ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಹಾನಗರದ ಚಿಂತೆ ಬಿಡಿ, ಮಳವಳ್ಳಿ ಕಡೆ ರಸ್ತೆ ಹಿಡಿ

|
Google Oneindia Kannada News

ಬೆಂಗಳೂರು, ಸೆ. 5: ಮಹಾನಗರದ ಜಂಜಾಟಗಳಿಂದ, ಪ್ರತಿದಿನದ ಕೆಲಸದ ಒತ್ತಡದಿಂದ ಮೈ ಜಿಡ್ಡುಟ್ಟಿದಂತಾಗಿದೆಯೇ? ವಾರಾಂತ್ಯದಲ್ಲಿ ಯಾವುದು ವಿಶೇಷ ಸಂಗತಿಗಳಿಲ್ಲ ಎಂದೆನಿಸುತ್ತಿದೆಯೇ? ಹಾಗಾದರೆ ಚಿಂತೆ ಬಿಡಿ, ಮಂಡ್ಯ ಮಳವಳ್ಳಿ ಕಡೆ ರಸ್ತೆ ಹಿಡೀರಿ.

ಹೌದು.. ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಗಗನಚುಕ್ಕಿ ಜಲಪಾತ ಸೆ. 6 ಮತ್ತು 7ರಂದು(ಶನಿವಾರ, ಭಾನುವಾರ) ಝಗಮಗಿಸಲಿದೆ. ಜಲಪಾತ 5ನೇ ವರ್ಷದ ಜಲಪಾತೋತ್ಸವಕ್ಕೆ ಸಿದ್ಧವಾಗುತ್ತಿದ್ದು ಲೇಸರ್‌ ಬೆಳಕು ಮತ್ತು ವಿದ್ಯುತ್‌ ಕಿರಣಗಳು ಅಂದವನ್ನು ಇಮ್ಮಡಿಗೊಳಿಸಲಿವೆ.(ಭರಚುಕ್ಕಿ ಮತ್ತು ಗಗನಚುಕ್ಕಿ ಜಲಪಾತಗಳು, ಶಿವನಸಮುದ್ರ)

gaganachukii

ಈ ಬಾರಿ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಕಳೆದ ಸಾರಿ ಮಳೆ ಬಂದು ಅಡಚಣೆ ಉಂಟಾದ ಹಿನ್ನೆಲೆಯಲ್ಲಿ ಜಲನಿರೋಧಕ ವೇದಿಕೆ ನಿರ್ಮಿಸಲಾಗಿದೆ, ಜಲಪಾತದ ಬಳಿ ನಿರ್ಮಾಣವಾಗಿರುವ 'ಶಿವ ವೇದಿಕೆ'ಯಲ್ಲಿ ಮನರಂಜನೆ ಕಾರ್ಯಕ್ರಮಗಳು ನಡೆಯಲಿವೆ.

ಒಂದೆಡೆ ಬೆಳಕಿನ ಚಿತ್ತಾರ, ಇನ್ನೊಂದೆಡೆ ಇಂಪಾದ ಸಂಗೀತ ಕಣ್ಮನಗಳಿಗೆ ಮುದ ನೀಡಲಿದ್ದು, ಬಾಣ ಬಿರುಸುಗಳ ಪ್ರದರ್ಶನವು ನಡೆಯಲಿದೆ.

ಸುಲಭ ಸಾರಿಗೆ ವ್ಯವಸ್ಥೆ
ಪ್ರವಾಸಿಗರ ಅನುಕೂಲಕ್ಕಾಗಿ ಮಂಡ್ಯ, ಮೈಸೂರು, ಮಳವಳ್ಳಿ ತಾಲೂಕಿನ ವಿವಿಧ ಹೋಬಳಿಗಳಿಂದ ಬಸ್‌ ಸೌಲಭ್ಯ ಕಲ್ಪಿಸಲಾಗಿದೆ. ಬೆಂಗಳೂರಿನಿಂದ ತೆರಳುವವರು ಮದ್ದೂರು ಮಾರ್ಗವಾಗಿ ಮಳವಳ್ಳಿ ಸೇರಬಹುದು. ಅಲ್ಲದೇ ಪ್ರವಾಸಿಗರಿಗೆ ಜಲಪಾತೋತ್ಸವದ ಎರಡು ದಿನ ಉಚಿತ ಲಘು ಉಪಹಾರದ ವ್ಯವಸ್ಥೆ ಮಾಡಲಾಗಿದೆ.

ಸುಮಾರು 270 ಅಡಿ ಎತ್ತರದಿಂದ ಧುಮ್ಮಿಕ್ಕುವ ಕಾವೇರಿ ನದಿ ನೀರನ್ನು ಬೆಳಕು ಮತ್ತು ಸಂಗೀತದ ಸಂಯೋಜನೆಯಲ್ಲಿ ಆಸ್ವಾದಿಸಲು ಉತ್ತಮ ಅವಕಾಶವೊಂದು ಎದುರಾಗಿದೆ. ಪ್ರವಾಸಿಗರಿಗೆ ಇದೊಂದು ವಿನೂತನ ರೀತಿಯ ಅನುಭವ ನೀಡುವುದರಲ್ಲಿ ಅನುಮಾನವಿಲ್ಲ ಎಂದೇ ಹೇಳಬಹುದು.

English summary
Beautiful Gaganachukki water falls which is located in Mandya district, Malavalli taluk ready for Two days celebration of Laser Show. The State Government conducting this programme.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X