ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚಾರ್ಟರ್ಡ್ ಅಕೌಂಟೆಂಟ್ ಮನೆಯಲ್ಲಿ ಭಾರೀ ದರೋಡೆ

|
Google Oneindia Kannada News

ಬೆಂಗಳೂರು, ಆ.27 : ಬೆಳ್ಳಂಬೆಳಗ್ಗೆ ಚಾರ್ಟರ್ಡ್ ಅಕೌಂಟೆಂಟ್ ಅವರ ಮನೆಗೆ ನುಗ್ಗಿದ್ದ ಕಳ್ಳರು ಮನೆಯಲ್ಲಿದ್ದವರನ್ನು ಕಟ್ಟಿಹಾಕಿ, 20 ಲಕ್ಷ ನಗದು ಮತ್ತು 300 ಗ್ರಾಂ ಚಿನ್ನಾಭರಣ ದೋಚಿ ಪರಾರಿಯಾಗಿರುವ ಘಟನೆ ರಾಜಾಜಿನಗರದಲ್ಲಿ ನಡೆದಿದೆ.

ರಾಜ್‌ಕುಮಾರ್ ರಸ್ತೆಯ ಒರಾಯನ್ ಮಾಲ್ ಹಿಂಭಾಗದಲ್ಲಿರುವ ಬ್ರಿಗೇಡ್ ಗೇಟ್‌ ವೇ ಅಪಾರ್ಟ್‌ಮೆಂಟ್‌ನ 11ನೇ ಮಹಡಿಯಲ್ಲಿರುವ ಶ್ರೀಪಾಲ್ ಜೈನ್ ಅವರ ಮನೆಯಲ್ಲಿ ಈ ದರೋಡೆ ನಡೆದಿದೆ. ಮನೆಯಲ್ಲಿದ್ದ ಇಬ್ಬರನ್ನು ಕಟ್ಟಿಹಾಕಿರುವ ದುಷ್ಕರ್ಮಿಗಳು ಹಣ ಮತ್ತು ಚಿನ್ನಾಭರಣ ದೋಚಿದ್ದಾರೆ.

Brigade Gateway apartment

ಸೋಮವಾರ ಮಧ್ಯಾಹ್ನ 11.30ರ ಸುಮಾರಿಗೆ ಈ ಘಟನೆ ನಡೆದಿದ್ದು, ಮನೆಯಲ್ಲಿ ಕೆಲಸ ಮಾಡುವ ಗೌರಿ ಎಂಬಾಕೆ ದರೋಡೆಕೋರರ ಕಟ್ಟಿನಿಂದ ಬಿಡಿಸಿಕೊಂಡ ನಂತರ ಮಧ್ಯಾಹ್ನ 1.30ಕ್ಕೆ ಸುಬ್ರಮಣ್ಯಪುರ ಪೊಲೀಸರಿಗೆ ಈ ಬಗ್ಗೆ ಮಾಹಿತಿ ನೀಡಿದ್ದಾಳೆ.

ಸುಬ್ರಮಣ್ಯ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ನಡೆಸುತ್ತಿದ್ದಾರೆ. ಇಬ್ಬರು ದರೋಡೆಕೋರರ ಪೈಕಿ ಒಬ್ಬ ಆರೋಪಿ ಶ್ರೀಪಾಲ್ ಜೈನ್ ಅವರ ಬಳಿ ಕೆಲವು ತಿಂಗಳ ಹಿಂದೆ ಕೆಲಸಕ್ಕೆ ಸೇರಿಕೊಂಡ ಕಾರು ಚಾಲಕನಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

ಮನೆಯಲ್ಲಿ 20 ಲಕ್ಷ ಹಣ ಮತ್ತು 300 ಗ್ರಾಂ ಚಿನ್ನಾಭರಣವಿತ್ತು ಎಂದು ಶ್ರೀಪಾಲ್ ಜೈನ್ ಅವರ ಅಜ್ಜಿ ಮೋಹಿನಿ ಜೈನ್ ಅವರು ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ. ಉತ್ತರ ವಿಭಾಗದ ಡಿಸಿಪಿ ಟಿ.ಆರ್.ಸುರೇಶ್ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಅಪಾರ್ಟ್‌ಮೆಂಟ್‌ನಲ್ಲಿ ಹೆಚ್ಚಿನ ಭದ್ರತೆ ಇದೆ. ಅಪರಿಚಿತರು ಒಳಗೆ ಪ್ರವೇಶಿಸಲು ಅವಕಾಶವಿಲ್ಲ. ಆದ್ದರಿಂದ ಇದು ಪರಿಚಿತರ ಕೃತ್ಯ ಎಂದು ಶಂಕೆ ವ್ಯಕ್ತಪಡಿಸಿದ್ದಾರೆ.

English summary
Chartered accountant Sripal Jain house robbed in Brigade Gateway apartment in Rajajinagar, North Bangalore on Monday. The robbers tied up the grandmother of the accountant and a maid who were present in the house before looting Rs 20 lakh in cash and gold ornaments weighing 300 grams. Subramanyanagar police who registered a case.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X