ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು ಪೊಲೀಸ್ ಕಮಿಷನರ್‌ಗೆ ಸುಸ್ವಾಗತ

By Ashwath
|
Google Oneindia Kannada News

ಬೆಂಗಳೂರು,ಆ.1: ನಗರದ ಪೊಲೀಸ್‌ ಆಯುಕ್ತರಾಗಿ ಅಧಿಕಾರ ಸ್ವೀಕರಿಸಿದ ಎಂಎನ್‌ ರೆಡ್ಡಿಯವರು ಇದೀಗ ಟ್ವಿಟ್ಟರ್‌ ಖಾತೆ ಆರಂಭಿಸಿದ್ದು ಸಾರ್ವ‌ಜನಿಕರು ನೇರವಾಗಿ ಟ್ವಿಟ್ಟರ್‌ನಲ್ಲೇ ಆಯುಕ್ತರಿಗೆ ದೂರು ನೀಡಬಹುದಾಗಿದೆ.

ಆಯುಕ್ತ ಎಂಎನ್ ರೆಡ್ಡಿ ತಮ್ಮ ಟ್ವಿಟ್ಟರ್‌ ಖಾತೆ ತೆರೆದಿದ್ದು, @cpblr ಈ ಖಾತೆಯಲ್ಲಿ ಸಕ್ರಿಯವಾಗಿರಲಿದ್ದಾರೆ. ನಗರ ವ್ಯಾಪ್ತಿಯ ಯಾವುದೇ ಠಾಣೆಯಲ್ಲಿ ದೂರು ನೀಡಲು ಹೋದಾಗ ಪೊಲೀಸ್‌ ಸಿಬ್ಬಂದಿಗಳು ಸರಿಯಾಗಿ ಸಹಕರಿಸದಿದ್ದರೆ ಸಾರ್ವ‌ಜನಿಕರು ಟ್ಟಿಟ್ಟರ್‌‌ನಲ್ಲಿ ಆಯುಕ್ತರಿಗೆ ದೂರು ನೀಡಬಹುದು.[ಶಾಲೆಗಳಿಗೆ ಎಂಎನ್ ರೆಡ್ಡಿರಿಂದ 'ಖಡಕ್' ಮಾರ್ಗ ಸೂಚಿ]

mn reddi


ಸದ್ಯದಲ್ಲೇ ಫೇಸ್‌ಬುಕ್‌ಗೆ ಎಂಟ್ರಿ: ಸದ್ಯ ಟ್ವಿಟ್ಟರ್‌ ಖಾತೆ ತೆರೆದಿರುವ ಆಯುಕ್ತ ಎಂ ಎನ್ ರೆಡ್ಡಿ, ಶೀಘ್ರದಲ್ಲೇ ಫೇಸ್‌ಬುಕ್ ಖಾತೆಯನ್ನೂ ತೆರೆಯಲಿದ್ದಾರೆ ಎಂದು ಹೇಳಲಾಗುತ್ತಿದೆ. ಟ್ವಿಟ್ಟರ್‌ನಲ್ಲಿ 140 ಅಕ್ಷರಗಳ ಮಿತಿ ಇರುವುದರಿಂದ ತಕ್ಷಣಕ್ಕೆ ಟ್ವಿಟ್ಟರ್‌ರ್‌ನಲ್ಲಿ ಕಾಣಿಸಿಕೊಂಡು ಕೆಲ ದಿನಗಳ ನಂತರ ಫೇಸ್‌ಬುಕ್‌‌ನಲ್ಲೂ ಖಾತೆ ತೆರೆಯಲಿದ್ದಾರೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ನಗರದ ಕಾನೂನು ಮತ್ತು ಸುವ್ಯವಸ್ಥೆ ಪೊಲೀಸರು ಈಗಾಗಲೇ ಫೇಸ್‌ಬುಕ್‌ ಮತ್ತು ಟ್ವಿಟ್ಟರ್‌ನಲ್ಲಿ ಸಕ್ರೀಯವಾಗಿದ್ದು ಜನರಿಗೆ ಮಾಹಿತಿ ನೀಡುತ್ತಿದ್ದಾರೆ.

English summary
Commissioner of Police, Bangalore City now on twitter- Please follow @cpblr for updates.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X