ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸರ್ಕಾರಿ ಸೌಲಭ್ಯಕ್ಕೆ ಗೆಜೆಟೆಡ್, ನೋಟರಿ ಸಹಿ ಬೇಕಿಲ್ಲ

By Ashwath
|
Google Oneindia Kannada News

ನವದೆಹಲಿ, ಜು.16: ಇನ್ನು ಮುಂದೆ ಸರ್ಕಾರಿ ಸೌಲಭ್ಯ ಪಡೆಯಲು ದಾಖಲೆಗಳಿಗೆ ಗೆಜೆಟೆಡ್‌ ಅಧಿಕಾರಿ ಅಥವಾ ನೋಟರಿಯವರ ಸಹಿ ಅಗತ್ಯವಿಲ್ಲ. ದಾಖಲೆ ಮೇಲೆ ನಾಗರಿಕರ ಸ್ವಯಂ ದೃಢೀಕೃತ ಸಹಿ ಇದ್ದಲ್ಲಿ ಸರ್ಕಾರಿ ಸೌಲಭ್ಯ ಪಡೆಯಬಹುದು ಎಂದು ಕೇಂದ್ರ ಸರ್ಕಾರ ಹೊಸ ನಿಯಮವನ್ನು ಜಾರಿಗೆ ತಂದಿದೆ.

ಇಲ್ಲಿಯವರೆಗೆ ಸರ್ಕಾರಿ ಸೌಲಭ್ಯ ಪಡೆಯಲು ಜನರು ತಮ್ಮ ದಾಖಲೆಗಳಿಗೆ ಸಹಿ ಹಾಕಲು ನೋಟರಿ ಮತ್ತು ಗೆಜೆಟೆಡ್‌ ಅಧಿಕಾರಿಗಳಿಗೆ 100, 500 ರೂ ನೀಡುತ್ತಿದ್ದರು.

ಕೇಂದ್ರ ಸರ್ಕಾರ ಹೊಸ ಕ್ರಮದಿಂದಾಗಿ ಜನರ ಹಣ ಉಳಿತಾಯವಾಗಲಿದೆ. ಜೊತೆಗೆ ಅಧಿಕಾರಿಯ ಹುಡುಕಾಟ ಮತ್ತು ಅಧಿಕಾರಿ ಸೂಚಿಸಿದ ಪೂರಕ ದಾಖಲೆಗಳನ್ನು ಹೊಂದಿಸುವುದರಲ್ಲೇ ಕಳೆದುಹೋಗುತ್ತಿದ್ದ ಸಮಯವೂ ಉಳಿಯಲಿದೆ.

notary parliment

ಸ್ವಯಂ ದೃಢೀಕರಣ ವ್ಯವಸ್ಥೆಯನ್ನು ಜಾರಿಗೆ ತರುವಂತೆ ಎರಡನೇ ಆಡಳಿತ ಸುಧಾರಣಾ ಆಯೋಗ ತನ್ನ 12ನೇ ವರದಿಯಲ್ಲಿ ಶಿಫಾರಸು ಮಾಡಿತ್ತು. ಈ ಶಿಫಾರಸಿನ ಆಧಾರದಲ್ಲಿ ಕೇಂದ್ರ ಸರ್ಕಾರ ಈ ನಿರ್ಧಾರ ತೆಗೆದುಕೊಂಡಿದೆ.[ನೋಟರಿಗಳು ವಿವಾಹ ಪ್ರಮಾಣ ಪತ್ರ ನೀಡುವಂತಿಲ್ಲ]

ಹೊಸ ನಿಯಮವನ್ನು ಜಾರಿಗೆ ತರುವಂತೆ ಕೇಂದ್ರ ಆಡಳಿತ ಸುಧಾರಣೆ ಹಾಗೂ ಸಾರ್ವಜನಿಕ ದೂರುಗಳ ಇಲಾಖೆ ಎಲ್ಲಾ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚನೆ ನೀಡಿದೆ ಎಂದು ಅಧಿಕಾರಿಯೊಬ್ಬರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

English summary
In what may come as a major relief to citizens, the government has decided to do away with the necessity of filing affidavits from a gazetted officer or a notary for a big chunk of government-related work and instead to promote self-attestation of documents.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X