ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

RSSನಿಂದ ಪಾಠ ಕಲಿಯಿರಿ ಎಂದ ಎಸ್ಸೆಂ ಕೃಷ್ಣ

By Srinath
|
Google Oneindia Kannada News

ಬೆಂಗಳೂರು, ಏಪ್ರಿಲ್ 3: ಲೋಕಸಭಾ ಚುನಾವಣೆ ಪ್ರಚಾರ ಭರದಲ್ಲಿ ಜನನಾಯಕರೆನಿಸಿಕೊಂಡವರು ತಲೆಗೊಂದರಂತೆ ಕೆಳಮಟ್ಟಕ್ಕಿಳಿದು ಮಾತನಾಡುತ್ತಿದ್ದಾರೆ. ಕಾಂಗ್ರೆಸ್ ಪಕ್ಷದ ಕೇಂದ್ರದ ಮಾಜಿ ಸಚಿವರೊಬ್ಬರು ಆರೆಸೆಸ್ಸಿನಿಂದ ಪಾಠ ಕಲಿಯಿರಿ ಎಂದು ಹೇಳಿದ್ದರೆ, ಮತ್ತೊಬ್ಬ ಮಾಜಿ ಸಚಿವ (ಬೇನಿ ಪ್ರಸಾದ್) 'ಬಿಜೆಪಿ ಪ್ರಧಾನಿ ಅಭ್ಯರ್ಥಿ ಮೋದಿ ಆರೆಸೆಸ್ಸಿನ ಗೂಂಡಾ' ಎಂದು ಬಣ್ಣಿಸಿದ್ದಾರೆ.

ಆರೆಸ್ಸೆಸ್ಸಿನ ಸರಳ ಭಗವದ್ಗೀತೆ ಬೋಧಿಸಿದ ಕೃಷ್ಣ:

cong-leader-sm-krishna-exhorts-party-workers-to-learn-from-rss
ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಪರ ಬೆಂಗಳೂರಿನಲ್ಲಿ ಪ್ರಚಾರ ಕಾರ್ಯದಲ್ಲಿ ತೊಡಗಿರುವ ಮಾಜಿ ವಿದೇಶಾಂಗ ಸಚಿವ, ಹಿರಿಯ ಕಾಂಗ್ರೆಸ್ಸಿಗ ಎಸ್ ಎಂ ಕೃಷ್ಣ ಅವರು ಆರ್ ಎಸ್ಎಸ್ ಸಂಘದವರು ಬಿಜೆಪಿ ಪರ ಮತದಾರರನ್ನು ಗುರುತಿಸಿ, ಮತಗಟ್ಟೆಗೆ ಕರೆತರುವ ರೀತಿಯಲ್ಲಿ ಕಾಂಗ್ರೆಸ್ ಸಹ ಕೆಲಸ ಮಾಡಬೇಕು ಎಂದು ತಮ್ಮ ಪಕ್ಷದ ಕಾರ್ಯಕರ್ತರಿಗೆ ಕೃಷ್ಣ ಭಗವದ್ಗೀತೆ ಬೋಧಿಸಿದ್ದಾರೆ.

ಬೆಂಗಳೂರು ಸೆಂಟ್ರಲ್ ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿ ರಿಜ್ವಾನ್ ಅರ್ಷದ್ ಪರ ಮತಯಾಚಿಸಲು ಶಿವಾಜಿನಗರದಲ್ಲಿ ಆಯೋಜಿಸಿದ್ದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶ ಉದ್ಘಾಟಿಸಿ ಮಾತನಾಡಿದ ಕೃಷ್ಣ ಅವರು ಸಂಘಪರಿವಾರದ ಸದಸ್ಯರಿಂದ ಇದೊಂದು ವಿಚಾರದಲ್ಲಿ ನಾವು ಪಾಠ ಕಲಿಯಬೇಕಾಗಿದೆ. ಅವರು ತಳಮಟ್ಟದಿಂದ ಉತ್ತಮವಾಗಿ ಕೆಲಸ ಮಾಡುತ್ತಾರೆ ಎಂದು ಕಿವಿಮಾತು ಹೇಳಿದರು.

ನಮ್ಮಲ್ಲಿ ಬಿಳಿ ಬಟ್ಟೆ ತೊಟ್ಟು ವೇದಿಕೆಯ ಮೇಲೆ ಪ್ರದರ್ಶನ ನೀಡುವವರ ಸಂಖ್ಯೆ ಹೆಚ್ಚಾಗುತ್ತಿದೆ. ಬಾಹ್ಯ ಪ್ರದರ್ಶನ ಬಿಟ್ಟು ಆಂತರಿಕವಾಗಿ ಕಾರ್ಯಕರ್ತರನ್ನು ಸಂಘಟಿಸುವ ಕೆಲಸ ಆರೆಸೆಸ್ಸಿನಂತೆ ಆಗಬೇಕಿದೆ ಎಂದು ಸೂಚ್ಯವಾಗಿ ಹೇಳಿದರು. [ಮೋದಿ ಮಾತನ್ನು ಕನ್ನಡದಲ್ಲಿ ಕೇಳಿರಿ]

English summary
Lok Sabha Election 2014: Ex foreign minister SM Krishna exhorts party workers to learn from RSS activists. SM Krishna while inaugurating the road show in Bangalore on April 2 said that his party workers should learn from RSS workers in attracting the voters to polling booths. He said that the Congress should work like the RSS and galvanise people to come to the voting booths.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X