ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅ.1ರಂದೇ ಜಯಾ ಜಾಮೀನು ಅರ್ಜಿ ವಿಚಾರಣೆ

By Mahesh
|
Google Oneindia Kannada News

ಬೆಂಗಳೂರು, ಸೆ.30: ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಅಪರಾಧಿ ಎನಿಸಿ ಜೈಲು ಪಾಲಾಗಿರುವ ತಮಿಳುನಾಡು ಮುಖ್ಯಮಂತ್ರಿ ಜೆ.ಜಯಲಲಿತಾ ಅವರಿಗೆ ಕೊಂಚ ರಿಲೀಫ್ ಸಿಕ್ಕಿದೆ. ಸೋಮವಾರಕ್ಕೆ ಮುಂದೂಡಲ್ಪಟ್ಟಿದ್ದ ಜಾಮೀನು ಅರ್ಜಿಯ ವಿಚಾರಣೆ ಹೈಕೋರ್ಟ್ ನಾಳೆಯೇ ನಡೆಯಲಿದೆ. ಜಯಲಲಿತಾ ಅವರ ಜಾಮೀನು ಅರ್ಜಿ ವಿಚಾರಣೆಯನ್ನು ಹೈಕೋರ್ಟಿನ ವಿಶೇಷ ನ್ಯಾಯಪೀಠ ಅ.1 ರಂದೇ ಕೈಗೆತ್ತಿಕೊಳ್ಳಲಿ ಎಂದು ಮುಖ್ಯ ನ್ಯಾಯಮೂರ್ತಿ ಡಿ.ಎಚ್ ವಘೇಲಾ ಸೂಚಿಸಿದ್ದಾರೆ.

ಎಐಎಡಿಎಂಕೆ ನಾಯಕಿ, ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ್ದ ರಜಾ ಕಾಲದ ಹೈಕೋರ್ಟ್ ಪೀಠ, ಸರ್ಕಾರಿ ಅಭಿಯೋಜಕರಿಲ್ಲದ ಕಾರಣ ವಿಚಾರಣೆಯನ್ನು ಅ.6ಕ್ಕೆ ಮುಂದೂಡಿತ್ತು. ಸರ್ಕಾರಿ ಅಭಿಯೋಜಕರ ನೇಮಕ ಸಂಬಂಧ ಕೋರ್ಟ್ ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿತ್ತು. [ಕರ್ನಾಟಕ ಸರ್ಕಾರಕ್ಕೆ ನೋಟಿಸ್]

ಪಿ.ಎನ್ ದೇಸಾಯಿಗೆ ಮನವಿ: ಆದರೆ ಸರ್ಕಾರಿ ಅಭಿಯೋಜಕರ ನೇಮಕಕ್ಕೂ ಅರ್ಜಿ ವಿಚಾರಣೆಗೂ ಸಂಬಂಧವಿಲ್ಲ ಎಂದು ಜಯಾ ಪರ ವಕೀಲರಾದ ರಾಮ್‌ಜೇಠ್ಮಲಾನಿ ವಾದಿಸಿದರು.

ಎಐಎಡಿಎಂಕೆ ಸಂಸದರು ರಾಮ್ ಜೇಠ್ಮಲಾನಿ ಅವರ ಸಲಹೆ ಮೇರೆಗೆ ಬುಧವಾರ(ಅಕ್ಟೋಬರ್.1)ವೇ ಅರ್ಜಿ ವಿಚಾರಣೆ ನಡೆಸುವಂತೆ ಹೈಕೋರ್ಟ್ ರಿಜಿಸ್ಟ್ರಾರ್ ಜ್ಯುಡಿಷಿಯಲ್‌ ಪಿ.ಎನ್ ದೇಸಾಯಿಗೆ ಮನವಿ ಮಾಡಿದ್ದರು. ಈ ಮನವಿಯನ್ನು ಪರಿಗಣಿಸಿದ ಮುಖ್ಯ ನ್ಯಾಯಮೂರ್ತಿ ವಘೇಲಾ ಅವರು ನಾಳೆ ಹೈಕೋರ್ಟ್‌ನ ವಿಶೇಷ ಪೀಠದಲ್ಲಿ ವಿಚಾರಣೆ ನಡೆಸುವಂತೆ ಸೂಚಿಸಿದ್ದಾರೆ.

DA case: Karnataka High Court to hear Jayalalithaa's bail plea

ಜೇಠ್ಮಲಾನಿ ಅವರು ಸಿಆರ್‌ಪಿಸಿ ಸೆಕ್ಸೆನ್ 389 ಅನ್ನು ಉಲ್ಲೇಖಿಸಿ, ಆಕ್ಷೇಪಣೆಯನ್ನು ಪರಿಗಣಿಸದೆಯೇ ಜಾಮೀನು ನೀಡುವ ಅಧಿಕಾರ ಹೈಕೋರ್ಟ್‌ಗೆ ಇದೆ ಮತ್ತು ಸರ್ಕಾರಿ ಅಭಿಯೋಜಕರ ನೇಮಕಕ್ಕೂ ಮತ್ತು ಜಾಮೀನು ಅರ್ಜಿಯ ವಿಚಾರಣೆಗೂ ಯಾವುದೇ ಸಂಬಂಧವಿಲ್ಲ.

ಸಿಆರ್ ಪಿಎಫ್ ಪ್ರಕಾರ ನನ್ನ ಕಕ್ಷಿದಾರರಿಗೆ 10 ವರ್ಷಕ್ಕಿಂತ ಕಡಿಮೆ ಶಿಕ್ಷೆ ಆಗಿದೆ. ಹೀಗಾಗಿ ಈ ಹಂತದಲ್ಲಿ ಪ್ರತಿವಾದಿ ಅಥವಾ ಸರ್ಕಾರದ ಅಭಿಯೋಜಕರ ನೇಮಕಾತಿ ಗೊಂದಲಕ್ಕಿಂತ ನನ್ನ ಕಕ್ಷಿದಾರರ ಅರ್ಜಿ ವಿಚಾರಣೆ ಆಲಿಸಬೇಕೆಂದು ಮನವಿ ಮಾಡಿದರು ಎಂದು ವಾದಿಸಿದ್ದು ಪ್ರಯೋಜನಕ್ಕೆ ಬಂದಿದೆ. [ವೆಬ್ ತಾಣದಿಂದ ಜಯಾ ಔಟ್]

ಈ ಪ್ರಕರಣದ ಸಂಬಂಧ ಸುಪ್ರೀಂಕೋರ್ಟ್‍ನಿಂದ ನೇಮಕವಾಗಿರುವ ಜಿ ಭವಾನಿ ಸಿಂಗ್ ಅವರೇ ಸ್ಪೆಷಲ್ ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿ ಮುಂದುವರಿಯುವ ಕುರಿತು ಇನ್ನೂ ಆದೇಶ ಹೊರಬಂದಿಲ್ಲ. ಭವಾನಿ ಸಿಂಗ್ ಅವರು ತಾವು ಈ ಕೇಸಿನಲ್ಲಿ ಮುಂದುವರೆಯುವುದಿಲ್ಲ ಎಂದು ಈಗಾಗಲೇ ಸ್ಪಷ್ಟಪಡಿಸಿದ್ದಾರೆ.

ಜಯಲಲಿತಾ ಅವರಿಗೆ 4 ವರ್ಷ ಜೈಲು ಶಿಕ್ಷೆ ಹಾಗೂ 100 ಕೋಟಿ ರು ದಂಡ ವಿಧಿಸಿ ಸಿಬಿಐ ವಿಶೇಷ ನ್ಯಾಯಾಲಯ ನೀಡಿದ್ದ ಆದೇಶವನ್ನು ಭವಾನಿ ಸಿಂಗ್ ಅವರೇ ಮಾಧ್ಯಮಗಳ ಮುಂದಿಟ್ಟಿದ್ದನ್ನು ಇಲ್ಲಿ ಸ್ಮರಿಸಬಹುದು.

English summary
Karnataka High Court Special Bench headed by CJ Vaghela to take up J. Jayalalithaa Bail Plea Hearing on Oct 1. Former CM of Tamil Nadu had been held guilty in a case disproportionate assets. Earlier HC adjourned her bail to Oct 6 but later Chief Justice of HC agreed to take up the case on Wednesday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X