ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಲ್ಲೇಶ್ವರಂ ಜನರ ಸಮಸ್ಯೆಗೆ ಸ್ಪಂದಿಸಲು ವೆಬ್‌ಸೈಟ್

|
Google Oneindia Kannada News

ಬೆಂಗಳೂರು, ಆ.20 : ಮಲ್ಲೇಶ್ವರಂ ಕ್ಷೇತ್ರದಲ್ಲಿ ಸಮಸ್ಯೆಗಳಿವೆಯೇ ತಕ್ಷಣ ವೆಬ್‌ಸೈಟ್‌ಗೆ ಭೇಟಿ ಕೊಟ್ಟು ದೂರು ನೀಡಿ. ಹೌದು ಕ್ಷೇತ್ರದ ಜನರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಲು ಅನುಕೂಲವಾಗುವಂತೆ ಮಲ್ಲೇಶ್ವರಂ ಶಾಸಕ ಡಾ.ಸಿ.ಎನ್‌.ಅಶ್ವತ್ಥನಾರಾಯಣ್‌ ಮಲ್ಲೇಶ್ವರಂ.ಸಹಾಯ.ಇನ್ ವೆಬ್‌ಸೈಟ್ ಆರಂಭಿಸಿದ್ದಾರೆ.

ಮಂಗಳವಾರ ಈ ನೂತನ ವೆಬ್‌ಸೈಟ್‌ಗೆ ಬಿಜೆಪಿ ರಾಷ್ಟ್ರೀಯ ಸಹ ಸಂಘ­ಟನಾ ಕಾರ್ಯದರ್ಶಿ ಸಂತೋಷ್‌ ಚಾಲನೆ ನೀಡಿದ್ದಾರೆ. ಆಧುನಿಕ ಕಾಲಘಟ್ಟದಲ್ಲಿ ಜನರಿಗೆ ಕಚೇರಿಗೆ ತೆರಳಿ, ಮನವಿ ಪತ್ರ ಸಲ್ಲಿಸಲು ಸಮಯದ ಕೊರತೆ ಇದೆ. ಆದ್ದರಿಂದ ವೆಬ್‌ಸೈಟ್ ವ್ಯವಸ್ಥೆ ಜನರಿಗೆ ಸಹಕಾರಿಯಾಗಲಿದೆ ಎಂದು ಸಂತೋಷ್ ಹೇಳಿದರು.

Malleswaram

ಜನರು ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸಲು ವೆಬ್‌ಸೈಟ್ ಆರಂಭಿಸಲಾಗಿದೆ ಎಂದು ಡಾ.ಸಿ.ಎನ್‌.ಅಶ್ವತ್ಥ­ನಾರಾ­ಯಣ್ ಹೇಳಿದ್ದಾರೆ. ಜನರು ಬಿಬಿಎಂಪಿ ಸಮಸ್ಯೆ ಬಗ್ಗೆ ಜಲಮಂಡಳಿಗೆ ದೂರು ನೀಡುತ್ತಾರೆ ಆದ್ದರಿಂದ ಸಮಸ್ಯೆ ಬಗೆಹರಿಯುವುದಿಲ್ಲ. ಇದನ್ನು ತಪ್ಪಿಸಲು ವೆಬ್‌ಸೈಟ್‌ ವ್ಯವಸ್ಥೆ ರೂಪಿಸಲಾಗಿದೆ ಎಂದು ತಿಳಿಸಿದರು. [ಮಲ್ಲೇಶ್ವರಂ.ಸಹಾಯ.ಇನ್ ವೆಬ್ ಸೈಟ್]

ದೂರು ನೀಡುವುದು ಹೇಗೆ ? : ದೂರು ನೀಡಬೇಕಾದ ಜನರು ಮೊದಲು ವೆಬ್‌ಸೈಟ್‌ ಭೇಟಿ ನೀಡಿ ಲಾಗಿನ್ ಆಗಬೇಕು. ನಂತರ ತಮ್ಮ ವಾರ್ಡ್‌, ಸಮಸ್ಯೆ ಯಾವುದು, ಯಾವ ಇಲಾಖೆಗೆ ಸಂಬಂಧಿಸಿದ್ದು ಮುಂತಾದ ವಿವರಗಳನ್ನು ಒದಗಿಸಬೇಕು. ಸಮಸ್ಯೆಯ ಬಗ್ಗೆ ಛಾಯಾಚಿತ್ರಗಳನ್ನು ಇಲ್ಲಿ ಹಾಕಲು ಅವಕಾಶವಿದೆ. ಈ ದೂರನ್ನು ಸಂಬಂಧಿಸಿದ ಅಧಿಕಾರಿಗೆ ಕಳುಹಿಸುವ ವ್ಯವಸ್ಥೆ ಇದೆ. ಸಮಸ್ಯೆ ಬಗೆಹರಿಯುವ ತನಕ ಅದರ ಬಗ್ಗೆ ಗಮನ ಇಡುವ ವ್ಯವಸ್ಥೆಯನ್ನು ರೂಪಿಸಲಾಗಿದೆ.

ನಾಗರಿಕರು ಸಮಸ್ಯೆ ಬಗೆಹರಿಯದೆ ಇದ್ದಲ್ಲಿ ಮತ್ತೆ ದೂರು ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಅಶ್ವತ್ಥ­ನಾರಾ­ಯಣ್ ಹೇಳಿದ್ದಾರೆ. ಆರಂಭಿಕ ಹಂತದಲ್ಲಿ ಬಿಬಿಎಂಪಿ, ಜಲಮಂಡಳಿಯ ಸೇವೆಗಳನ್ನು ವೆಬ್‌ಸೈಟ್‌ನಲ್ಲಿ ಒದಗಿಸಲಾಗುವುದು ಎಂದು ಅವರು ಮಾಹಿತಿ ನೀಡಿದರು.

English summary
To provide Malleswaram residents with a platform to voice their civic grievances, an online citizen service portal called Malleswaram Sahaaya was launched on Tuesday. Malleswaram MLA Dr.C.N.Ashwath Narayan (BJP)launched the portal.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X