ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೆಟ್ರೋ ಪ್ರಯಾಣಿಕರಿಗಾಗಿ ಫ್ಲ್ಯಾಶ್ ಕಾರ್ಡ್ ಸೇವೆ

|
Google Oneindia Kannada News

ಬೆಂಗಳೂರು, ಮಾ. 18 : ನಮ್ಮ ಮೆಟ್ರೋ ಪ್ರಯಾಣಿಕರಿಗಾಗಿ ಬಿಎಂಆರ್ ಸಿಎಲ್ ಹೊಸ ಸೇವೆಯನ್ನು ಆರಂಭಿಸಿದೆ. ಪ್ರಯಾಣಿಕರಿಗಾಗಿ ಫ್ಲ್ಯಾಶ್ ಟ್ರಾನ್ಸಿಟ್ ಡೆಬಿಟ್ ಕಾರ್ಡ್‌ಗಳನ್ನು ಬಿಡುಗಡೆ ಮಾಡಲಾಗಿದೆ. ಈ ಕಾರ್ಡ್ ಬಳಕೆಯಿಂದ ಪ್ರತಿ ಪ್ರಯಾಣದ ಮೇಲೆ ಶೇ.15ರಷ್ಟು ಮತ್ತು ನಿರಂತರ ಹಾಗೂ ದೂರದ ಪ್ರಯಾಣಕ್ಕೆ ಗರಿಷ್ಠ ಶೇ.21ರಷ್ಟು ರಿಯಾಯಿತಿ ದೊರೆಯಲಿದೆ.

ಬಿಎಂಆರ್ ಸಿಎಲ್ ಮತ್ತು ಫೆಡರಲ್ ಬ್ಯಾಂಕ್ ಜಂಟಿ ಒಪ್ಪಂದ ಮಾಡಿಕೊಂಡು ಈ ಕಾರ್ಡ್ ಅನ್ನು ಬಿಡುಗಡೆ ಮಾಡಿದೆ. ಸೋಮವಾರ ಫೆಡರಲ್ ಬ್ಯಾಂಕ್ ಅಧ್ಯಕ್ಷ ಅಶುತೋಷ್ ಖಜೂರಿಯಾ ಮತ್ತು ಬಿಎಂಆರ್ ಸಿಲ್ ವ್ಯವಸ್ಥಾಪಕ ನಿರ್ದೇಶಕ ಪ್ರದೀಪ್ ಸಿಂಗ್ ಕರೋಲ ಕಾರ್ಡ್ ಅನ್ನು ಬಿಡುಗಡೆ ಮಾಡಿದರು. [ಸಂಪಿಗೆ ರಸ್ತೆ-ಪೀಣ್ಯ ಮೆಟ್ರೋ ರೈಲಿಗೆ ಚಾಲನೆ]

Namma Metro

ಫೆಡರಲ್ ಬ್ಯಾಂಕ್ ಪರಿಚಯಿಸಿರುವ ಫ್ಲ್ಯಾಶ್ ಕಾಂಬೋ ಕಾರ್ಡ್ ಬಗ್ಗೆ ಮಾಹಿತಿ ನೀಡಿದ ಬ್ಯಾಂಕ್ ಅಧ್ಯಕ್ಷರು, 50 ರೂ. ನೀಡಿ ಈ ಕಾರ್ಡ್ಅನ್ನು ಪಡೆಯಬಹುದಾಗಿದ್ದು, 10 ವರ್ಷಗಳವರೆಗೆ ಬಳಸಬಹುದು ಎಂದರು. ಮೆಟ್ರೋದಲ್ಲಿ ಕಾರ್ಡ್ ಬಳಸಿ ಪ್ರಯಾಣಿಸಿದರೆ, ಪ್ರತಿ ಪ್ರಯಾಣದ ಮೇಲೆ ಶೇ.15ರಷ್ಟು ಮತ್ತು ನಿರಂತರ ಹಾಗೂ ದೂರದ ಪ್ರಯಾಣಕ್ಕೆ ಗರಿಷ್ಠ ಶೇ.21ರಷ್ಟು ರಿಯಾಯಿತಿ ದೊರೆಯಲಿದೆ ಎಂದರು.

ರೀಜಾರ್ಚ್ ಮಾಡಿಸಿಕೊಳ್ಳಬಹುದು : ಪ್ರಯಾಣಿಕರು ಒಮ್ಮೆ ಕಾರ್ಡ್ ಪಡೆದ ನಂತರ ಅಗತ್ಯಕ್ಕೆ ತಕ್ಕಂತೆ ರೀಜಾರ್ಚ್ ಮಾಡಿಸಿಕೊಳ್ಳಬಹುದಾಗಿದೆ. ಮೆಟ್ರೋ ನಿಲ್ದಾಣಗಳು, ಆಯ್ದ ನಿಲ್ದಾಣಗಳಲ್ಲಿರುವ ಬ್ಯಾಂಕ್‌ ಎಟಿಎಂ ಕೇಂದ್ರ, ನೆಟ್ ಬ್ಯಾಂಕಿಂಗ್, ಎಸ್ಎಂಎಸ್ ಮೂಲಕವೂ ಕನಿಷ್ಠ 100 ರೂ.ಗಳಿಂದ ಗರಿಷ್ಠ 1,000 ರೂ.ವರೆಗೆ ರೀಚಾರ್ಜ್ ಮಾಡಿಸಿಕೊಳ್ಳಬಹುದಾಗಿದೆ.

ಐವತ್ತು ರೂ. ನೀಡಿ ಕಾಂಬೋ ಕಾರ್ಡ್ ಪಡೆಯಬಹುದು, ಡೆಬಿಟ್ ಕಾರ್ಡ್‌ನಂತೆ ಈ ಕಾರ್ಡ್ ಬಳಸಲು ಇಚ್ಛಿಸುವವರು ಬ್ಯಾಂಕ್‌ನಲ್ಲಿ ಖಾತೆ ತೆರೆಯಬೇಕು. ಬ್ಯಾಂಕ್‌ನಲ್ಲಿ ಖಾತೆ ಹೊಂದಿರುವವರು ಕಾರ್ಡ್ ಪಡೆಯಲು ಬಯಸಿದರೆ ಅಗತ್ಯ ಸೌಲಭ್ಯ ಕಲ್ಪಿಸಲಾಗುವುದು ಎಂದು ಅವರು ತಿಳಿಸಿದರು. ಶಾಪಿಂಗ್ ಖರೀದಿಗೂ ಈ ಕಾರ್ಡ್ ಅನ್ನು ಬಳಸಬಹುದಾಗಿದೆ ಎಂದು ಹೇಳಿದರು.

ಐದು ವರ್ಷದ ಒಪ್ಪಂದ : ಬಿಎಂಆರ್ ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಪ್ರದೀಪ್ ಸಿಂಗ್ ಕರೋಲಾ ಮಾತನಾಡಿ, ಪ್ರಯಾಣಿಕರಿಗೆ ಹೆಚ್ಚು ಸೌಲಭ್ಯ ಒದಗಿಸುವ ದೃಷ್ಠಿಯಿಂದ ಫೆಡರಲ್ ಬ್ಯಾಂಕ್‌ ಜೊತೆ ಒಪ್ಪಂದ ಮಾಡಿಕೊಳ್ಳಲಾಗಿದ್ದು, ಐದು ವರ್ಷಗಳಿಗೆ ಒಪ್ಪಂದವಾಗಿದೆ ಎಂದರು.

ಬಿಎಂಟಿಸಿ ವೋಲ್ವೊ ಪ್ರಯಾಣ ದರಕ್ಕೆ ಹೋಲಿಕೆ ಮಾಡಿದರೆ ಮೆಟ್ರೋ ಪ್ರಯಾಣ ದರ ಕಡಿಮೆ ಇದೆ. ಈ ಕಾರ್ಡ್ ಬಳಕೆಯಿಂದ ಪ್ರಯಾಣಿಕರಿಗೆ ರಿಯಾಯಿತಿ ದೊರೆಯಲಿದೆ ಎಂದು ಹೇಳಿದರು. ಮುಂದಿನ ಒಂದೂವರೆ ವರ್ಷದೊಳಗೆ ಮೊದಲ ಹಂತದ ಎಲ್ಲ ರೀಚ್‌ ಗಳಲ್ಲಿ ಮೆಟ್ರೋ ಸಂಚಾರ ಆರಂಭವಾಗಲಿದೆ ಎಂದು ತಿಳಿಸಿದರು.

English summary
The Bangalore Metro Rail Corporation Limited (BMRCL) has tied up with Federal Bank to offer Namma Metro passengers a flash combo card which will enable them to shop and travel using the same card. The Federal Bank Transit-cum-Debit Card will offer discounts ranging from 15 per cent to 21 per cent on fares.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X