ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಎಚ್ಎಎಲ್ ನಲ್ಲಿ ಮತ್ತೆ ಸಾರ್ವಜನಿಕ ವಿಮಾನಯಾನ?

By Mahesh
|
Google Oneindia Kannada News

ಬೆಂಗಳೂರು, ಸೆ.14: ಎಚ್‍ಎಎಲ್ ವಿಮಾನ ನಿಲ್ದಾಣವನ್ನು ಸಾರ್ವಜನಿಕ ಉದ್ದೇಶಕ್ಕೆ ಬಳಸುವ ಅಗತ್ಯ ಈಗ ಹೆಚ್ಚಾಗಿದೆ ಈ ಬಗ್ಗೆ ಗಮನ ಹರಿಸಿ ಎಂದು ಎಚ್ಎಎಲ್ ನಿರ್ದೇಶಕ ಆರ್.ಕೆ ತ್ಯಾಗಿ ಮಾಡಿದ ಮನವಿಗೆ ಸಿಎಂ ಸಿದ್ದರಾಮಯ್ಯ ಒಪ್ಪಿಗೆ ಸೂಚಿಸಿ ತಲೆಯಾಡಿಸಿದ್ದಾರೆ. ಈ ಬಗ್ಗೆ ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯದ ಜೊತೆ ಮಾತುಕತೆ ನಡೆಸುವ ಭರವಸೆ ನೀಡಿದ್ದಾರೆ.

ಬೆಂಗಳೂರಿನಲ್ಲಿ ಭಾರತೀಯ ವಿಮಾನಯಾನ ತಂತ್ರಜ್ಞಾನ, ಕೈಗಾರಿಕೆಗಳ 23ನೇ ವಾರ್ಷಿಕೋತ್ಸವ(Society for Indian Aerospace Technologies and Industries) ಸಮಾರಂಭದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಮುಂದೆ ಹೀಗೊಂದು ಪ್ರಸ್ತಾವನೆಯನ್ನು ಹಿಂದೂಸ್ತಾನ್ ಏರೋನಾಟಿಕ್ಸ್ ಲಿ. ನಿರ್ದೇಶಕ ತ್ಯಾಗಿ ಅವರು ಮುಂದಿಟ್ಟರು.

ಇದಕ್ಕೆ ಪ್ರತಿಕ್ರಿಯಿಸಿದ ಕೇಂದ್ರ ವಿಮಾನಯಾನ ರಾಜ್ಯಸಚಿವ ಜಿ.ಎಂ.ಸಿದ್ದೇಶ್ವರ್ , ರಾಜ್ಯ ಸರ್ಕಾರ ಅಗತ್ಯ ಭೂಮಿ ನೀಡಿದರೆ ಲಘು ವಿಮಾನ ಹಾರಾಟಕ್ಕೆ ಎಲ್ಲಾ ರೀತಿಯ ವ್ಯವಸ್ಥೆ ಮಾಡಲಾಗುವುದು ಎಂದರು. ಇದಲ್ಲದೆ, ಹುಬ್ಬಳ್ಳಿ, ಬೆಳಗಾವಿ ವಿಮಾನ ನಿಲ್ದಾಣವನ್ನು ಮೇಲ್ದರ್ಜೆಗೇರಿಸಲಾಗುವುದು ಎಂದು ಅವರು ಹೇಳಿದರು.

HAL chief wants old airport in Bangalore reopened, CM Siddu assurance

ಎಚ್ಎಎಲ್ ವಿಮಾನ ನಿಲ್ದಾಣ ಅಗತ್ಯವೇನು?: ಎಚ್ಎಎಲ್ ವಿಮಾನ ನಿಲ್ದಾಣದ ಬಗ್ಗೆ ವಿವರಿಸಿದ ತ್ಯಾಗಿ ಅವರು, ಕೆಂಪೇಗೌಡ ವಿಮಾನ ನಿಲ್ದಾಣ ಆರಂಭಗೊಂಡ ಆರು ವರ್ಷಗಳಲ್ಲೇ ಲಾಭದಾಯಕವಾಗಿ ಬೆಳೆದಿದೆ. ಖಾಸಗಿ ಸಹಭಾಗಿತ್ವದಲ್ಲಿ ಬೆಂಗಳೂರಿನಲ್ಲಿ ಮತ್ತೊಂದು ದೇಶಿ ವಿಮಾನ ಹಾರಾಟಕ್ಕಾಗಿ ಪ್ರತ್ಯೇಕ ವಿಮಾನ ನಿಲ್ದಾಣ ಬೇಕಿದೆ.

ಲಂಡನ್ನಿನಲ್ಲಿ ನಾಲ್ಕು ವಿಮಾನ ನಿಲ್ದಾಣವಿದ್ದರೆ, ನ್ಯೂ ಯಾರ್ಕ್ ನಲ್ಲಿ ಆರು ವಿಮಾನ ನಿಲ್ದಾಣವಿದೆ. ಹೆಚ್ಚು ವಿಮಾನ ನಿಲ್ದಾಣದಿಂದ ಆರ್ಥಿಕ ಬೆಳವಣಿಗೆ ಸಾಧ್ಯ. ಬೆಂಗಳೂರಿನಲ್ಲಿ ವಿಮಾನಯಾನ ಸಂಚಾರ ದಟ್ಟಣೆ ಅಧಿಕವಾಗಿರುವುದು ಸುಳ್ಳಲ್ಲ ಎಂದರು, ಕಳೆದ ಐದು ವರ್ಷಗಳಲ್ಲಿ ಎಚ್ಎಎಲ್ ವಿಮಾನ ನಿಲ್ದಾಣ ಸುಮಾರು 1,200 ಕೋಟಿ ರು ನಷ್ಟ ಅನುಭವಿಸಿದೆ.

ಮಾರ್ಚ್ 23,2008ರಂದು ವಾಣಿಜ್ಯ ಉದ್ದೇಶಿತ ವಿಮಾನಯಾನವನ್ನು ಎಚ್ಎಎಲ್ ವಿಮಾನ ನಿಲ್ದಾಣದಲ್ಲಿ ನಿಲ್ಲಿಸಲಾಯಿತು. ಸರ್ಕಾರ ಹಾಗೂ ಈ ಹಿಂದಿನ ಬಿಐಎಎಲ್(ಈಗಿನ ಕೆಐಎ) ನಡುವೆ ಆದ ಒಪ್ಪಂದದ ಪ್ರಕಾರ ದೇವನಹಳ್ಳಿ ವಿಮಾನ ನಿಲ್ದಾಣದಿಂದ 150 ಕಿ.ಮೀ ವ್ಯಾಪ್ತಿ ಪ್ರದೇಶದಲ್ಲಿ ಮತ್ತೊಂದು ವಾಣಿಜ್ಯ ಉದ್ದೇಶಿತ ವಿಮಾನ ನಿಲ್ದಾಣ ತಲೆ ಎತ್ತುವಂತಿಲ್ಲ. ಪರಿಸ್ಥಿತಿ ಹೀಗಿದ್ದರೂ ಎಚ್ಎಎಲ್ ನಲ್ಲಿ ನಾಗರಿಕ ವಿಮಾನಯಾನ ಸಾಧ್ಯವೇ? ದೇಶಿ ವಿಮಾನಯಾನಕ್ಕೆ ಮಾತ್ರ ಒಪ್ಪಿಗೆ ಸೂಚಿಸಬಹುದೇ? ಎಚ್ಎಎಲ್ ವಿಮಾನ ನಿಲ್ದಾಣ ಸುರಕ್ಷಿತವಾಗಿದೆಯೇ? ಎಂಬ ಪ್ರಶ್ನೆಗಳು ಎದ್ದಿವೆ. ವಾಣಿಜ್ಯ ಉದ್ದೇಶಕ್ಕೆ ಬಳಕೆಯಾಗದಿದ್ದರೆ ಎಚ್ಎಎಲ್ ವಿಮಾನ ನಿಲ್ದಾಣ ಕೂಡಾ ಐಟಿಐ, ಎಚ್ಎಂಟಿ ಸಂಪೂರ್ಣ ಬಂದ್ ಆಗುವ ದಿನವನ್ನು ನಿರೀಕ್ಷಿಸಬಹುದು.

English summary
It is time the HAL airport in Bangalore is reopened for civil operations, HAL Chairman R.K. Tyagi urged the Union and State governments. CM Siddaramaiah gave assurance that his government will discuss the matter with Union Civil Aviation Ministry.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X