ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನೀರಿನ ಸೋರಿಕೆ ತಡೆಗಟ್ಟಲು ಜಲಮಂಡಳಿ ಸಜ್ಜು

|
Google Oneindia Kannada News

ಬೆಂಗಳೂರು, ಅ.1 : ನೀರು ಪೋಲಾಗುವುದನ್ನು ತಡೆಗಟ್ಟಲು ಬೆಂಗಳೂರು ಜಲಮಂಡಳಿ ದಿಟ್ಟ ಕ್ರಮ ಅನುಸರಿಸಿದೆ. ಮುಖ್ಯ ಪೈಪ್‌ಲೈನ್‌ಗಳಿಗೆ ಬಲ್ಕ್‌ಫ್ಲೋ ಮೀಟರ್ ಅಳವಡಿಸುವ ಮೂಲಕ ನೀರು ಅನಗತ್ಯವಾಗಿ ಪೋಲಾಗುವುದನ್ನು ತಡೆಯಲು ಪ್ರಯತ್ನ ನಡೆಸಿದೆ.

ಬೆಂಗಳೂರಿನಲ್ಲಿ 218 ಮುಖ್ಯ ಪೈಪ್‌ಲೈನ್‌ಗಳಿಗೆ ಪ್ರಾಯೋಗಿಕವಾಗಿ ಮೀಟರ್ ಗಳನ್ನು ಈಗಾಗಲೇ ಅಳವಡಿಸಲಾಗಿದೆ. ಈ ಮೀಟರ್ ಸಹಾಯದಿಂದಾಗಿ ಕೇಂದ್ರದಲ್ಲಿಯೇ ಪೈಪ್ ನಲ್ಲಿ ಹರಿಯುವ ನೀರಿನ ಪ್ರಮಾಣ ಎಷ್ಟು? ಪೋಲಾಗುತ್ತಿರುವ ಪ್ರಮಾಣ ಎಷ್ಟು? ಎನ್ನುವ ಮಾಹಿತಿ ಲಭ್ಯವಾಗಲಿದೆ.

bwssb

ಪೈಪ್ ಲೈನ್ ಗಳಿಂದ ನೀರು ಪೋಲಾಗುತ್ತಿದ್ದರೆ, ಅದನ್ನು ತಕ್ಷಣ ಪತ್ತೆ ಹಚ್ಚುವಂತೆ ಬಲ್ಕ್‌ಫ್ಲೋ ಮೀಟರ್ ನಲ್ಲಿ ತಂತ್ರಜ್ಞಾನ ಆಳವಡಿಸಲಾಗಿದೆ. ಇದರ ಸಹಾಯದಿಂದ ನೀರು ಪೋಲಾಗುತ್ತಿದ್ದರೆ, ತಕ್ಷಣ ಅದರ ಮಾಹಿತಿ ಪಡೆದು ದುರಸ್ತಿ ಮಾಡಬಹುದಾಗಿದೆ.

ಜಲಮಂಡಳಿಯ ಅಧಿಕಾರಿಗಳು ನೀಡುವ ಮಾಹಿತಿಯಂತೆ, ನಗರಕ್ಕೆ ಪ್ರತಿದಿನ ಪೂರೈಕೆಯಾಗುತ್ತಿರುವ ನೀರಿನಲ್ಲಿ ಶೇ.40ರಷ್ಟು ಪೋಲಾಗುತ್ತಿದೆ. ಕೊಳವೆ ಮಾರ್ಗ ಒಡೆದಿರುವುದು, ಸೋರಿಕೆಯಿಂದ ಹೀಗೆ ನೀರು ಪೋಲಾಗುತ್ತಿದೆ. ಇದನ್ನು ಶೇ. 16ಕ್ಕೆ ಇಳಿಸಲು ಜಲಮಂಡಳಿ ನಿರ್ಧರಿಸಿದೆ.

ಬಲ್ಕ್ ಫ್ಲೋ ಮೀಟರ್ ದಾಖಲಾದ ನೀರಿನ ಹರಿವಿನ ಪ್ರಮಾಣವನ್ನು ಮೊದಲು ಸಿಬ್ಬಂದಿ ಪರಿಶೀಲಿಸಿ ಎಸ್‌ಎಂಎಸ್ ಮೂಲಕ ಜಲಮಂಡಳಿಗೆ ಮಾಹಿತಿ ನೀಡುತ್ತಿದ್ದರು. ಆಗ ಪರಿಶೀಲನೆ ನಡೆಸಿದಾಗ ಮಾತ್ರ ನೀರು ಪೋಲಾಗುವುದು ಪತ್ತೆಯಾಗುತ್ತಿತ್ತು.

ಸದ್ಯ ಐಬಿಎಂ ಸಂಸ್ಥೆ ಸಹಯೋಗದಲ್ಲಿ ಅಭಿವೃದ್ಧಿ ಪಡಿಸಿರುವ ಹೊಸ ಸಾಫ್ಟ್‌ವೇರ್ ಮೂಲಕ ನೀರು ಹರಿವಿನ ಪ್ರತಿ ಕ್ಷಣದ ಮಾಹಿತಿಯೂ ಗ್ರಾಫಿಕ್ ಮಾದರಿಯಲ್ಲಿ ಜಲಮಂಡಳಿಗೆ ಲಭ್ಯವಾಗಲಿವೆ. ನೀರು ಪೋಲಾಗುವುದು ಸಹ ತಕ್ಷಣ ತಿಳಿದು ಬರಲಿದೆ.

ಮೀಟರ್ ಮೂಲಕ ಪ್ರತಿ ವಿಭಾಗಕ್ಕೆ ಹರಿಯುವ ನೀರಿನ ಪ್ರಮಾಣ, ಅದರಲ್ಲಿ ಗ್ರಾಹಕರ ಮನೆ ಸೇರುವ ಪ್ರಮಾಣ, ಗ್ರಾಹಕರಿಗೆ ಸೇರಿದ ನೀರಿನಿಂದ ಬಂದ ಆದಾಯ ಮುಂತಾದವುಗಳ ಮಾಹಿತಿ ಲಭ್ಯವಾಗಲಿದೆ. ಯಾವ ವಿಭಾಗದಲ್ಲಿ ಸೋರಿಕೆ ಕಂಡುಬಂದಿದೆ ಎಂದು ಅಧಿಕಾರಿಗಳು ತಕ್ಷಣ ಮಾಹಿತಿ ನೀಡುತ್ತಾರೆ.

ಈ ಮೀಟರ್ ಅಳವಡಿಕೆ ಮೂಲಕ ನೀರಿನ ಸೋರಿಕೆಯನ್ನು ತಡೆಗಟ್ಟಲು ಸಹಾಯಕವಾಗಲಿದೆ ಎಂಬುದು ಜಲಮಂಡಳಿ ಅಧಿಕಾರಿಗಳ ಅಭಿಪ್ರಾಯ. ಇದರಿಂದಾಗಿ ನಗರದ ರಸ್ತೆಗಳಲ್ಲಿ ಅಲ್ಲಲ್ಲಿ ನೀರಿನ ಪೈಪ್ ಒಡೆದು ನೀರು ಪೋಲಾಗುವುದು ತಪ್ಪಬಹುದು.

English summary
Bangalore Water Supply and Sewerage Board (BWSSB) introduced bulk flow meters for its water transmission and distribution feeder network throughout Bangalore city. by this water wastage complaints would come down in the city.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X