ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿನ ಮೊದಲ ಎಸ್ಕಲೇಟರ್ ಸ್ಕೈವಾಕ್ ರೆಡಿ

By Rajendra
|
Google Oneindia Kannada News

ಬೆಂಗಳೂರು, ಜು.26: ರಾಜಧಾನಿ ಬೆಂಗಳೂರಿನ ಬಹುತೇಕ ರಸ್ತೆಗಳಲ್ಲಿ ಹೆಚ್ಚುತ್ತಿರುವ ವಾಹನ ದಟ್ಟಣೆಯಿಂದಾಗಿ ಪಾದಚಾರಿಗಳು ರಸ್ತೆ ದಾಟಲು ಹರಸಾಹಸ ಪಡಬೇಕಾಗುತ್ತದೆ. ವಿಶೇಷವಾಗಿ ಬೆಳಗ್ಗೆ ಮತ್ತು ಸಂಜೆ ಶಾಲಾ ಕಾಲೇಜು ಮತ್ತು ಕಚೇರಿಗಳು ಆರಂಭವಾಗುವ ಮುಂಚೆ ಮತ್ತು ಮುಗಿದ ನಂತರ ವಾಹನ ದಟ್ಟಣೆ ಹೆಚ್ಚಾಗಿ ಪಾದಚಾರಿಗಳು ರಸ್ತೆ ದಾಟಲು ಹಲವು ನಿಮಿಷಗಳ ಕಾಲ ಕಾಯಬೇಕಾಗುತ್ತದೆ.

ಇಂತಹ ಪರಿಸ್ಥಿತಿಯಿಂದ ಡಾ.ರಾಜ್ ಕುಮಾರ್ ರಸ್ತೆಯೂ ಹೊರತಾಗಿಲ್ಲ. ಅಷ್ಟೇ ಅಲ್ಲದೇ, ಕೆಲವು ಸಂದರ್ಭಗಳಲ್ಲಿ ರಭಸವಾಗಿ ಬರುವ ವಾಹನಗಳು ಪಾದಚಾರಿಗಳ ಮೇಲೆ ಹಾಯ್ದು ಅಪಘಾತಗಳು ಸಂಭವಿಸಿರುವ ಉದಾಹರಣೆಗಳೂ ಇವೆ. ಪಾದಚಾರಿಗಳ ಈ ಸಂಕಷ್ಟವನ್ನು ತಪ್ಪಿಸುವ ನಿಟ್ಟಿನಲ್ಲಿ ಬ್ರಿಗೇಡ್ ಗ್ರೂಪ್ ಸಂಸ್ಥೆಯು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಸಹಯೋಗದಲ್ಲಿ ಡಾ.ರಾಜ್ ಕುಮಾರ್ ರಸ್ತೆಯಲ್ಲಿ ಸ್ಕೈವಾಕ್ ನಿರ್ಮಿಸಿದೆ.

ಈ ಸ್ಕೈವಾಕ್ ಬೆಂಗಳೂರಿನ ನಾಗರಿಕರ ಸೇವೆಗೆ ಮುಕ್ತಗೊಳಿಸಲಾಗಿದೆ. ಸಾಮಾಜಿಕ ಕಳಕಳಿ ಇಟ್ಟುಕೊಂಡು ಸ್ಕೈವಾಕ್ ನಿರ್ಮಾಣ ಮಾಡಿರುವ ಬ್ರಿಗೇಡ್ ಗ್ರೂಪ್ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಎಂ.ಆರ್. ಜೈಶಂಕರ್ ಅವರ ಸೇವೆಯನ್ನು ಮುಕ್ತಕಂಠದಿಂದ ಶ್ಲಾಘಿಸಲಾಯಿತು. ಈ ಸ್ಕೈವಾಕನ್ನು ಮಲ್ಲೇಶ್ವರಂ ಶಾಸಕ ಡಾ. ಆಶ್ವಥ್ ನಾರಾಯಣ ಮತ್ತು ಸುಬ್ರಮಣ್ಯ ವಾರ್ಡ್ ನಂ.66ರ ಕಾರ್ಪೋರೇಟರ್ ಶಶಿಕಲಾ ಕೃಷ್ಣ ಗೌಡ ಉದ್ಘಾಟನೆ ಮಾಡಿದರು.

ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಡಾ. ಅಶ್ವಥ್ ನಾರಾಯಣ, "ಬೆಂಗಳೂರಿನ ಈ ವಾಹನ ದಟ್ಟಣೆಯಲ್ಲಿ ರಸ್ತೆ ದಾಟುವುದು ತುಂಬಾ ಕಷ್ಟ. ಆದ್ದರಿಂದ ಈ ಸಂದರ್ಭದಲ್ಲಿ ಪಾದಚಾರಿಗಳ ಅನುಕೂಲತೆಯನ್ನು ನೋಡುವುದು ತುಂಬಾ ಅಗತ್ಯ. ಜನರ ಈ ತೊಂದರೆಯನ್ನು ನಿವಾರಿಸಲು ಬ್ರಿಗೇಡ್ ಗ್ರೂಪ್ ಹೊಸ ಯೋಜನೆಯನ್ನು ಹಾಕಿದೆ. ಮಲ್ಲೇಶ್ವರಂನ ಡಾ. ರಾಜ್ ಕುಮಾರ್ ರಸ್ತೆಯಲ್ಲಿ ಬ್ರಿಗೇಡ್ ಎಸ್ಕಲೇಟರ್ ಇರುವ ಸ್ಕೈವಾಕ್ ನಿರ್ಮಾಣ ಮಾಡಿದೆ. ಬೆಂಗಳೂರಿನಲ್ಲೇ ಮೊದಲ ಬಾರಿಗೆ ಎಸ್ಕಲೇಟರ್ ಇರುವ ಸ್ಕೈವಾಕ್ ನಿರ್ಮಾಣ ಮಾಡಲಾಗಿದೆ." ಎಂದರು.

Skywalk
ಒರಿಯಾನ್ ಮಾಲ್ ಎದುರು ಇರುವ ಡಾ.ರಾಜ್ ಕುಮಾರ್ ರಸ್ತೆಯಲ್ಲಿ ನಿರ್ಮಾಣವಾಗಿರುವ ಈ ಸ್ಕೈವಾಕ್ ನಿಂದಾಗಿ ಪಾದಚಾರಿಗಳು ನಿರಾತಂಕವಾಗಿ ರಸ್ತೆಯನ್ನು ದಾಟಬಹುದಾಗಿದೆ. ಬೆಂಗಳೂರಿನಲ್ಲಿ ಎಸ್ಕಲೇಟರ್ ಹೊಂದಿದ ಮೊದಲ ಸ್ಕೈವಾಕ್ ಇದಾಗಿದ್ದು, ಮಳೆ ಗಾಳಿಯಿಂದ ಸಾರ್ವಜನಿಕರ ರಕ್ಷಣೆಗೆಂದು ಮೇಲ್ಛಾವಣೆ ನಿರ್ಮಿಸಲಾಗಿದೆ.

ಎಲ್ಲಾ ವರ್ಗದ ಮತ್ತು ಎಲ್ಲಾ ವಯೋಮಾನದ ಜನರನ್ನು ಗಮನದಲ್ಲಿಟ್ಟುಕೊಂಡು ನಾವು ಈ ಸ್ಕೈವಾಕ್‍ನ್ನು ನಿರ್ಮಿಸಿದ್ದೇವೆ. ಈ ಮೂಲಕ ಸ್ಕೈವಾಕ್ ಬೆಂಗಳೂರಿನ ನಾಗರಿಕರಿಗೆ ಸಮರ್ಪಿಸುತ್ತಿದ್ದೇವೆ ಎಂದು ಜೈಶಂಕರ್ ತಿಳಿಸಿದರು. ಬ್ರಿಗೇಡ್ ಗ್ರೂಪ್ ಈ ಸ್ಕೈವಾಕ್ ನಿರ್ಮಾಣಕ್ಕೆ ರು. 2.5 ಕೋಟಿ ವೆಚ್ಚ ಮಾಡಿದೆ. (ಒನ್ಇಂಡಿಯಾ ಕನ್ನಡ)

English summary
A Brigade development initiative, the Skywalk is constructed across Dr. Rajkumar road, in front of the Orion Mall to help commuters cross the busy two-way easily. Brigade Group, with the support of Bruhat Bengaluru Mahanagara Palike (BBMP) constructed this skywalk.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X