ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಎಟಿಎಂ ದರೋಡೆ, ಸಾವು ಬದುಕಿನ ನಡುವೆ ಗಾರ್ಡ್

By Mahesh
|
Google Oneindia Kannada News

ಬೆಂಗಳೂರು, ಜು.12: ಕಾರ್ಪೊರೇಷನ್ ಬ್ಯಾಂಕ್ ಎಟಿಎಂ ಕೇಂದ್ರದಲ್ಲಿ ಮತ್ತೊಮ್ಮೆ ಹಲ್ಲೆ ನಡೆದಿದೆ. ದುಷ್ಕರ್ಮಿಗಳ ಗುಂಪೊಂದು ಶುಕ್ರವಾರ ತಡರಾತ್ರಿ ನಡೆಸಿದ ಎಟಿಎಂ ಕಳುವು ಯತ್ನ ವಿಫಲಗೊಂಡಿದೆ. ದುಷ್ಕರ್ಮಿಗಳನ್ನು ತಡೆಯುವ ಯತ್ನದಲ್ಲಿ ಹಲ್ಲೆಗೊಳ್ಳಲಾದ ಸೆಕ್ಯುರಿಟಿ ಗಾರ್ಡ್ ಈಗ ಜೀವನ್ಮರಣ ಹೋರಾಟ ನಡೆಸಿದ್ದಾನೆ.

ನಗರದ ಎಚ್.ಎಸ್.ಆರ್ ಲೇಔಟ್ ನಲ್ಲಿರುವ ಕಾರ್ಪೊರೇಷನ್ ಬ್ಯಾಂಕ್ ಎಟಿಎಂ ಕೇಂದ್ರಕ್ಕೆ ಲಗ್ಗೆ ಇಟ್ಟ ದುಷ್ಕರ್ಮಿಗಳ ಗುಂಪು ಹಾರೆ ಮೂಲಕ ಎಟಿಎಂ ಕೇಂದ್ರದ ಬಾಗಿಲು ಮುರಿಯಲು ಯತ್ನಿಸಿದ್ದಾರೆ. ಈ ಸಂದರ್ಭದಲ್ಲಿ ಸೆಕ್ಯುರಿಟಿ ಗಾರ್ಡ್ ಷಂಶುಲ್ ದುಷ್ಕರ್ಮಿಗಳಿಗೆ ತಡೆಯೊಡ್ಡಿದ್ದಾರೆ.

ಸೆಕ್ಯುರಿಟಿ ಗಾರ್ಡ್ ಮೇಲೆ ಹಾರೆಯಿಂದ ಹಲ್ಲೆ ಮಾಡಿದ್ದಾರೆ. ನಂತರ ದುಷ್ಕರ್ಮಿಗಳ ತಂಡ ಎಟಿಎಂ ಒಡೆಯಲು ಯತ್ನಿಸಿ ವಿಫಲವಾಗಿದೆ. ಹಲ್ಲೆಗೊಳಗಾಗಿ ನೋವಿನಿಂದ ಚೀರುತ್ತಿದ್ದ ಸೆಕ್ಯುರಿಟಿ ಗಾರ್ಡ್ ಮೇಲೆ ಮತ್ತೊಮ್ಮೆ ಹಾರೆಯಿಂದ ಹೊಡೆದು ಅಲ್ಲಿಂದ ತಂಡ ಪರಾರಿಯಾಗಿದೆ ಎಂದು ತಿಳಿದು ಬಂದಿದೆ.

Security guard prevents Corporation Bank ATM loot, Bangalore

ಘಟನೆ ಬಗ್ಗೆ ಇನ್ನೂ ವಿವರಗಳು ತಿಳಿದು ಬಂದಿಲ್ಲ, ಷಂಶುಲ್ ಅವರು ಎಟಿಎಂ ಕಳುವು ಯತ್ನವನ್ನು ತಪ್ಪಿಸಲು ಹೋರಾಟ ನಡೆಸಿ ತೀವ್ರವಾಗಿ ಹಲ್ಲೆಗೊಳಗಾಗಿದ್ದಾರೆ. ಸದ್ಯ ಅವರನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಎಚ್ಎಸ್ ಆರ್ ಪೊಲೀಸ್ ಠಾಣಾಧಿಕಾರಿ ಹೇಳಿದ್ದಾರೆ. ಘಟನಾ ಸ್ಥಳಕ್ಕೆ ಆಗ್ನೇಯ ವಲಯದ ಡಿಸಿಪಿ ಟಿಡಿ ಪವಾರ್ ಅವರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

ಜ್ಯೋತಿ ಯಾದವ್ ಹಲ್ಲೆ ಪ್ರಕರಣ: ನಗರ ಜೆ.ಸಿ.ರಸ್ತೆಯ ಕಾರ್ಪೊರೇಷನ್ ಬ್ಯಾಂಕ್ ಎಟಿಎಂ ಕೇಂದ್ರದಲ್ಲಿ ಹಲ್ಲೆಗೊಳಗಾಗಿದ್ದ ಜ್ಯೋತಿ ಉದಯ್ ಈಗ ಆರೋಗ್ಯವಾಗಿದ್ದು, ಬ್ಯಾಂಕ್ ಉದ್ಯೋಗಕ್ಕೆ ಎಂದಿನಂತೆ ಹಾಜರಾಗುತ್ತಿದ್ದಾರೆ. ಆದರೆ, ಜ್ಯೋತಿ ಮೇಲೆ ಹಲ್ಲೆ ಮಾಡಿದ ದುಷ್ಕರ್ಮಿ ಮಾತ್ರ ಇನ್ನೂ ಪತ್ತೆಯಾಗಿಲ್ಲ.

ಕಳೆದ ನವೆಂಬರ್ 19 ರಂದು ಬೆಳಗ್ಗೆ 7.15 ರ ಸುಮಾರಿಗೆ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಯನ್ನು ಪುನಃ ನವೀಕರಿಸಲಾಗಿದೆ. 10 ಸಬ್ ಇನ್ಸ್ ಪೆಕ್ಟರ್, 8 ಇನ್ಸ್ ಪೆಕ್ಟರ್ ಹಾಗೂ ಸೈಬರ್ ತಜ್ಞರುಳ್ಳ ವಿಶೇಷ ತಂಡವೊಂದನ್ನು ರಚಿಸಲಾಗಿದೆ.

ಬಳ್ಳಾರಿ, ಕೋಲಾರ, ಬೆಂಗಳೂರು ಗ್ರಾಮಾಂತರ, ಕರ್ನಾಟಕ ಹಾಗೂ ಆಂಧ್ರಪ್ರದೇಶ ಗಡಿ ಭಾಗದಲ್ಲಿ ಹಲ್ಲೆಕೋರನಿಗಾಗಿ ಶೋಧ ಕಾರ್ಯ ಮುಂದುವರೆದಿದೆ ಎಂದು ಬೆಂಗಳೂರು ನಗರ ಪೊಲೀಸರು ಹೇಳಿದ್ದಾರೆ.

English summary
A Security guard tried to resist the robbery bid at Corporation Bank ATM HSR Layout Friday late night, Bangalore. Robbers managed to flee after assaulting him, Bangalore police said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X