ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಿಯಲ್ ಎಸ್ಟೇಟ್ ಉದ್ಯಮಿ ಅಪಹರಿಸಿ, ವೃಷಣ ಕಿತ್ತರು

|
Google Oneindia Kannada News

ಬೆಂಗಳೂರು, ಆ.28 : ಹಣಕ್ಕಾಗಿ ರಿಯಲ್‌ ಎಸ್ಟೇಟ್‌ ಉದ್ಯಮಿ ಗಂಗದಾಸಪ್ಪ ಎಂಬುವರನ್ನು ಅಪಹರಿಸಿ ಶಸ್ತ್ರಚಿಕಿತ್ಸೆ ಮೂಲಕ ವೃಷಣಗಳನ್ನು ತೆಗೆಸಿದ್ದ ಆರೋಪಿಗಳಿಗಾಗಿ ಮಾಗಡಿ ಪೊಲೀಸರು ಹುಡುಕಾಟ ಮುಂದುವರೆಸಿದ್ದಾರೆ. ಗಂಗದಾಸಪ್ಪ ಅವರು ಕೆಂಪೇಗೌಡ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ (ಕಿಮ್ಸ್‌) ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಪ್ರಕರಣದಲ್ಲಿ ಆರೋಪಿಗಳಾಗಿರುವ ಶಿಕ್ಷಕಿ ಕವಿತಾ, ನಂಜುಡ ಸೇರಿದಂತೆ ನಾಲ್ವರು ಆರೋಪಿಗಳ ಮೊಬೈಲ್ ಸ್ವಿಚ್ ಆಫ್ ಆಗಿದ್ದು, ಆರೋಪಿಗಳ ಮೊಬೈಲ್‌ ಕರೆಗಳ ಬಗ್ಗೆ ಹೆಚ್ಚಿನ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಆ.5ರ ನಂತರ ಆರೋಪಿಗಳು ತಲೆಮರಿಸಿಕೊಂಡಿದ್ದಾರೆ.

KIMS

ಘಟನೆ ವಿವರ : ಗಂಗದಾಸಪ್ಪ ಅಲಿಯಾಸ್ ದಾಸಪ್ಪ ಎಂಬುವವರು ಮಾಗಡಿ ರಸ್ತೆಯ ವಿಶ್ವೇಶ್ವರ ಲೇಔಟ್ ನಿವಾಸಿ. ಹಾರೋಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯರಾಗಿರುವ ಇವರು ರಿಯಲ್ ಎಸ್ಟೇಟ್ ವ್ಯವಹಾರದಲ್ಲಿಯೂ ತೊಡಗಿಸಿಕೊಂಡಿದ್ದಾರೆ.

ದಾಸಪ್ಪ ಮತ್ತು ನಂಜುಡ ನಡುವೆ ಸುಮಾರು 25 ಲಕ್ಷ ರೂ. ಗಳ ಹಣವ ವ್ಯವವಾರ ನಡೆದಿತ್ತು. ಹಣದ ವಿಚಾರವಾಗಿ ಇಬ್ಬರ ನಡುವೆ ಆಗಾಗ ಜಗಳವೂ ನಡೆದಿತ್ತು. ಆ.4ರಂದು ಇಬ್ಬರ ನಡುವೆ ಹಣಕ್ಕಾಗಿ ಮಾಗಡಿ ಸಮೀಪ ರಸ್ತೆ ಮಧ್ಯೆ ಜಗಳ ನಡೆದಿದೆ.

ಇದನ್ನು ಗಮನಿಸಿದ ಸಾರ್ವಜನಿಕರು ಮಾಗಡಿ ಪೊಲೀಸರಿಗೆ ಈ ಕುರಿತು ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿ ಪೊಲೀಸರು ಎಲ್ಲರನ್ನು ಠಾಣೆಗೆ ಕರೆದುಕೊಂಡು ಹೋಗಿ ಪ್ರಕರಣದ ಬಗ್ಗೆ ವಿವರ ಪಡೆದುಕೊಂಡಿದ್ದಾರೆ. ಠಾಣೆಯಲ್ಲಿ ಇಬ್ಬರು ತಮ್ಮ ವಿವಾದವನ್ನು ಮಾತುಕತೆ ಮೂಲಕ ಬಗೆಹರಿಸಿಕೊಳ್ಳುತ್ತೇವೆ ಎಂದು ಹೇಳಿಕೆ ನೀಡಿದ್ದರು.

ಆದರೆ, ಪೊಲೀಸ್ ಠಾಣೆಯಿಂದ ಸ್ವಲ್ಪ ದೂರ ಬಂದ ನಂತರ ನಂಜುಡ ಮತ್ತು ಶಿಕ್ಷಕಿ ಕವಿತಾ ಮುಂತಾದ ಆರೋಪಿಗಳು ದಾಸಪ್ಪ ಅವರನ್ನು ಅಪಹರಿಸಿದ್ದಾರೆ. ನಂತರ ಕವಿತಾ ಅವರ ಮನೆಗೆ ಕರೆದುಕೊಂಡು ಹೋಗಿ ದಾಸಪ್ಪ ಅವರಿಗೆ ಬಲವಂತವಾಗಿ ನಿದ್ರೆ ಮಾತ್ರೆ ನುಂಗಿಸಿ ಅವರ, ವೃಷಣವನ್ನು ಶಸ್ತ್ರ ಚಿಕಿತ್ಸೆ ಮೂಲಕ ತೆಗೆದಿದ್ದಾರೆ. ಮರುದಿನ ಬೆಳಗ್ಗೆ ದಾಸಪ್ಪ ಅವರಿಗೆ ಎಚ್ಚರವಾದಾಗ ವಿಪರೀತ ರಕ್ತಸ್ರಾವವಾಗಿರುವುದು ಬೆಳಕಿಗೆ ಬಂದಿದೆ.

ತಕ್ಷಣ ಆರೋಪಿಗಳು ಅವರನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ ಸ್ಥಳದಿಂದ ಪರಾರಿಯಾಗಿದ್ದಾರೆ. ಕಿಮ್ಸ್ ಆಸ್ಪತ್ರೆಯಲ್ಲಿ ದಾಸಪ್ಪ ಅವರಿಗೆ ಚಿಕಿತ್ಸೆ ನೀಡಲಾಗಿದ್ದು, ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆಸ್ಪತ್ರೆಯ ವೈದ್ಯರು ಈ ಕುರಿತು ಮಾಗಡಿ ಪೊಲೀಸರಿಗೆ ಮಾಹಿತಿ ನೀಡಿದ್ದು, ಅವರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದು, ಆರೋಪಿಗಳಿಗಾಗಿ ಹುಡುಕಾಟ ನಡೆಸಿದ್ದಾರೆ.

English summary
Realtor Gangadasappa (40) paid a heavy price for financial dispute, he lost his testicles. On the night of August 4, the moneylenders kidnapped him and surgically removed his testicles. Later they admitted Gangadasappa to KIMS Hospital. Magadi police registered the case and investigating.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X