{ "@context": "https://schema.org", "@type": "NewsArticle", "mainEntityOfPage":{ "@type":"WebPage", "@id":"https://kannada.oneindia.com/news/bengaluru/chambal-gang-confesses-to-bangalore-murder-083543.html" }, "headline": "ಬೆಂಗಳೂರಿನಲ್ಲಿ ನಡೆದ ಕೊಲೆಗೆ ಚಂಬಲ್ ಕಣಿವೆ ನಂಟು!", "url":"https://kannada.oneindia.com/news/bengaluru/chambal-gang-confesses-to-bangalore-murder-083543.html", "image": { "@type": "ImageObject", "url": "http://kannada.oneindia.com/img/1200x60x675/2014/04/24-raghavendraauradkar.jpg", "width": "1200", "height":"675" }, "thumbnailUrl":"http://kannada.oneindia.com/img/128x50/2014/04/24-raghavendraauradkar.jpg", "datePublished": "2014-04-24 11:59:04", "dateModified": "2014-04-24T11:59:04+05:30", "author": { "@type": "Person", "url": "https://kannada.oneindia.com/authors/gururajks.html", "name": "Gururaj" }, "publisher": { "@type": "Organization", "name": "Oneindia Kannada", "url":"https://kannada.oneindia.com", "sameAs" : [ "https://www.facebook.com/oneindiakannada","https://twitter.com/oneindiakannada"], "logo": { "@type": "ImageObject", "url": "https://kannada.oneindia.com/images/amp-oneindia-logo.png", "width": "189", "height": "60" } }, "articleSection":"Bangalore", "description": "The arrest of a Chambal gang by Ahmedabad crime branch gave Bangalore police the much-needed breakthrough in the one-year-old murder case of a jewellery in Rajajinagar.", "keywords": "Rajajinagar,crime beat,murder,ರಾಜಾಜಿನಗರ,ಬೆಂಗಳೂರು,ಕ್ರೈಂ,ಪೊಲೀಸ್, Chambal Gang confesses to Bangalore murder, ರಾಜಾಜಿನಗರದಲ್ಲಿ ಕೊಲೆ ಮಾಡಿದ್ದು ಚಂಬಲ್ ಕಣಿವೆಯವರು!", "articleBody":"ಬೆಂಗಳೂರು, ಏ. 24 : ರಾಜಾಜಿನಗರದ ರಿಷಬ್ ಜ್ಯುವೆಲರ್ಸ್ ಮಾಲೀಕ ಶಂಕರ ಕುಮಾರ್ ಕೊಲೆ ಪ್ರಕರಣದಲ್ಲಿ ಚಂಬಲ್ ಕಣಿವೆ ದರೋಡೆ ಕೋರರ ಕೃತ್ಯವಿರುವುದು ಬೆಳಕಿಗೆ ಬಂದಿದೆ. ಇದರಿಂದಾಗಿ 2013ರ ಮಾರ್ಚ್ 23ರಂದು ನಡೆದ ನಿಗೂಢ ಕೊಲೆ ಪ್ರಕರಣದ ಸತ್ಯಾಂಶ ಹೊರಬಂದಿದೆ.ಅಹಮದಾಬಾದ್ ಪೊಲೀಸರು ಗುಜರಾತ್, ಉತ್ತರ ಪ್ರದೇಶ ಹಾಗೂ ರಾಜಸ್ಥಾನದಲ್ಲಿ ನಡೆದ ಮೂವರು ಚಿನ್ನಾಭರಣ ವ್ಯಾಪಾರಿಗಳ ಕೊಲೆ ಪ್ರಕರಣದ ಸಂಬಂಧ ತನಿಖೆ ನಡೆಸಲು ಮೂವರನ್ನು ಬಂಧಿಸಿದಾಗ, ರಾಜಾಜಿನಗರದ ಶ್ರವಣ ಕುಮಾರ್ ಪೋಖರ್ನೆ (45) ಕೊಲೆ ಪ್ರಕರಣವೂ ಬೆಳಕಿಗೆ ಬಂದಿದೆ. ಈ ಕುರಿತು ಅಹಮದಾಬಾದ್ ಪೊಲೀಸರು ಬೆಂಗಳೂರು ಪೊಲೀಸ್ ಆಯುಕ್ತ ರಾಘವೇಂದ್ರ ಔರಾದ್ಕರ್ ಅವರಿಗೆ ಮಾಹಿತಿ ನೀಡಿದ್ದಾರೆ.ಅಹಮದಾಬಾದ್ ಪೊಲೀಸರು ಪ್ರಕರಣದ ಸಂಬಂಧ ಮನೀಷ್& zwnj ಗೋಸ್ವಾಮಿ, ಗೌರವ್& zwnj ಟೋಮರ್& zwnj ಹಾಗೂ ವಿನಯ್& zwnj ಪಾರ್ಮರ್& zwnj ಎಂಬುವರನ್ನು ಸೋಮವಾರ ಬಂಧಿಸಿದ್ದಾರೆ. ಇವರು ರಾಜಾಜಿನಗರದಲ್ಲಿ ಶ್ರವಣ ಕುಮಾರ್ ಕೊಲೆ ಮಾಡಿ, ಚಿನ್ನಾಭರಣ ದೋಚಿದ್ದಾಗಿ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾರೆ. ಆರೋಪಿಗಳನ್ನು ಬಾಡಿ ವಾರಂಟ್& zwnj ಮೇಲೆ ವಶಕ್ಕೆ ಪಡೆಯಲು ಮಲ್ಲೇಶ್ವರ ಉಪವಿಭಾಗದ ಎಸಿಪಿ ಸಾ.ರಾ.ಫಾತಿಮಾ ನೇತೃತ್ವದ ತಂಡ ಗುರುವಾರ ಅಹಮದಾಬಾದ್& zwnj ಗೆ ತೆರಳಲಿದೆ. ರಾಜಾಜಿನಗರದಲ್ಲಿ ಜ್ಯುವೆಲ್ಲರ್ಸ್ ಮಾಲೀಕ ಕೊಲೆಹಣ ಗಳಿಸುವುದು ಮಾತ್ರ ಉದ್ದೇಶ : ಆರೋಪಿಗಳನ್ನು ವಿಚಾರಣೆ ನಡೆಸಿದಾಗ ಅಹಮದಾಬಾದ್ ಪೊಲೀಸರಿಗೆ ಹಲವು ಮಾಹಿತಿ ಲಭ್ಯವಾಗಿದೆ. ಸುಲಭವಾಗಿ ಹಣ ಗಳಿಸುವ ಉದ್ದೇಶದಿಂದ ಇವರು ಚಿನ್ನಾಭರಣ ಅಂಗಡಿಗಳನ್ನು ದೋಚುತ್ತಿದ್ದರು. ಏಕಾಏಕಿ ಅಂಗಡಿಗೆ ನುಗ್ಗುವ ಇವರು, ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಚಿನ್ನ, ಹಣ ದೋಚುತ್ತಿದ್ದರು ಎಂದು ತಿಳಿದು ಬಂದಿದೆ.ಬಂಧಿತ ಮೂವರು ವಿಶಾಲ್ ಗೋಸ್ವಾಮಿ ಅವರ ನೇತೃತ್ವದಲ್ಲಿ ಈ ಕಾರ್ಯಗಳನ್ನು ಮಾಡುತ್ತಿದ್ದರು ಎಂದು ಪೊಲೀಸರು ಹೇಳಿದ್ದಾರೆ. ಗೋಸ್ವಾಮಿ ತಲೆ ಮರಿಸಿಕೊಂಡಿದ್ದು ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. 2013ರಲ್ಲಿ ಬೇರೆ-ಬೇರೆ ರಾಜ್ಯಗಳಲ್ಲಿ ಈ ಗುಂಪು ಮೂವರು ಚಿನ್ನಾಭರಣ ವ್ಯಾಪಾರಿಗಳನ್ನು ಕೊಲೆ ಮಾಡಿರುವ ಮಾಹಿತಿ ವಿಚಾರಣೆಯಿಂದ ತಿಳಿದುಬಂದಿದೆ.ಯಾರು ಶ್ರವಣ ಕುಮಾರ್ : ವಿಧಾನಪರಿಷತ್ ಸದಸ್ಯ ಲೆಹರ್ ಸಿಂಗ್ ಅವರ ದೂರದ ಸಂಬಂಧಿಯಾದ ಶ್ರವಣ ಕುಮಾರ್, ರಾಜಸ್ಥಾನದ ಬೇಗೂನ್& zwnj ಜಿಲ್ಲೆಯವರು. 20 ವರ್ಷಗಳಿಂದ ಬೆಂಗಳೂರಿನ ಚಾಮರಾಜಪೇಟೆಯಲ್ಲಿ ನೆಲೆಸಿದ್ದ ಅವರು, ರಾಜಾಜಿನಗರದ 41ನೇ ಅಡ್ಡರಸ್ತೆಯಲ್ಲಿ ಪುತ್ರ ರಿಷಬ್ ಹೆಸರಿನಲ್ಲಿ ಚಿನ್ನಾಭರಣ ಮಳಿಗೆ ಹೊಂದಿದ್ದರು.2013ರ ಮಾ.23ರಂದು ಮಧ್ಯಾಹ್ನ 3 ಗಂಟೆ ಸುಮಾರಿಗೆ ರಿಷಬ್ ಅಂಗಡಿಗೆ ನುಗ್ಗಿದ ದುಷ್ಕರ್ಮಿಗಳು ಅವರ ಮೇಲೆ ಹಲ್ಲೆ ನಡೆಸಿ ಚಿನ್ನಾಭರಣ ದೋಚಿ ಪರಾರಿಯಾಗಿದ್ದರು. ತೀವ್ರ ರಕ್ತಸ್ರಾವವಾಗಿ ಶ್ರವಣ್ ಕುಮಾರ್ ಸ್ಥಳದಲ್ಲೇ ಸಾವನ್ನಪ್ಪಿದ್ದರು. ಮಳಿಗೆಯಲ್ಲಿದ್ದ ಸಿಸಿಟಿವಿ ಕ್ಯಾಮೆರಾ ಮತ್ತು ರೆಕಾರ್ಡರ್& zwnj ಗಳನ್ನು ದುಷ್ಕರ್ಮಿಗಳು ಹೊತ್ತುಕೊಂಡು ಹೋಗಿದ್ದರಿಂದ ಪ್ರಕರಣ ನಿಗೂಢವಾಗಿ ಉಳಿದಿತ್ತು." }
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿನಲ್ಲಿ ನಡೆದ ಕೊಲೆಗೆ ಚಂಬಲ್ ಕಣಿವೆ ನಂಟು!

|
Google Oneindia Kannada News

ಬೆಂಗಳೂರು, ಏ. 24 : ರಾಜಾಜಿನಗರದ ರಿಷಬ್ ಜ್ಯುವೆಲರ್ಸ್ ಮಾಲೀಕ ಶಂಕರ ಕುಮಾರ್ ಕೊಲೆ ಪ್ರಕರಣದಲ್ಲಿ ಚಂಬಲ್ ಕಣಿವೆ ದರೋಡೆ ಕೋರರ ಕೃತ್ಯವಿರುವುದು ಬೆಳಕಿಗೆ ಬಂದಿದೆ. ಇದರಿಂದಾಗಿ 2013ರ ಮಾರ್ಚ್ 23ರಂದು ನಡೆದ ನಿಗೂಢ ಕೊಲೆ ಪ್ರಕರಣದ ಸತ್ಯಾಂಶ ಹೊರಬಂದಿದೆ.

ಅಹಮದಾಬಾದ್ ಪೊಲೀಸರು ಗುಜರಾತ್, ಉತ್ತರ ಪ್ರದೇಶ ಹಾಗೂ ರಾಜಸ್ಥಾನದಲ್ಲಿ ನಡೆದ ಮೂವರು ಚಿನ್ನಾಭರಣ ವ್ಯಾಪಾರಿಗಳ ಕೊಲೆ ಪ್ರಕರಣದ ಸಂಬಂಧ ತನಿಖೆ ನಡೆಸಲು ಮೂವರನ್ನು ಬಂಧಿಸಿದಾಗ, ರಾಜಾಜಿನಗರದ ಶ್ರವಣ ಕುಮಾರ್ ಪೋಖರ್ನೆ (45) ಕೊಲೆ ಪ್ರಕರಣವೂ ಬೆಳಕಿಗೆ ಬಂದಿದೆ. ಈ ಕುರಿತು ಅಹಮದಾಬಾದ್ ಪೊಲೀಸರು ಬೆಂಗಳೂರು ಪೊಲೀಸ್ ಆಯುಕ್ತ ರಾಘವೇಂದ್ರ ಔರಾದ್ಕರ್ ಅವರಿಗೆ ಮಾಹಿತಿ ನೀಡಿದ್ದಾರೆ.

Bangalore Police

ಅಹಮದಾಬಾದ್ ಪೊಲೀಸರು ಪ್ರಕರಣದ ಸಂಬಂಧ ಮನೀಷ್‌ ಗೋಸ್ವಾಮಿ, ಗೌರವ್‌ ಟೋಮರ್‌ ಹಾಗೂ ವಿನಯ್‌ ಪಾರ್ಮರ್‌ ಎಂಬುವರನ್ನು ಸೋಮವಾರ ಬಂಧಿಸಿದ್ದಾರೆ. ಇವರು ರಾಜಾಜಿನಗರದಲ್ಲಿ ಶ್ರವಣ ಕುಮಾರ್ ಕೊಲೆ ಮಾಡಿ, ಚಿನ್ನಾಭರಣ ದೋಚಿದ್ದಾಗಿ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾರೆ. ಆರೋಪಿಗಳನ್ನು ಬಾಡಿ ವಾರಂಟ್‌ ಮೇಲೆ ವಶಕ್ಕೆ ಪಡೆಯಲು ಮಲ್ಲೇಶ್ವರ ಉಪವಿಭಾಗದ ಎಸಿಪಿ ಸಾ.ರಾ.ಫಾತಿಮಾ ನೇತೃತ್ವದ ತಂಡ ಗುರುವಾರ ಅಹಮದಾಬಾದ್‌ ಗೆ ತೆರಳಲಿದೆ. [ರಾಜಾಜಿನಗರದಲ್ಲಿ ಜ್ಯುವೆಲ್ಲರ್ಸ್ ಮಾಲೀಕ ಕೊಲೆ]

ಹಣ ಗಳಿಸುವುದು ಮಾತ್ರ ಉದ್ದೇಶ : ಆರೋಪಿಗಳನ್ನು ವಿಚಾರಣೆ ನಡೆಸಿದಾಗ ಅಹಮದಾಬಾದ್ ಪೊಲೀಸರಿಗೆ ಹಲವು ಮಾಹಿತಿ ಲಭ್ಯವಾಗಿದೆ. ಸುಲಭವಾಗಿ ಹಣ ಗಳಿಸುವ ಉದ್ದೇಶದಿಂದ ಇವರು ಚಿನ್ನಾಭರಣ ಅಂಗಡಿಗಳನ್ನು ದೋಚುತ್ತಿದ್ದರು. ಏಕಾಏಕಿ ಅಂಗಡಿಗೆ ನುಗ್ಗುವ ಇವರು, ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಚಿನ್ನ, ಹಣ ದೋಚುತ್ತಿದ್ದರು ಎಂದು ತಿಳಿದು ಬಂದಿದೆ.

ಬಂಧಿತ ಮೂವರು ವಿಶಾಲ್ ಗೋಸ್ವಾಮಿ ಅವರ ನೇತೃತ್ವದಲ್ಲಿ ಈ ಕಾರ್ಯಗಳನ್ನು ಮಾಡುತ್ತಿದ್ದರು ಎಂದು ಪೊಲೀಸರು ಹೇಳಿದ್ದಾರೆ. ಗೋಸ್ವಾಮಿ ತಲೆ ಮರಿಸಿಕೊಂಡಿದ್ದು ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. 2013ರಲ್ಲಿ ಬೇರೆ-ಬೇರೆ ರಾಜ್ಯಗಳಲ್ಲಿ ಈ ಗುಂಪು ಮೂವರು ಚಿನ್ನಾಭರಣ ವ್ಯಾಪಾರಿಗಳನ್ನು ಕೊಲೆ ಮಾಡಿರುವ ಮಾಹಿತಿ ವಿಚಾರಣೆಯಿಂದ ತಿಳಿದುಬಂದಿದೆ.

ಯಾರು ಶ್ರವಣ ಕುಮಾರ್ : ವಿಧಾನಪರಿಷತ್ ಸದಸ್ಯ ಲೆಹರ್ ಸಿಂಗ್ ಅವರ ದೂರದ ಸಂಬಂಧಿಯಾದ ಶ್ರವಣ ಕುಮಾರ್, ರಾಜಸ್ಥಾನದ ಬೇಗೂನ್‌ ಜಿಲ್ಲೆಯವರು. 20 ವರ್ಷಗಳಿಂದ ಬೆಂಗಳೂರಿನ ಚಾಮರಾಜಪೇಟೆಯಲ್ಲಿ ನೆಲೆಸಿದ್ದ ಅವರು, ರಾಜಾಜಿನಗರದ 41ನೇ ಅಡ್ಡರಸ್ತೆಯಲ್ಲಿ ಪುತ್ರ ರಿಷಬ್ ಹೆಸರಿನಲ್ಲಿ ಚಿನ್ನಾಭರಣ ಮಳಿಗೆ ಹೊಂದಿದ್ದರು.

2013ರ ಮಾ.23ರಂದು ಮಧ್ಯಾಹ್ನ 3 ಗಂಟೆ ಸುಮಾರಿಗೆ ರಿಷಬ್ ಅಂಗಡಿಗೆ ನುಗ್ಗಿದ ದುಷ್ಕರ್ಮಿಗಳು ಅವರ ಮೇಲೆ ಹಲ್ಲೆ ನಡೆಸಿ ಚಿನ್ನಾಭರಣ ದೋಚಿ ಪರಾರಿಯಾಗಿದ್ದರು. ತೀವ್ರ ರಕ್ತಸ್ರಾವವಾಗಿ ಶ್ರವಣ್ ಕುಮಾರ್ ಸ್ಥಳದಲ್ಲೇ ಸಾವನ್ನಪ್ಪಿದ್ದರು. ಮಳಿಗೆಯಲ್ಲಿದ್ದ ಸಿಸಿಟಿವಿ ಕ್ಯಾಮೆರಾ ಮತ್ತು ರೆಕಾರ್ಡರ್‌ಗಳನ್ನು ದುಷ್ಕರ್ಮಿಗಳು ಹೊತ್ತುಕೊಂಡು ಹೋಗಿದ್ದರಿಂದ ಪ್ರಕರಣ ನಿಗೂಢವಾಗಿ ಉಳಿದಿತ್ತು.

English summary
The arrest of a Chambal gang by Ahmedabad crime branch gave Bangalore police the much-needed breakthrough in the one-year-old murder case of a jewellery in Rajajinagar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X