ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಯಂತ್ರದಲ್ಲಿ ಭದ್ರವಾದ ಮತಗಳು ಈಗ ಎಲ್ಲಿವೆ?

|
Google Oneindia Kannada News

ಬೆಂಗಳೂರು, ಏ. 19 : ಚುನಾವಣೆ ಕಾವು ಇಳಿದಿದ್ದು ಅಭ್ಯರ್ಥಿಗಳ ಭವಿಷ್ಯ ಮತಯಂತ್ರದಲ್ಲಿ ಭದ್ರವಾಗಿದೆ. ಅಭ್ಯರ್ಥಿಗಳ ಹಣೆಬರಹವನ್ನು ಹೊತ್ತ ಎಲೆಕ್ಟ್ರಾನಿಕ್ ಮತಯಂತ್ರಗಳು ಸ್ಟ್ರಾಂಗ್ ರೂಮ್ ಸೇರಿವೆ. ಇದಕ್ಕೆ ಸಹ ಬಿಗಿ ಭದ್ರತೆ ಒದಗಿಸಲಾಗಿದ್ದು, ಮೂರು ಹಂತಗಳಲ್ಲಿ ಭದ್ರತಾ ಪಡೆ ಸ್ಟ್ರಾಂಗ್ ರೂಮ್ ಅನ್ನು ದಿನದ 24 ಗಂಟೆಯೂ ಕಾವಲು ಕಾಯುತ್ತಿವೆ.

ಅಯಾ ಜಿಲ್ಲಾ ಕೇಂದ್ರಗಳಲ್ಲಿ ಎಲ್ಲಾ ವಿಧಾನಸಭಾ ಕ್ಷೇತ್ರಗಳ ಮತಯಂತ್ರಗಳನ್ನು ಭದ್ರವಾಗಿ ಇಡಲಾಗಿದೆ. ಬೆಂಗಳೂರು ದಕ್ಷಿಣ ಕ್ಷೇತ್ರದ ಮತಯಂತ್ರಗಳನ್ನು ತಿಲಕ್ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಶಿವಾನಂದ ಶರ್ಮಾ ಮೇಮೋರಿಯಲ್ ರಾಷ್ಟ್ರೀಯ ವಿದ್ಯಾ ಕಾಲೇಜ್ (ಎಸ್ಎಸ್ಆರ್ ಎಂವಿ)ಯಲ್ಲಿ ಇಡಲಾಗಿದ್ದು, ಸೂಕ್ತ ಭದ್ರತೆ ಒದಗಿಸಲಾಗಿದೆ.

strong rooms

ಬೆಂಗಳೂರು ಉತ್ತರ ಮತ್ತು ಕೇಂದ್ರದ ಮತಯಂತ್ರಗಳು ಹೈಗ್ರೌಂಡ್ಸ್ ಪೊಲೀಸ್ ಠಾಣೆ ವ್ಯಾಪ್ತಿಯ ಆರ್.ಸಿ.ಕಾಲೇಜು ಮತ್ತು ಉಪ್ಪಾರಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯ ಮಹಾರಾಣಿ ವಿಜ್ಞಾನ ಕಾಲೇಜು ಅವರಣದಲ್ಲಿ ಇಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. [ಕರ್ನಾಟಕದಲ್ಲಿ ಒಟ್ಟು ಎಷ್ಟು ಮತದಾನವಾಗಿದೆ?]

ಹೇಗಿದೆ ಭದ್ರತೆ : ಮೇ 16ರಂದು ಮತ ಎಣಿಕೆ ನಡೆಯುವವರೆಗೆ ಎಲೆಕ್ಟ್ರಾನಿಕ್ ಮತಯಂತ್ರಗಳಿರುವ ಸ್ಟ್ರಾಂಗ್ ರೂಮ್ ಗಳಿಗೆ ಮೂರು ಹಂತದಲ್ಲಿ ಭದ್ರತೆ ಒದಗಿಸಲಾಗುತ್ತದೆ. ಮತಯಂತ್ರವಿರುವ ಕೊಠಡಿಯ ಹೊರಭಾಗದಲ್ಲಿ ಕೇಂದ್ರ ಕೈಗಾರಿಕಾ ಭದ್ರತಾ ಪಡೆಯ ಶಸ್ತ್ರ ಸಜ್ಜಿತ ಯೋಧರು ಕಾವಲಿದ್ದಾರೆ.

ಎಲೆಕ್ಟ್ರಾನಿಕ್ ಮತಯಂತ್ರವಿರುವ ಕಟ್ಟಡದ ಆವರಣವನ್ನು ಕೆಎಸ್ಆರ್ ಪಿ ಕಾವಲು ಕಾಯುತ್ತಿದೆ. ಕಟ್ಟಡದ ಆವರಣದ ಮುಂಭಾಗ, ರಸ್ತೆಗಳನ್ನು ಆಯಾ ನಗರ ಪೊಲೀಸರು ಕಾವಲು ಕಾಯುತ್ತಿದ್ದಾರೆ. ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಸಿಆರ್ ಪಿಫ್ ಯೋಧರು ಸ್ಟ್ರಾಂಗ್ ರೂಮ್ ಗಳ ಭದ್ರತೆಯನ್ನು ಹೊಣೆಯನ್ನು ಹೊತ್ತಿದ್ದಾರೆ.

ಚುನಾವಣಾ ಅಧಿಕಾರಿಗೆ ಮಾತ್ರ ಸ್ಟ್ರಾಂಗ್ ರೂಂ ಪ್ರವೇಶಿಸುವ ಅವಕಾಶವಿದೆ. ಉಳಿದಂತೆ ಯಾವ ವ್ಯಕ್ತಿಗಳನ್ನು ಕಟ್ಟಡದ ಆವರಣದೊಳಗೆ ಬಿಡುವುದಿಲ್ಲ. ಮೇ 16ರ ಶುಕ್ರವಾರದ ತನಕ ಯೋಧರು ಸ್ಟ್ರಾಂಗ್ ರೂಮ್ ಗಳಿಗೆ ದಿನದ 24 ಗಂಟೆಯೂ ಭದ್ರತೆ ಒದಗಿಸುತ್ತಿದ್ದಾರೆ.

English summary
Elections 2014 : The police have provided three-tier security to strong rooms where the EVMs have been kept. The first tier will be guarded by Central Industrial Security Force (CISF). The second tier will be guarded by the Karnataka State Reserve Police (KSRP) and third tier security is the outer peripheral layer which will be guarded by the City police.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X