ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಕಲಿ ಅನುಭವ ಪತ್ರ ನೀಡುತ್ತಿದ್ದ ವಂಚಕರ ಬಂಧನ

|
Google Oneindia Kannada News

ಬೆಂಗಳೂರು, ಸೆ. 30 : ವಿವಿಧ ಕಂಪನಿಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿರುವಂತೆ ನಕಲಿ ಪ್ರಮಾಣ ಪತ್ರಗಳನ್ನು ನೀಡುತ್ತಿದ್ದ ಬೃಹತ್ ಜಾಲವೊಂದನ್ನು ಸಿಸಿಬಿ ಪೊಲೀಸರು ಪತ್ತೆ ಹಚ್ಚಿದ್ದಾರೆ. ಪ್ರಕರಣದ ಸಂಬಂಧ 20 ಮಂದಿಯನ್ನು ಬಂಧಿಸಲಾಗಿದೆ. ಒಟ್ಟು ಏಳು ಕಡೆ ದಾಳಿ ನಡೆಸಿದ ಪೊಲೀಸರು ಜಾಲವನ್ನು ಪತ್ತೆ ಹಚ್ಚಿದ್ದಾರೆ.

ಮಂಗಳವಾರ ಪತ್ರಿಕಾಗೋಷ್ಠಿ ನಡೆಸಿದ ಬೆಂಗಳೂರು ನಗರ ಪೊಲೀಸ್ ಆಯುಕ್ತ ಎಂ.ಎನ್‌.ರೆಡ್ಡಿ ಅವರು, ಸಿಸಿಬಿ ಪೊಲೀಸರ ದಾಳಿಯ ಕುರಿತು ಮಾಹಿತಿ ನೀಡಿದರು. ಹೊಸದಾಗಿ ಉದ್ಯೋಗ ಪಡೆಯುವ ಯುವಕರಿಗೆ ಬೇರೆ ಕಂಪನಿಗಳಲ್ಲಿ ಕೆಲಸ ಮಾಡಿರುವ ಅನುಭವ ಹೊಂದಿರುವಂತೆ ಪ್ರಮಾಣ ಪತ್ರವನ್ನು ನೀಡುತ್ತಿದ್ದ ಬೃಹತ್ ಜಾಲವಿದಾಗಿದ್ದು, ಬಂಧಿತರಿಂದ ಕಂಪ್ಯೂಟರ್, ನಕಲಿ ಐಡಿ ಕಾರ್ಡ್‌, 25ಕ್ಕೂ ಹೆಚ್ಚು ಫೋನ್, ಮೊಬೈಲ್, ನಕಲಿ ಪ್ರಮಾಣ ಪತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಿದರು. [ಸುಳ್ಳು ಸುದ್ದಿ ಮಾಡಬೇಡಿ, ಜಯಲಲಿತಾ ಆರೋಗ್ಯ ಸ್ಥಿರ]

ಈ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಿರಣ್ ಕುಮಾರ್ (35), ರಂಗರಾಜು (35), ಶೇಕ್ ಅಲ್ತಾಜ್ ಅಹಮದ್ (39), ಬಾಲರಾಜ್ (28) ಸೇರಿದಂತೆ ಒಟ್ಟು 20 ಜನರನ್ನು ಬಂಧಿಸಲಾಗಿದೆ. ಈ ವಂಚನೆ ಪ್ರಕರಣದಲ್ಲಿ ಕಿರಣ್‍ಕುಮಾರ್ ಪ್ರಮುಖ ಆರೋಪಿಯಾಗಿದ್ದು, ಇದಕ್ಕಾಗಿ ಅವರು ಕಚೇರಿಯೊಂದನ್ನು ತೆರೆದಿದ್ದರು. ಹಲವು ಕಂಪನಿಗಳ ನಕಲಿ ಐಡಿ ಕಾರ್ಡ್‌ಗಳನ್ನು ಅವರು ಹೊಂದಿದ್ದರು ಎಂದು ಆಯುಕ್ತರು ಹೇಳಿದರು.

ಸುಮಾರು 25 ಕಂಪನಿಗಳ ಹೆಸರಿನಲ್ಲಿ ನಕಲಿ ಪ್ರಮಾಣ ಪತ್ರ ನೀಡುತ್ತಿದ್ದ ಆರೋಪಿಗಳು, ಎರಡು ಮೂರು ವರ್ಷಗಳ ಅನುಭವ ಇರುವಂತೆ ಪ್ರಮಾಣಪತ್ರ ಮಾಡಿ ಕೊಟ್ಟು ಉದ್ಯೋಗಕ್ಕೆ ಸೇರುವ ಅಭ್ಯರ್ಥಿಗಳಿಂದ ಹಣ ಸಂಗ್ರಹಿಸುತ್ತಿದ್ದರು ಎಂದರು. ಇದುವರೆಗೂ ಸಾವಿರಕ್ಕೂ ಹೆಚ್ಚು ಜನರು ನಕಲಿ ದಾಖಲಾತಿಗಳನ್ನು ನೀಡಿ ವಿವಿಧ ಕಂಪೆನಿಗಳಲ್ಲಿ ಕೆಲಸಕ್ಕೆ ಸೇರಿಸಿರುವ ಕುರಿತು ಆರೋಪಿಗಳಿಂದ ಮಾಹಿತಿ ಸಂಗ್ರಹಿಸಲಾಗಿದೆ ಎಂದರು.

CCB police

English summary
Bangalore CCB police busts biggest ever fake Job/Experience certificate racket and arrested 20 accused said, Bangalore Police Commissioner MN Reddi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X