ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

'ಸ್ವಚ್ಛ ಕೆಜಿಎಫ್' ಫೇಸ್ ಬುಕ್ ಗುಂಪಿನ ಅಭಿಯಾನ

By Mahesh
|
Google Oneindia Kannada News

ಕೆಜಿಎಫ್(ಕೋಲಾರ), ಅ.2: The future depends on what you do today-Mahatma Gandhi ನುಡಿಮುತ್ತು ಆಧಾರಿಸಿ, ಸ್ವಚ್ಛ ಭಾರತ ಅಭಿಯಾನಕ್ಕೆ ಬೆಂಬಲ ಸೂಚಿಸಿ ಫೇಸ್ ಬುಕ್ ನಲ್ಲಿ ಗುಂಪೊಂದು ಆರಂಭವಾಗಿದೆ. ಕರ್ನಾಟಕದ 'ಲಿಟ್ಲ್ ಇಂಗ್ಲೆಂಡ್' ಎಂದೇ ಕರೆಯಲ್ಪಡುವ ಕೆಜಿಎಫ್ ಸ್ವಚ್ಛತಾಗೆ ಕೈಜೋಡಿಸಿ ಎಂದು ಕೆಜಿಎಫ್ ಮೂಲದ ನಾಗರಿಕರಿಗೆ ಕರೆ ನೀಡಲಾಗಿದೆ.

ಪ್ರಧಾನಿ ನರೇಂದ್ರ ಮೋದಿ ಅವರು ಮಹಾತ್ಮಾ ಗಾಂಧೀಜಿಯವರ ಜಯಂತಿ ದಿನದಂದು ಆರಂಭಿಸಿದ ಸ್ವಚ್ಛ ಭಾರತ ಅಭಿಯಾನಕ್ಕೆ ಪೂರಕವಾಗಿ ಕೋಲಾರ್ ಗೋಲ್ಡ್ ಫೀಲ್ಡ್ಸ್ ಗೆ ಸೇರಿದ ವಿಶ್ವದೆಲ್ಲೆಡೆ ಇರುವ ನಾಗರಿಕರಿಗೆ ಕರೆ ನೀಡಲಾಗಿದೆ. ಸಾಮಾಜಿಕ ಜಾಲ ತಾಣದಲ್ಲಿ ಕೆಜಿಎಫ್-ದಿ ಲಿಟ್ಲ್ ಇಂಗ್ಲೆಂಡ್ ಎಂಬ ಗುಂಪನ್ನು ಆರಂಭಿಸಲಾಗಿದ್ದು ಇದರಲ್ಲಿ 10,000 ಸದಸ್ಯರಿದ್ದಾರೆ ಎಂದು ಹೇಳಿಕೊಳ್ಳಲು ಹೆಮ್ಮೆ ಎನಿಸುತ್ತಾರೆ ಎಂದು ಅಮೆರಿಕದ ಟೆಕ್ಸಾಸ್ ನಲ್ಲಿರುವ ಈ ಗುಂಪಿನ ಅಡ್ಮಿನ್ ಸೀಮಾ ಆರೆಲ್ಲಾ ಅವರು ಒನ್ ಇಂಡಿಯಾ ಕನ್ನಡಕ್ಕೆ ತಿಳಿಸಿದ್ದಾರೆ.

Clean India Campagin My Clean KGF by Seema Aarella

ಫೇಸ್ ಬುಕ್ ನಲ್ಲಿರುವ ಕೆಜಿಎಫ್ ಗುಂಪಿನ ಸದಸ್ಯರು ಹಾಗೂ ಕೆಜಿಎಫ್ ಮೂಲದ ನಾಗರಿಕರು 'My Clean KGF ಅಭಿಯಾನದಲ್ಲಿ ಸ್ವ ಇಚ್ಛೆಯಿಂದ ಪಾಲ್ಗೊಂಡು ನಮ್ಮ ಊರು ಸ್ವಚ್ಛತೆಯಿಂದ ಇರುವಂತೆ ಮಾಡುತ್ತಾರೆ ಎಂಬ ವಿಶ್ವಾಸವಿದೆ.

'ನಾನು ನನ್ನ ಕೆಜಿಎಫ್ ನಗರವನ್ನು ಸ್ವಚ್ಛವಾಗಿಟ್ಟುಕೊಳ್ಳುತ್ತೇನೆ. ನನ್ನ ಮನೆಯ ಸುತ್ತಾ ಮುತ್ತಾ ಕಸ ಎಸೆಯುವುದಿಲ್ಲ. ಕಸವನ್ನು ಕಸದ ತೊಟ್ಟಿಯಲ್ಲೇ ಹಾಕುತ್ತೇನೆ' ಎಂಬ ಸರಳ ನಿಯಮವನ್ನು ನಾನು ಸರ್ವತಾ ಪಾಲಿಸುತ್ತೇನೆ ಎಂದು ಪ್ರತಿಜ್ಞಾ ವಿಧಿ ಕೈಗೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ಸ್ವಚ್ಛತೆ ಬಗ್ಗೆ ಸಣ್ಣ ಡಾಕ್ಯುಮೆಂಟರಿ ಮಾಡಿ ಸ್ಥಳೀಯ ಚಾನೆಲ್ ಗಳಲ್ಲಿ ಪ್ರಸಾರ ಮಾಡಲಾಗುವುದು, ಶಾಲಾ ಕಾಲೇಜುಗಳಲ್ಲಿ ಸ್ವಚ್ಛತಾ ಅಭಿಯಾನ ನಡೆಸಲು ನಮ್ಮ ಗುಂಪಿನ ಸದಸ್ಯರು ಯೋಜಿಸಿದ್ದಾರೆ.

ನಾವು ಸಮಾನ ಮನಸ್ಕರರನ್ನು ಮಾತ್ರ ಸೇರಿಸಿಕೊಂಡು ಈ ಅಭಿಯಾನ ಯಶಸ್ವಿಗೊಳಿಸಲು ಮುಂದಾಗಿದ್ದೇವೆ. ನಾವು ಯಾರಿಂದಲೂ ದೇಣಿಗೆ ಸಂಗ್ರಹಿಸುವುದಿಲ್ಲ. ಗುಂಪಿನ ಸದಸ್ಯರು ದೇಣಿಗೆ ನೀಡುವುದಿಲ್ಲ. ಸ್ವಯಂ ಪ್ರೇರಿತರಾಗಿ ಸಮಾಜದ ಒಳಿತಿಗೆ ನಮ್ಮ ಊರು ನಮ್ಮ ನಗರ ಸ್ವಚ್ಛವಾಗಿರಲಿ ಎಂಬ ಏಕೈಕ ಉದ್ದೇಶದಿಂದ ಈ ಕಾರ್ಯಕ್ಕೆ ಮುಂದಾಗಿವೆ ಎಂದು ಸೀಮಾ ಹೇಳಿದರು.

ಕೆಜಿಎಫ್ ನಗರ ಸ್ವಚ್ಛತಾ ಆಂದೋಲನ, ಪ್ರಚಾರಕ್ಕಾಗಿ ಇರುವ ಕೆಜಿಎಫ್-ದಿ ಲಿಟ್ಲ್ ಇಂಗ್ಲೆಂಡ್ ಫೇಸ್ ಬುಕ್ ಗುಂಪಿನ ವೆಬ್ ಲಿಂಕ್ ಇಲ್ಲಿದೆ. ಆಸಕ್ತರು ಈ ಗುಂಪಿನೊಡನೆ ಕೈಜೋಡಿಸಬಹುದು.

English summary
On the occasion of a nation wide movie about 'Clean India' let us join hands by initiating a 'Clean KGF' movement there by contributing towards the cleanliness and environmental health of our hometown its is a Initiative by Facebook group KGF- The Little England said group admin Seema Aarella.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X