ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬದುಕಿ ಬರಲಿಲ್ಲ ಬೆಂಗಳೂರಿನ ಸಾಹಸಿ ಪೇದೆ

|
Google Oneindia Kannada News

ಬೆಂಗಳೂರು, ಸೆ. 11 : ಕಳೆದ ತಿಂಗಳು ಕಳ್ಳನನ್ನು ಹಿಡಿಯಲು ಹೋದಾಗ ಕಟ್ಟಡದಿಂದ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ಪೊಲೀಸ್ ಪೇದೆ ಶಿವಶಂಕರ್ ಮೃತಪಟ್ಟಿದ್ದಾರೆ. ಕೋರಮಂಗಲದ ಮಹಿಳಾ ವಸತಿ ಗೃಹಕ್ಕೆ ನುಗ್ಗಿದ್ದ ಕಳ್ಳನನ್ನು ಹಿಡಿಯಲು ಹೋದಾಗ ಶಿವಶಂಕರ್ ಕಟ್ಟಡದಿಂದ ಬಿದ್ದು ಗಾಯಗೊಂಡಿದ್ದರು.

ಹೊಸ್‌ಮ್ಯಾಟ್‌ ಆಸ್ಪತ್ರೆಯಲ್ಲಿ ಶಿವಶಂಕರ್ (45) ಗುರುವಾರ ಮೃತಪಟ್ಟಿದ್ದು ಅವರ ಮೃತದೇಹವನ್ನು ಕುಟುಂಬದವರಿಗೆ ಹಸ್ತಾಂತರಿಸಲಾಗಿದೆ. ಆನೇಕಲ್ ಬಳಿ ಶಿವಶಂಕರ್ ಅವರ ಅಂತ್ಯ ಸಂಸ್ಕಾರ ನಡೆಸಲಾಗುವುದು ಎಂದು ಕುಟುಂಬದವರು ತಿಳಿಸಿದ್ದಾರೆ.

police

ಆ.9ರಂದು ರಾತ್ರಿ ಶಿವಶಂಕರ್ ಮತ್ತು ಗುರುಮೂರ್ತಿ ಅವರು ರಾತ್ರಿ ಪಾಳಯದಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಈ ಸಮಯದಲ್ಲಿ ಕೋರಮಂಗಲದ ಮಹಿಳಾ ವಸತಿ ಗೃಹಕ್ಕೆ ಮೂವರು ಕಳ್ಳರು ನುಗ್ಗಿದ್ದಾರೆ ಎಂಬ ಮಾಹಿತಿ ಬಂದಿದೆ. ತಕ್ಷಣ ಅವರು ಸ್ಥಳಕ್ಕೆ ಧಾವಿಸಿದಾಗ ಮೂವರ ಕಟ್ಟಡ ಮೇಲೆ ಹತ್ತಿ ಪರಾರಿಯಾಗಲು ಯತ್ನಿಸುತ್ತಿದ್ದರು. [ಕಳ್ಳನ ಹಿಡಿಯಲು ಮೇಲಿಂದ ಜಿಗಿದ ಸಾಹಸಿ ಪೇದೆ]

ತಕ್ಷಣ ಶಿವಶಂಕರ್ ಕಟ್ಟಡದ ಮೇಲೆ ಹತ್ತಿ ಅವರನ್ನು ಹಿಡಿಯಲು ಪ್ರಯತ್ನಿಸಿದ್ದಾರೆ. ಈ ಸಂದರ್ಭದಲ್ಲಿ ಅವರು ಆಯತಪ್ಪಿ ಕಟ್ಟಟದಿಂದ ಕೆಳಗೆ ಬಿದಿದ್ದರು. ಶಿವಶಂಕರ್ ಕೆಳಗೆ ಬಿದ್ದಿದ್ದನ್ನು ಗಮನಿಸಿದ ಗುರುಮೂರ್ತಿ ಅವರು ಸ್ಥಳಕ್ಕೆ ಧಾವಿಸಿ, ಅವರನ್ನು ಸೆಂಟ್ ಜಾನ್ಸ್ ಆಸ್ಪತ್ರೆಗೆ ಸೇರಿಸಿದ್ದರು.

ತೆಲೆಗೆ ತೀವ್ರವಾದ ಪೆಟ್ಟಾಗಿದ್ದ ಶಿವಶಂಕರ್ ಅವರಿಗೆ ಪ್ರಾಥಮಿಕ ಚಿಕಿತ್ಸೆ ನೀಡಿ ನಂತರ ಹೊಸ್‌ಮ್ಯಾಟ್‌ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ, ಅಲ್ಲಿಯೂ ಚಿಕಿತ್ಸೆ ಫಲಕಾರಿಯಾಗದೆ ಅವರು ಗುರುವಾರ ಮೃತಪಟ್ಟಿದ್ದಾರೆ. ಗೃಹ ಸಚಿವ ಕೆ.ಜೆ.ಜಾರ್ಜ್ ಸಹ ಆಸ್ಪತ್ರೆಗೆ ಭೇಟಿ ನೀಡಿ ಪೇದೆಯ ಆರೋಗ್ಯ ವಿಚಾರಿಸಿದ್ದರು.

ಇನ್ನೊಂದು ಘಟನೆ : ಕಳ್ಳನನ್ನು ಹಿಡಿಯಲೆಂದು ಒಂದು ಕಟ್ಟಡದಿಂದ ಮತ್ತೊಂದು ಕಟ್ಟಡಕ್ಕೆ ಜಿಗಿಯಲು ಯತ್ನಿಸಿದ ಸಾಹಸಿ ಪೊಲೀಸ್ ಕಾನ್‌ಸ್ಟೇಬಲ್ ತೀವ್ರವಾಗಿ ಗಾಯಗೊಂಡಿದ್ದ ಘಟನೆ ಕೆಲವು ದಿನಗಳ ಹಿಂದೆ ರಾಜಗೋಪಾಲ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿಯೂ ನಡೆದಿತ್ತು.

English summary
Koramangala Police Station head constable Shivshankar (45) died in Hosmat Hospital Bangalore on Thursday, September 11. Shivshankar injured when he slipped from the car shed adjoining a building while he was chasing thieves on August 9.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X