ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೋದಿಯಿಂದ ಭಾರತಕ್ಕೆ ಯುದ್ಧ ಭೀತಿ ಶುರು: ಮೊಯ್ಲಿ

By Mahesh
|
Google Oneindia Kannada News

ಬೆಂಗಳೂರು, ಅ.2: ಭಾರತ ಅನುಸರಿಸುತ್ತಾ ಬಂದಿರುವ ಅಲಿಪ್ತ ನೀತಿ, ವಿದೇಶಾಂಗ ನೀತಿಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರು ಗಾಳಿಗೆ ತೂರುತ್ತಿದ್ದಾರೆ ಇದರಿಂದ ಗಡಿಭಾಗದಲ್ಲಿ ಈ ಹಿಂದೆಗಿಂತಲೂ ಹೆಚ್ಚಿನ ಆಕ್ರಮಣಗಳು ಕಂಡು ಬಂದಿವೆ ಒಟ್ಟಾರೆ ಯುದ್ಧ ಭೀತಿ ಆವರಿಸಿದೆ ಎಂದು ಕೇಂದ್ರದ ಮಾಜಿ ಸಚಿವ ವೀರಪ್ಪ ಮೊಯ್ಲಿ ಅಭಿಪ್ರಾಯಪಟ್ಟಿದ್ದಾರೆ.

ನರೇಂದ್ರ ಮೋದಿ ಅವರು ಜಪಾನ್ ಪ್ರವಾಸ ಕೈಗೊಂಡು ಚೀನಾದ ಆಕ್ರಮಣ ಬಗ್ಗೆ ಟೀಕೆ ಮಾಡಿದ್ದಾರೆ. ಅಮೆರಿಕ ಪ್ರವಾಸದಲ್ಲಿ ಪಾಕಿಸ್ತಾನವನ್ನು ಟೀಕೆ ಮಾಡಿದ್ದಾರೆ. ಇದಕ್ಕೂ ಮೊದಲು ಚೀನಾ ಮತ್ತು ಪಾಕಿಸ್ತಾನಕ್ಕೆ ಆಕ್ರಮಣಗಳ ಬಗ್ಗೆ ಒಂದೂ ಮಾತನ್ನೂ ಹೇಳದೆ ಪ್ರವಾಸ ಸಂದರ್ಭದಲ್ಲಿ ಈ ರೀತಿಯ ಗೊಂದಲಕಾರಿ ಹೇಳಿಕೆ ನೀಡಿರುವುದು ವಿದೇಶಾಂಗ ನೀತಿಗೆ ಧಕ್ಕೆಯಾಗಲಿದೆ ಎಂದು ಮೊಯ್ಲಿ ಎಚ್ಚರಿಸಿದ್ದಾರೆ.

ಸೋನಿಯಾಗಾಂಧಿ ಅವರು ಈ ಮೊದಲು ವಿಶ್ವಸಂಸ್ಥೆಯಲ್ಲಿ ಭಾಷಣ ಮಾಡಿದ ನಂತರ ಮಹಾತ್ಮಗಾಂಧೀಜಿಯವರ ಜನ್ಮದಿನವನ್ನು ಅಂತಾರಾಷ್ಟ್ರೀಯ ಅಹಿಂಸಾ ದಿನವಾಗಿ ಆಚರಿಸಲು ನಿರ್ಧರಿಸಲಾಯಿತು. ಅದೇ ಮೋದಿ ವಿಶ್ವಸಂಸ್ಥೆಯಲ್ಲಿ ಮಾತನಾಡಿದ ಭಾಷಣದ ಪ್ರತಿಫಲ ಏನು ಎಂದು ಪ್ರಶ್ನಿಸಿದರು. ಪ್ರಚಾರದ ಭರಾಟೆಯಲ್ಲಿ ಭಾರತದ ಮೂಲಭೂತ ಸಂಸ್ಕೃತಿ ಮೇಲೆ ದಾಳಿ ನಡೆಯುತ್ತಿದೆ. ಈ ಬಗ್ಗೆ ಕಾಂಗ್ರೆಸ್ ಎಚ್ಚರವಹಿಸಲಿದೆ ಎಂದರು.

Former Union Minister Veerappa Moily criticizes Modi's Foreign policy

ಪ್ರಜಾಪ್ರಭುತ್ವದಲ್ಲಿ ಮಾಧ್ಯಮಗಳ ಪ್ರಶ್ನೆಯನ್ನೂ ಕೂಡ ಮೋದಿ ಸರ್ಕಾರ ಸಹಿಸಿಕೊಳ್ಳುತ್ತಿಲ್ಲ ಎಂದು ಅಮೆರಿಕದಲ್ಲಿ ನಡೆದ ಹಲ್ಲೆಯನ್ನು ಉಲ್ಲೇಖಿಸಿ ಟೀಕಿಸಿದರು. [ಬೆಂಗಳೂರಿನ ಹೊಸ ಆಕರ್ಷಣೆ ಈ ಗಾಂಧಿ ಪ್ರತಿಮೆ]

ಸೂಲಿಬೆಲೆ ಭಾಷಣದ ಬಗ್ಗೆ: ಗುರುವಾರ ಬೆಳಗ್ಗೆ ವಿಧಾನಸೌಧ ಹಾಗೂ ವಿಕಾಸ ಸೌಧ ನಡುವೆ ಮಹಾತ್ಮಗಾಂಧೀಜಿ ಅವರ ಬೃಹತ್ ಪ್ರತಿಮೆ ಅನಾವರಣವಾಗಿದ್ದನ್ನು ಸ್ವಾಗತಿಸಿದ ಮೋಯ್ಲಿ ಅವರು ಈ ಸಂದರ್ಭದಲ್ಲಿ ಆರ್‍ಎಸ್‍ಎಸ್ ನ ನಾಯಕ ಚಕ್ರವರ್ತಿ ಸೂಲಿಬೆಲೆ ಉಪನ್ಯಾಸ ನೀಡಿದ್ದನ್ನು ಆಕ್ಷೇಪಿಸಿದರು.

ಆತ ಭಾಷಣ ಮಾಡಿದ ಕಡೆಯಲೆಲ್ಲಾ ಕೋಮುಗಲಭೆಗಳಾಗಿವೆ. ಆತ ಉಪನ್ಯಾಸ ನೀಡುವ ಕಾರ್ಯಕ್ರಮದ ವೇದಿಕೆಯಲ್ಲಿ ನಾವು ಭಾಗವಹಿಸುವುದು ಸರಿಯಲ್ಲ. ಮುಖ್ಯಮಂತ್ರಿಗಳು ಇತ್ತ ಗಮನ ಹರಿಸಬೇಕು. ಇಂದು ಬೆಳಗ್ಗೆ ಅರ್ಧಕ್ಕೆ ಎದ್ದು ಬರುವ ನಿರ್ಧಾರ ಮಾಡಿದ್ದೆ. ಸಭಾ ಮರ್ಯಾದೆಗಾಗಿ ಹಾಗೆ ಮಾಡಿಲ್ಲ ಎಂದು ಹೇಳಿದರು. ವಿಧಾನಪರಿಷತ್ ಸಭಾಪತಿ ಡಿ.ಎಚ್ ಶಂಕರ ಮೂರ್ತಿ, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್, ಮುಖ್ಯಮಂತ್ರಿ ಸಿದ್ಧರಾಮಯ್ಯ, ಸಚಿವರಾದ ರಮಾನಾಥರೈ, ಉಮಾಶ್ರೀ, ಖಮರುಲ್ಲಾ ಇಸ್ಲಾಂ ಮತ್ತಿತರರುಈ ಸಮಾರಂಭದಲ್ಲಿ ಉಪಸ್ಥಿತರಿದ್ದರು.

English summary
Former Union Minister Veerappa Moily has criticised PM Narendra Modi's Foreign policy and said Indian fears attack by foriegner at the border. Modi's to visit to US was flop he added. He told condemned Karnataka Government for allowing RSS leader Chakravatri Sulibele to give speech during the inauguration of Mahatma Gandhi statue near VidhanaSoudha today.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X