ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

16 ಮಂದಿಗೆ ಡಿಎಸ್‌ ಮ್ಯಾಕ್ಸ್‌ ಕಲಾಶ್ರೀ ಪ್ರಶಸ್ತಿ ಪ್ರದಾನ

By Ashwath
|
Google Oneindia Kannada News

ಬೆಂಗಳೂರು, ಜೂ.20: ದೇವರು, ಜ್ಯೋತಿಷಿಗಳಿಂದ ದೇಶವನ್ನು ಉದ್ಧಾರ ಮಾಡಲು ಸಾಧ್ಯವಿಲ್ಲ. ದುಡಿಯುವ ಕೈಗಳಿಗೆ ಕೆಲಸ ನೀಡಿದಾಗ ದೇಶದ ಪ್ರಗತಿಯಾಗುತ್ತದೆ ಎಂದು ಚಿತ್ರದುರ್ಗದ ಮುರುಘ ಮಠದ ಡಾ. ಶಿವಮೂರ್ತಿ ಮುರುಘ ಶರಣರು ಅಭಿಪ್ರಾಯ ಪಟ್ಟಿದ್ದಾರೆ.

ನಗರದ ಚೌಡಯ್ಯ ಸ್ಮಾರಕ ಭವನದಲ್ಲಿ ಗುರುವಾರ 'ಡಿಎಸ್-ಮ್ಯಾಕ್ಸ್' ಕಟ್ಟಡ ನಿರ್ಮಾಣ ಸಂಸ್ಥೆಯ ವಾರ್ಷಿಕೋತ್ಸವದ ಅಂಗವಾಗಿ ಆಯೋಜಿಸಿದ್ದ'ಡಿಎಸ್‌ ಮ್ಯಾಕ್ಸ್ ಕಲಾಶ್ರೀ' ಪ್ರದಾನ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.

ಇಂದು ಯುವಕರಿಗೆ ಕೆಲಸ ನೀಡಿದರೆ ಅವರು ಸಮಾಜಘಾತುಕ ಶಕ್ತಿಗಳಾಗದೇ ದೇಶದ ಉದ್ದಾರಕ್ಕೆ ಶ್ರಮಿಸುತ್ತಾರೆ. ನಮ್ಮ ವಿದ್ಯೆ, ಶಾಸ್ತ್ರ, ದೇಶ ಅಭಿವೃದ್ಧಿಗೆ ಬಳಕೆಯಾಗಬೇಕು. ಬಡತನ ನಿರ್ಮೂ‌ಲನೆಗೆ ಪ್ರಬಲ ವ್ಯಕ್ತಿಗಳು ನೂರಾರು ಯುವಕರಿಗೆ ಉದ್ಯೋಗ ನೀಡಿ ದೇಶದ ಅಭಿವೃದ್ಧಿಗೆ ಸಹಕರಿಸುತ್ತಿದ್ದಾರೆ. ದುಡಿಯುವ ಕೈಗಳಿಗೆ ಉದ್ಯೋಗ ನೀಡುತ್ತಿರುವ ಇಂತಹ ಸಂಘ ಸಂಸ್ಥೆಗಳಿಗೆ ಪ್ರೋತ್ಸಾಹ ನೀಡಬೇಕು ಎಂದರು.

ಈ ಸಂದರ್ಭದಲ್ಲಿ ಚಲನ ಚಿತ್ರ ರಂಗದಲ್ಲಿ ಸಾಧನೆ ಮಾಡಿದ 16 ಮಂದಿ ಸಾಧಕರಿಗೆ ಕಲಾಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಜೊತೆಗೆ ಎರಡನೇ ಬಾರಿ ಸಿಸಿಎಲ್‌ ಕ್ರಿಕೆಟ್‌ ಪ್ರಶಸ್ತಿ ಪಡೆದ ಕರ್ನಾಟಕ ಬುಲ್ಡೋಜರ್ಸ್ ತಂಡದ ಸದಸ್ಯರನ್ನು ಸನ್ಮಾನಿಸಲಾಯಿತು.

ಕಾರ್ಯ‌ಕ್ರಮದಲ್ಲಿ ಸಚಿವ ಅಂಬರೀಷ್‌, ಶಾಸಕರಾದ ಸಿ.ಟಿ ರವಿ, ಅಶೋಕ್‌ ಖೇಣಿ, ನಟರಾದ ಸುದೀಪ್‌, ದರ್ಶನ್‌, ಮಾಜಿ ಸಚಿವ ರಾಜೂ ಗೌಡ, ಮಾಧ್ಯಮ ಅಕಾಡೆಮಿ ಅಧ್ಯಕ್ಷ ಪೊನ್ನಪ್ಪ, ತೆಲುಗು ಚಿತ್ರ ನಿರ್ದೇಶಕ ಕೃಷ್ಣಾ ರೆಡ್ಡಿ, ಡಿಎಸ್‌ ಮ್ಯಾಕ್ಸ್ ವ್ಯವಸ್ಥಾಪಕ ನಿರ್ದೇಶಕ ಸತೀಶ್‌, ಕಾರ್ಯ‌ನಿರ್ವಾಹನ ನಿರ್ದೆಶಕ ದಯಾನಂದ್‌ ಉಪಸ್ಥಿತರಿದ್ದರು.

ಕಾರ್ಯಕ್ರಮದ ಚಿತ್ರಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್‌ ಮಾಡಿ: ಗ್ಯಾಲರಿ

ಡಿಎಸ್‌ ಮ್ಯಾಕ್ಸ್‌ ಕಲಾಶ್ರೀ ಪ್ರಶಸ್ತಿ-2014

ಡಿಎಸ್‌ ಮ್ಯಾಕ್ಸ್‌ ಕಲಾಶ್ರೀ ಪ್ರಶಸ್ತಿ-2014

ನಟ ನಿರ್ದೇಶಕ ಶಿವರಾಂ, ನಟರಾದ ಸದಾಶಿವ್‌ ಬ್ರಹ್ಮಾವರ, ನಟಿ ಶಾಂತಮ್ಮ ಅವರಿಗೆ ಕಲಾಶ್ರೀ ಪ್ರಶಸ್ತಿ ನೀಡಲಾಯಿತು.

ಡಿಎಸ್‌ ಮ್ಯಾಕ್ಸ್‌ ಕಲಾಶ್ರೀ ಪ್ರಶಸ್ತಿ-2014

ಡಿಎಸ್‌ ಮ್ಯಾಕ್ಸ್‌ ಕಲಾಶ್ರೀ ಪ್ರಶಸ್ತಿ-2014

ಆರ್‌.ಟಿ ರಮಾ, ಶ್ರೀನಾಥ್‌, ಸುಂದರ್‌ ರಾಜ್‌ ಅವರಿಗೆ ಅವರಿಗೆ ಕಲಾಶ್ರೀ ಪ್ರಶಸ್ತಿ ನೀಡಲಾಯಿತು.

ಡಿಎಸ್‌ ಮ್ಯಾಕ್ಸ್‌ ಕಲಾಶ್ರೀ ಪ್ರಶಸ್ತಿ-2014

ಡಿಎಸ್‌ ಮ್ಯಾಕ್ಸ್‌ ಕಲಾಶ್ರೀ ಪ್ರಶಸ್ತಿ-2014

ನಟಿಯರಾದ ಚಿತ್ರ ಶೆಣೈ,ಸುಧಾರಾಣಿ, ಪ್ರಮೀಳಾ ಜೋಷಾಯ್‌‌ ಅವರಿಗೆ ಕಲಾಶ್ರೀ ಪ್ರಶಸ್ತಿ ನೀಡಲಾಯಿತು.

ಡಿಎಸ್‌ ಮ್ಯಾಕ್ಸ್‌ ಕಲಾಶ್ರೀ ಪ್ರಶಸ್ತಿ-2014

ಡಿಎಸ್‌ ಮ್ಯಾಕ್ಸ್‌ ಕಲಾಶ್ರೀ ಪ್ರಶಸ್ತಿ-2014

ಹಾಸ್ಯ ನಟರಾದ ಟೆನ್ನೀಸ್ ಕೃಷ್ಣಾ, ಮಂಡ್ಯ ರಮೇಶ್‌, ಸಂಕೇತ್‌ ಕಾಶಿ ಅವರಿಗೆ ಕಲಾಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಡಿಎಸ್‌ ಮ್ಯಾಕ್ಸ್‌ ಕಲಾಶ್ರೀ ಪ್ರಶಸ್ತಿ-2014

ಡಿಎಸ್‌ ಮ್ಯಾಕ್ಸ್‌ ಕಲಾಶ್ರೀ ಪ್ರಶಸ್ತಿ-2014

ಸತ್ಯಜೀತ್‌, ಕೆ. ಕಲ್ಯಾಣ್‌, ದತ್ತಣ್ಣ, ಮಾಸ್ತರ್‌ ಆನಂದ್‌ ಅವರಿಗೆ ಕಲಾಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು.

 ಸಿಸಿಎಲ್‌ ಸನ್ಮಾನ

ಸಿಸಿಎಲ್‌ ಸನ್ಮಾನ

ಕರ್ನಾಟಕ ಬುಲ್ಡೋಜರ್ಸ್ ತಂಡದ ಕಪ್ತಾನ ಸುದೀಪ್‌ ಅವರಿಗೆ ಚಿನ್ನದ ಬಣ್ಣವಿರುವ ಟ್ರೋಫಿ ನೀಡಿ ಸನ್ಮಾನಿಸಲಾಯಿತು.

ಸಿಸಿಎಲ್‌ ಸನ್ಮಾನ

ಸಿಸಿಎಲ್‌ ಸನ್ಮಾನ

ಕರ್ನಾಟಕ ಬುಲ್ಡೋಜರ್ಸ್ ತಂಡದ ಸುದೀಪ್‌ ಮತ್ತು ದರ್ಶನ್‌ ಅವರಿಗೆ ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು

English summary
As a part of social responsibility to the society, DX MAX PROPERTIES (P) LTD One of the biggest construction company in Karnataka has been in the social service for decades . DS Max Kalashri Award Ceremony at Chowdaiah Memorial Hall, in Bangalore on Thursday 19th June 2014.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X