ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ನಿಮ್ಮ ತೋಟಕ್ಕೆ ನಮ್ಮ ಓಟ' ನಿರ್ಮಾಣವಾಗಲಿ ಕೈದೋಟ

|
Google Oneindia Kannada News

ಬೆಂಗಳೂರು, ಸೆ. 1 : ತಾರಸಿ ಮೇಲೆ ಕೈದೊಟ ನಿರ್ಮಿಸುವುದನ್ನು ರಾಷ್ಟ್ರೀಯ ಕಾರ್ಯಕ್ರಮವನ್ನಾಗಿ ರೂಪಿಸಲು ಶ್ರಮಿಸುತ್ತೇನೆ ಎಂದು ಕೇಂದ್ರ ರಸಗೊಬ್ಬರ ಖಾತೆ ಸಚಿವ ಅನಂತಕುಮಾರ್‌ ಹೇಳಿದರು.

ಬೆಂಗಳೂರಿನ ಜೆಪಿ ನಗರದಲ್ಲಿ ಭಾನುವಾರ ಗಾರ್ಡ್ ನ್‌ ಸಿಟಿ ಫಾರ್ಮಸ್‌ ಸಂಸ್ಥೆ ಹಮ್ಮಿಕೊಂಡಿದ್ದ 'ನಿಮ್ಮ ತೋಟಕ್ಕೆ ನಮ್ಮ ಓಟ' ತಾರಸಿ ಕೈದೋಟ ನಿರ್ಮಾಣ ಕುರಿತ ವಿನೂತನ ಕಾರ್ಯಕ್ರಮದಲ್ಲಿ ಮಾತನಾಡಿದರು.

anata kumar

ಹಸಿರು ಜೀವನ' ಶೈಲಿಯನ್ನು ಎಲ್ಲರೂ ಅಳವಡಿಸಿಕೊಳ್ಳಲು 'ಟೆರೇಸ್‌ ಗಾರ್ಡ್‌ನ್‌' ಪೂರಕವಾಗಿದೆ. ದೇಶದ ಆಹಾರ ಉತ್ಪಾದನೆಯ ಶೇ.30ರಷ್ಟು ಭಾಗವನ್ನು ತಾರಸಿ ತೋಟದಿಂದಲೇ ಪಡೆಯಬಹುದು ಎಂದು ಹೇಳಿದರು. (ಕೇಂದ್ರ ಸಚಿವರ ಪ್ರಕಾರ ಮಹಿಳೆ ದೇಹ ದೇವಾಲಯವಂತೆ)

ಹಸಿರು ಕ್ರಾಂತಿಯ ನಂತರ ನಾವು ತಾರಸಿ ತೋಟ ಕ್ರಾಂತಿ ಮಾಡಬೇಕಾಗಿದೆ. ಹೆಚ್ಚುತ್ತಿರುವ ಮಾಲಿನ್ಯ ನಿಯಂತ್ರಣ ಮಾಡಲು ಇಂಥ ಕಾರ್ಯಕ್ರಮಗಳು ಪೂರಕವಾಗುತ್ತದೆ. ಬೆಂಗಳೂರಿನ ಎಂಟು ಸಾವಿರ ಮನೆಗಳ ಟೆರೇಸ್‌ ಹಸಿರಿನಿಂದ ನಳನಳಿಸುತ್ತಿರುವುದು ನಿಜಕ್ಕೂ ಹೆಮ್ಮೆಯ ಸಂಗತಿ. ಈ ಪದ್ಧತಿಯನ್ನು ಎಲ್ಲರೂ ಅಳವಡಿಸಿಕೊಳ್ಳಬೇಕಾಗಿದೆ ಎಂದರು.

ಅನಂತಕುಮಾರ್‌ ಪಂಚಸೂತ್ರ

ತಾರಸಿ ತೋಟ, ಸೌರವಿದ್ಯುತ್, ಮಳೆನೀರುಕೊಯ್ಲು, ಕಸದಿಂದ ಗೊಬ್ಬರ, ಮತ್ತು ಪ್ಲಾಸ್ಟಿಕ್‌ ಬಳಕೆ ನಿಷೇಧ ಈ ಐದು ಅಂಶಗಳನ್ನು ರೂಢಿಸಿಕೊಂಡರೆ ಮಾಲಿನ್ಯ ನಿಯಂತ್ರಣ ಸುಲಭ ಸಾಧ್ಯ. ಪರಿಸರ ಪ್ರೇಮಿ ಸಂಸ್ಥೆಯ ಅಧ್ಯಕ್ಷ ಡಾ. ವಿಶ್ವನಾಥ್ ಅವರ ಕಲ್ಪನೆಗೆ ಎಲ್ಲರೂ ಸಹಕರಿಸಬೇಕಾಗಿದೆ ಎಂದರು.

ಪ್ರಧಾನಿ ನರೇಂದ್ರ ಮೋದಿಯವರಿಗೆ ತಾರಸಿ ತೋಟದ ಮಹತ್ವ ತಿಳಿಯಪಡಿಸಿ ಇದನ್ನು ರಾಷ್ಟ್ರೀಯ ಅಭಿಯಾನವನ್ನಾಗಿಸುತ್ತೇನೆ. ಎಲ್ಲ ಸಚಿವರೊಂದಿಗೆ ಸಮನ್ವಯ ಸಾಧಿಸಿ ಯೋಜನೆ ಜಾರಿಗೆ ಹೊಸ ಬಗೆಯ ಯೋಜನೆ ಜಾರಿಗೆ ಶ್ರಮಿಸುತ್ತೇನೆ ಎಂದು ಭರವಸೆ ನೀಡಿದರು.

ಏರುತ್ತಿರುವ ತಾಪಮಾನ ತಡೆಗೆ ಎಲ್ಲರೂ ಕಟಿಬದ್ಧರಾಗಬೇಕಿದೆ. ಹಸಿರು ಜೀವನ ಶೈಲಿ ಅಳವಡಿಕೆ ಮಹತ್ವವನ್ನು ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಲ್ಲಿ, ಸಾರ್ವಜನಿಕರಲ್ಲಿ ಮೂಡಿಸಬೇಕಾಗಿದೆ. ಇದಕ್ಕೆ ಸಂಘ ಸಂಸ್ಥೆಗಳ ಸಹಕಾರ ಅಗತ್ಯ ಎಂದು ಹೇಳಿದರು.

ಅದಮ್ಯ ಚೇತನ ಸಂಸ್ಥೆ ಅಧ್ಯಕ್ಷೆ ಡಾ. ತೇಜಸ್ವಿನಿ ಅನಂತಕುಮಾರ್‌ ಮಾತನಾಡಿ, ಸಂಸ್ಥೆ ಅನೇಕ ಶಾಲಾ ಕಾಲೇಜುಗಳ ಮಕ್ಕಳಿಗೆ ಊಟ ನೀಡುತ್ತಿದೆ. ಎಲ್ಲ ಶಾಲೆಗಳ ಟೆರೇಸ್‌ ಮೇಲೂ ಕೈದೋಟ ನಿರ್ಮಿಸುವ ಚಿಂತನೆಯಿದೆ. ಕಸ ಪುನರ್‌ಬಳಕೆಗೆ ಗಮನ ಹರಿಸಬೇಕಾಗಿದೆ ಎಂದು ಹೇಳಿದರು.

ಗಾರ್ಡ್ ನ್‌ ಸಿಟಿ ಫಾರ್ಮಸ್‌ ಸಂಸ್ಥೆಯ ಡಾ.ಜಗದೀಶ್‌, ವಿನಯ್‌ ಮಾಗಡಿ, ಪ್ರಗತಿಪರ ರೈತ ನಾರಾಯಣಸ್ವಾಮಿ ಹಾಜರಿದ್ದರು.

ನೂರಾರು ಸ್ಟಾಲ್‌ ಮತ್ತು ಪ್ರದರ್ಶನಗಳ ಮೂಲಕ ಸಾರ್ವಜನಿಕರಿಗೆ ಸಾವಯವ ಕೃಷಿ, ತಾರಸಿ ಕೈದೋಟ ನಿಮರ್ಮಾಣ ಕುರಿತು ಮಾಹಿತಿ ನೀಡಲಾಯಿತು.

English summary
Bangalore: Every house must had a Terrace Garden and it will make a National programme said by Union minister Anatakumar here. He expressed number of points regarding pollution control.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X