡು ಕೆಲವರು ಬೊಬ್ಬೆ ಹೊಡೆಯುತ್ತಿದ್ದಾರೆ. ಸಂಸತ್ತಿನಲ್ಲಿ ಹಣದ ಕಂತೆಯನ್ನು ತಂದಿಟ್ಟು ದೇಶದ ಇತಿಹಾಸಕ್ಕೆ ಮಸಿ ಬಳಿದವರಿಂದ ನಾನು ಪಾಠ ಕಲಿಯಬೇಕಾದ ಅಗತ್ಯವಿಲ್ಲ ಎಂದು ಎಚ್ಚರಿಸಿದರು.

ನಿಷ್ಠಾವಂತರ ಸಮಾವೇಶ ನಡೆಯಲಿದೆ

ನಿಷ್ಠಾವಂತರ ಸಮಾವೇಶ ನಡೆಯಲಿದೆ

ಪಕ್ಷದ ಸಂಘಟನೆ, ರಾಜ್ಯಾಧ್ಯಕ್ಷರ ನೇಮಕಾತಿ ಸೇರಿದಂತೆ ಇತ್ತೀಚೆಗೆ ಪಕ್ಷದಲ್ಲಿ ಉಂಟಾಗಿರುವ ಗೊಂದಲಗಳ ಬಗ್ಗೆ ಚರ್ಚಿಸಲು ಜೆಡಿಎಸ್ ಸೋಮವಾರ ಅರಮನೆ ಮೈದಾನದಲ್ಲಿ ನಿಷ್ಠಾವಂತ ಕಾರ್ಯಕರ್ತರ ಸಮಾವೇಶ ನಡೆಸಲಿದೆ.

ಗ್ರಾಮ ಪಂಚಾಯ್ತಿ, ತಾಲೂಕು ಪಂಚಾಯ್ತಿ, ಜಿಲ್ಲಾ ಪಂಚಾಯ್ತಿ, ಪುರಸಭೆ, ಪಟ್ಟಣ ಪಂಚಾಯ್ತಿ, ನಗರಸಭೆ, ಪಾಲಿಕೆ, ಶಾಸಕರು, ಸಂಸದರು, ಚುನಾವಣೆಯಲ್ಲಿ ಗೆದ್ದವರು, ಪರಾಭವಗೊಂಡವರು, ಮಾಜಿ ಶಾಸಕರು, ಮಾಜಿ ಸಚಿವರು ಸೇರಿದಂತೆ ಪದಾಧಿಕಾರಿಗಳಿಗೆ ಆಹ್ವಾನ ನೀಡಲಾಗಿದೆ. ಸಭೆಯೊಳಗೆ ಮುಕ್ತ ಚರ್ಚೆ ನಡೆಸುವುದಾಗಿ ಹೇಳಿದರು

ಹಾಸನದಲ್ಲಿ ನೆಲೆಸಲು ನಿರ್ಧಾರವೇಕೆ?

ಹಾಸನದಲ್ಲಿ ನೆಲೆಸಲು ನಿರ್ಧಾರವೇಕೆ?

ನನ್ನ ರಾಜಕೀಯ ಬೆಳವಣಿಗೆಗೆ ಹಾಸನ ಜಿಲ್ಲೆಯ ಜನತೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ಅದಕ್ಕಾಗಿ ಇನ್ನು ಮುಂದೆ ವಾರದ ನಾಲ್ಕು ದಿನಗಳಲ್ಲಿ ಹಾಸನದಲ್ಲಿ ವಾಸ್ತವ್ಯ ಮಾಡುವುದಾಗಿ ಹೇಳಿದರು. ಹಾಸನದಲ್ಲಿ ವಾಸಕ್ಕಾಗಿ ಒಂದು ಮನೆ, ಅಡುಗೆಯವ ಮತ್ತು ಟೈಪ್ ರೈಟರ್ ಇರುತ್ತಾರೆ. ಕಾರ್ಯಕರ್ತರಾಗಲಿ, ಮತದಾರರಾಗಲಿ ನನ್ನನ್ನು ಹುಡುಕಿಕೊಂಡು ಬೆಂಗಳೂರಿಗೆ ಬರಬಾರದೆಂಬ ಸದುದ್ದೇಶದಿಂದ ಈ ಕ್ರಮ ಕೈಗೊಂಡಿದ್ದೇನೆ ಎಂದರು.

ನನ್ನ ಬಗ್ಗೆ ಅನುಕಂಪ ತೋರಿಸಬೇಕಾಗಿಲ್ಲ

ನನ್ನ ಬಗ್ಗೆ ಅನುಕಂಪ ತೋರಿಸಬೇಕಾಗಿಲ್ಲ

ನಾಲ್ಕು ದಿನ ಹಾಸನದಲ್ಲಿದ್ದರೆ, ಉಳಿದ ಮೂರು ದಿನ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಹೊರ ಭಾಗಗಳಿಗೆ ತೆರಳುತ್ತೇನೆ ಎಂದು ಮಾಹಿತಿ ನೀಡಿದರು. ನನ್ನ ಬಗ್ಗೆ ಯಾರೂ ಅನುಕಂಪ ತೋರಿಸಬೇಕಾದ ಅಗತ್ಯವಿಲ್ಲ. ನಾನು ಪಕ್ಷವನ್ನು ಸಂಘಟಿಸಲು ರಾಜ್ಯಾದ್ಯಂತ ಪ್ರವಾಸ ಕೈಗೊಳ್ಳುತ್ತೇನೆ.

ಬರುವವರು ಬರಲಿ, ಬಿಡುವವರು ಬಿಡಲಿ. ಐದು ದಶಕಗಳ ರಾಜಕಾರಣದಲ್ಲಿ ಯಾರೊಬ್ಬರನ್ನು ನಂಬಿಕೊಂಡು ರಾಜಕಾರಣ ನಡೆಸಿಲ್ಲ ಎಂದು ಗುಡುಗಿದರು.

ದೇವೇಗೌಡರ ಬಳಿ ಶಕ್ತಿಯಿಲ್ಲ, ಹಣವೂ ಇಲ್ಲ ಎಂದು ಕೆಲವರು ಅಂದುಕೊಂಡಿರಬಹುದು. 50 ವರ್ಷಗಳ ರಾಜಕೀಯದಲ್ಲಿ ನಾನು ಹಣದಿಂದಲೇ ಪಕ್ಷ ಕಟ್ಟಿದವನಲ್ಲ. ಕಾರ್ಯಕರ್ತರ ಜತೆ ಹೆಗಲಿಗೆ ಹೆಗಲು ಕೊಟ್ಟು ಪಕ್ಷ ಬೆಳೆಸಿದ್ದೇನೆ. ಜೆಡಿಎಸ್ ಉಳಿಸಲು ಯಾವ ತ್ಯಾಗಕ್ಕೂ ಸಿದ್ಧ ಎಂದರು.

English summary
Bangalore: HD Deve Gowda convened the news conference on Sunday here to convey that his party was here to stay. But, he said those who want to make money can join two national parties present in the state. I will stay in Hassan and will Integrate the Party.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X