ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

21 ಲಕ್ಷ ಜನರಿಗೆ ಹೊಸ ಪಡಿತರ ಚೀಟಿ

By Ashwath
|
Google Oneindia Kannada News

Dinesh Gundu Rao
ಬೆಂಗಳೂರು, ಜು.17: ಇನ್ನು ಮೂರು ತಿಂಗಳಲ್ಲಿ ಹೊಸದಾಗಿ ಅರ್ಜಿ ಸಲ್ಲಿಸಿರುವ 21 ಲಕ್ಷ ಮಂದಿಗೆ ಪಡಿತರ ಚೀಟಿ ವಿತರಿಸಲಾಗುವುದು ಎಂದು ಎಂದು ಆಹಾರ ಮತ್ತು ನಾಗರೀಕ ಸರಬರಾಜು ಸಚಿವ ದಿನೇಶ್ ಗುಂಡೂರಾವ್ ವಿಧಾನಸಭೆಯಲ್ಲಿ ತಿಳಿಸಿದರು.

ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಬೇಡಿಕೆ ಮೇಲೆ ನಡೆದ ಚರ್ಚೆಗೆ ಉತ್ತರಿಸಿದ ಅವರು, ಹೊಸ ಪಡಿತರ ಚೀಟಿಗಾಗಿ 41.34 ಲಕ್ಷ ಅರ್ಜಿ ಬಂದಿದ್ದು, ಈಗಾಗಲೇ 11.59
ಲಕ್ಷ ಜನರಿಗೆ ಕಾರ್ಡ್ ನೀಡಲಾಗಿದೆ. 4.70 ಲಕ್ಷ ಕಾರ್ಡ್ ಮುದ್ರಣವಾಗಿದ್ದು, ಇನ್ನೂ 21 ಲಕ್ಷ ಹೊಸ ಪಡಿತರ ಚೀಟಿ ನೀಡಬೇಕಾಗಿದೆ ಎಂದು ವಿವರಿಸಿದರು.[ಪಡಿತರ ಚೀಟಿಗೆ ಚುನಾವಣಾ ಗುರುತಿನ ಚೀಟಿ ಕಡ್ಡಾಯ]

ಪಡಿತರ ಚೀಟಿ ಚುನಾವಣಾ ಗುರುತು ಚೀಟಿ ಕಡ್ಡಾಯ ಮಾಡಿದ ಬಳಿಕ ಈಗ 8 ಲಕ್ಷ ನಕಲಿ ಪಡಿತರ ಚೀಟಿ ರದ್ದುಪಡಿಸಲಾಗಿದೆ. 80 ಲಕ್ಷ ಕಾರ್ಡ್‌ದಾರರು ಈಗಾಲೇ ಎಸ್‌ಎಂಎಸ್ ಕಳುಹಿಸಿದ್ದು, ಆರು ತಿಂಗಳಲ್ಲಿ ಪಡಿತರ ಚೀಟಿಯೊಂದಿಗೆ ಹೊಂದಾಣಿಕೆ ಮಾಡಲಾಗುವುದು ಎಂದು ತಿಳಿಸಿದರು.

ಪಡಿತರ ಅಕ್ಕಿ ಕಾಳ ಸಂತೆಯಲ್ಲಿ ಮಾರಾಟ ಮಾಡುವುದನ್ನು ನಿಯಂತ್ರಿಸಲು ಸರ್ಕಾರ ಕ್ರಮ ಕೈಗೊಂಡಿದೆ. ಕಾಳಸಂತೆ ಸಾಗಾಣಿಕೆ ಅಕ್ಕಿಯನ್ನು ಇಲಾಖೆ ವತಿಯಿಂದ ವಶಪಡಿಸಿ ಕೊಳ್ಳಲಾಗಿದೆ. ಈ ಸಂಬಂಧ ಒಂದು ಸಮಿತಿ ರಚಿಸಲಿದ್ದು, ವಿಚಾರಣೆ ನಡೆಸಿ 6 ತಿಂಗಳ ಜೈಲು ಶಿಕ್ಷೆ ವಿಧಿಸಲು ಕಾನೂನು ರೀತಿ ಕ್ರಮ ಕೈಗೊಳ್ಳಲಾಗುವುದು ಎಂದರು.

English summary
27 days Karnataka Assembly Monsoon session Day 19 highlights. Food and civil supplies minister Dinesh Gundu Rao said"The government is keen on eliminating bogus cardholders who are affecting the efficiency of the Anna Bhagya scheme. We conducted several drives in the past and cancelled about 8 lakh bogus cards".
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X