ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅನಂತಮೂರ್ತಿ ಗೋಮಾಂಸ ಹೇಳಿಕೆಗೆ ಬ್ರಾಹ್ಮಣರ ಖಂಡನೆ

By Mahesh
|
Google Oneindia Kannada News

ಬೆಂಗಳೂರು, ಸೆ.27: ಜ್ಞಾನಪೀಠ ವಿಜೇತ, ಹಿರಿಯ ಸಾಹಿತಿ ಡಾ. ಯುಆರ್ ಅನಂತಮೂರ್ತಿ ಅವರು ಮೋದಿ ಬಗ್ಗೆ ನೀಡಿದ ಹೇಳಿಕೆಗೆ ಬಂದಿರುವ ಟೀಕಾಸ್ತ್ರಗಳಿಗೆ ಉತ್ತರ ನೀಡುವ ಹೊತ್ತಿಗೆ ಮತ್ತೊಂದು ವಿವಾದ ಹುಟ್ಟಿಕೊಂಡಿದೆ.

"ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಪ್ರಧಾನಿಯಾದರೆ, ಭಾರತ ದೇಶವನ್ನಲ್ಲ ಕರ್ನಾಟಕವನ್ನು ಬಿಟ್ಟು ಹೋಗುವುದಿಲ್ಲ" ಎಂದು ಜ್ಞಾನಪೀಠ ಪುರಸ್ಕೃತ ಸಾಹಿತಿ ಯು.ಆರ್.ಅನಂತಮೂರ್ತಿಅವರು ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಇತ್ತೀಚೆಗೆ ಸ್ಪಷ್ಟಪಡಿಸಿದ್ದರು. [ಸುದ್ದಿಗೋಷ್ಠಿ ವಿವರ ಇಲ್ಲಿ ಓದಿ]

ಇದೇ ಸುದ್ದಿಗೋಷ್ಠಿಯಲ್ಲಿ ಮಾಧ್ಯಮದವರು ಕೇಳಿದ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ವೇದಕಾಲದಲ್ಲಿ ಬ್ರಾಹ್ಮಣರು ಮಾಂಸಭಕ್ಷಕರಾಗಿದ್ದರು. ಯಜ್ಞ ಯಾಗಾದಿ ಸಂದರ್ಭಗಳಲ್ಲಿ ಗೋ ಹತ್ಯೆ ಮಾಡಲಾಗುತ್ತಿತ್ತು ಎಂದರು ಜತೆಗೆ ಬ್ರಾಹ್ಮಣರು ಕೂಡಾ ಗೋಮಾಂಸ ಭಕ್ಷಕರಾಗಿದ್ದರು ಎಂದು ಹೇಳಿಕೆ ನೀಡಿದ್ದರು.

ಈಗ ಈ ಹೇಳಿಕೆ ವಿವಾದಕ್ಕೆ ಕಾರಣವಾಗಿದ್ದು, ಎಲ್ಲೆಡೆ ಇದರ ಪರ ವಿರೋಧ ಚರ್ಚೆ ನಡೆಯುತ್ತಿದೆ. ಬ್ರಾಹ್ಮಣ ಸಮುದಾಯದ ವಿರುದ್ಧ ಅವಹೇಳನಕರಿ ಹೇಳಿಕೆ ನೀಡಿರುವ ಸಾಹಿತಿ ಯುಆರ್ ಅನಂತಮೂರ್ತಿ ಅವರಿಗೆ ಸೂಕ್ತ ಉತ್ತರ ನೀಡಲು ಬ್ರಾಹ್ಮಣ ಸಮುದಾಯ ಸಜ್ಜಾಗುತ್ತಿದೆ.

ಯುಆರ್ ಅನಂತಮೂರ್ತಿ ಅವರ ವಿರುದ್ಧ ಫೇಸ್ ಬುಕ್ ನಲ್ಲಿ ಆರಂಭಗೊಂಡಿದ್ದ ಮನಿಆರ್ಡರ್ ಚಳವಳಿ ಮಾದರಿಯಲ್ಲೇ ಬ್ರಾಹ್ಮಣ ಸಭಾದವರು ಅಂಚೆ ಕಾರ್ಡ್ ಚಳವಳಿ ಶುರು ಮಾಡಲು ಚಿಂತನೆ ನಡೆಸಿದ್ದಾರೆ. ಏನಿದು ಅಂಚೆ ಚಳವಳಿ, ಓದುಗರ ಪ್ರತಿಕ್ರಿಯೆ ಏನಿದೆ, ಯಾಕೆ ಈ ರೀತಿ ಚಳವಳಿ ಎಂಬುದನ್ನು ಮುಂದೆ ಓದಿ..

ಮನಿ ಆರ್ಡರ್ ಚಳವಳಿ

ಮನಿ ಆರ್ಡರ್ ಚಳವಳಿ

ಮೋದಿ ಆಡಳಿತದ ಭಾರತದಲ್ಲಿ ನೆಲೆಸಲು ಸಾಧ್ಯವಿಲ್ಲದಿದ್ದರೆ ದೇಶ ತೊರೆಯಬಹುದು ಎಂದು ಫರ್ಮಾನು ಹೊರಡಿಸಿ. ವಿದೇಶಿ ಯಾತ್ರೆಗೆ ಹಣ ಸಾಲದಿದ್ದರೆ ಮನಿ ಆರ್ಡರ್ ಕಳಿಸಲು ರೆಡಿ ಎಂದು ಅನಂತಮೂರ್ತಿ ಅವರ ಆರ್ ಎಂವಿ ಎರಡನೇ ಹಂತದಲ್ಲಿರುವ ಮನೆ ವಿಳಾಸಕ್ಕೆ ಮನಿ ಆರ್ಡರ್ 12 ರು ಕಳಿಸಲಾಗಿದೆ.

ಫೇಸ್ ಬುಕ್ ಚಳವಳಿ

ಫೇಸ್ ಬುಕ್ ಚಳವಳಿ

ಮಂಗಳೂರಿನ ನಮೋ ಬ್ರಿಗೇಡ್ ನ ಸದಸ್ಯರೆಲ್ಲರೂ ಮನಿ ಆರ್ಡರ್ ಕಳಿಸಲು ಇಚ್ಛಿಸಿದ್ದಾರೆ. ಭಾರತೀಯರಾಗಿ ನಾವು ಮೋದಿ ಅವರನ್ನು ಬೆಂಬಲಿಸಬೇಕು. ಒಂದು ವೇಳೆ ಸೋನಿಯಾ ಗಾಂಧಿ ಪ್ರಧಾನಿಯಾದರೆ ನಾನೇನು ಓಡಿ ಹೋಗುವುದಿಲ್ಲ. ದೇಶ ಮೊದಲು ನಂತರ ವ್ಯಕ್ತಿ ಎಂದು ಸಾಮಾಜಿಕ ಜಾಲ ತಾಣ ಫೇಸ್ ಬುಕ್ ನಲ್ಲಿ ಅಭಿಯಾನ ಆರಂಭಿಸಿದ ನರೇಶ್ ಶೆಣೈ ಹೇಳಿದ್ದಾರೆ

ಅಂಚೆ ಕಾರ್ಡ್ ಚಳವಳಿ

ಅಂಚೆ ಕಾರ್ಡ್ ಚಳವಳಿ

ಈಗ ಯುಆರ್ ಅನಂತಮೂರ್ತಿ ಹೇಳಿಕೆ ವಿರುದ್ಧ ಅಸಹನೆ ವ್ಯಕ್ತಪಡಿಸಿರುವ ಬ್ರಾಹ್ಮಣ ಸಮುದಾಯ ಅಂಚೆ ಚಳವಳಿಗೆ ಮುಂದಾಗಿದೆ.

ಸಮಾಜದಲ್ಲಿರುವ ಎಲ್ಲಾ ವರ್ಗದ ಜನರ ಪ್ರೀತಿಗೆ ಪಾತ್ರವಾಗಿರುವ ಸಹನೆಗೆ ಹೆಸರುವಾಸಿಯಾಗಿರುವ ಬ್ರಾಹ್ಮಣ ಸಮುದಾಯದ ಬಗ್ಗೆ ಅಪಪ್ರಚಾರ ಮಾಡಲಾಗಿದೆ. ಯುಅರ್ ಎ ಅವರ ಹೇಳಿಕೆ ಖಂಡಿಸಿ ಸಮುದಾಯ ಪ್ರತಿಯೊಬ್ಬರು ಅಂಚೆ ಕಾರ್ಡ್ ಚಳವಳಿ ಹಮ್ಮಿಕೊಳ್ಳಬೇಕು ಎಂದು ಬ್ರಾಹ್ಮಣ ಮಹಾಸಭಾದ ಗೌರವಾಧ್ಯಕ್ಷ ಬಿಎನ್ ವಿ ಸುಬ್ರಮಣ್ಯ ಕರೆ ನೀಡಿದ್ದಾರೆ.

ಓದುಗರ ಪ್ರತಿಕ್ರಿಯೆ

ಓದುಗರ ಪ್ರತಿಕ್ರಿಯೆ

ಅನಂತ ಮೂರ್ತಿ ಹುಟ್ಟಿನಲ್ಲಿ ಮಾತ್ರ ಬ್ರಾಹ್ಮಣನಾಗಿದ್ದು . ಕ್ರೈಸ್ತ ಮಹಿಳೆ ಯನ್ನು ಮದುವೆಯಾದ ನಂತರ ಹಿಂದೂ ಧರ್ಮ ಅವಹೇಳನೆ ನಿಂದೆ ಮಾಡುವ ದಂಧೆ ಮಾಡುತ್ತಿದ್ದಾನೆ. ಹಿಂದೂ ಧರ್ಮಿಯರನ್ನು ಅವಹೇಳನೆ ಮಾಡಿ ಮಿಷನರಿ ಸಂಸ್ಥೆ ಗಳಿಂದ ಹೇರಳ ಹಣ ಹಾಗೂ ವಾಶಿಲಿ ಬಾಜಿ ನಡೆಸಿ ಪ್ರಶಸ್ತಿ ಪಡೆಯುವಲ್ಲಿ ಯಶಸ್ವಿಯಾಗಿದ್ದಾನೆ . ಧರ್ಮ ವಿರೋದಿ ಚಟುವಟಿಕೆ ಗಳಿಂದ ಅನಂತ ಮೂರ್ತಿ ಗೆ ತಗಲಿದ ಈ ಮನೋ ವಿಕೃತಿ ರೋಗಕ್ಕೆ ವೈಜ್ಞಾನಿಕ ವಾಗಿ ಯಾವುದೇ ಮದ್ದಿಲ್ಲ ಎಂದು ರಾಘವೇಂದ್ರ ನಾವಡ

ಹೇಳಿಕೆ ಮಹತ್ವ ಏಕೆ?

ಹೇಳಿಕೆ ಮಹತ್ವ ಏಕೆ?

ಅನಂತ ಮೂರ್ತಿಯವರು ಹೇಳಿದ್ದು ಏಕೆ ಅಂತ ಒಮ್ಮೆ ಜನ ಯೋಚಿಸಬೇಕು, ನಮ್ಮಲ್ಲಿ ಪ್ರದಾನಿ ಯಾರು ಅನ್ನೋದ್ದಕ್ಕಿಂತ ಶಾಂತಿ ಮುಖ್ಯ.

ನಮ್ಮ ದೇಶ ಈಜಿಪ್ಟ್ ಮತ್ತು ಸಿರಿಯದ್ಹ್ ರೀತಿ ಆಗಬಾರದು, ದೇಶದಲ್ಲಿ ಕಳೆದ ಹತ್ತು ವರ್ಷದಲ್ಲಿ ಒಬ್ಬರೇ ಪ್ರಧಾನಿ, ಬಿ.ಜೆ.ಪಿ ಬಂದರೆ ವರ್ಷದಲ್ಲಿ ಹತ್ತು ಜನ ಪ್ರದಾನಿ ಆಗುವುದನ್ನು ನೋಡಬಹುದು.

ಕರ್ನಾಟಕದಲ್ಲಿ ನೋಡಿ ಅಗಿದೆ ಮೋದಿ ಏನ್ ಮಾಡಿದ್ಧಾರೆ ಅಂತ ಅವರ ಬಗ್ಗೆ ಅಷ್ಟು ಪ್ರಚಾರ.ನಮ್ಮ ಕರ್ನಾಟಕದಲ್ಲೂ ಪ್ರಧಾನಿ ಅಗೋ ಹರ್ಹತೆ ಯಾರಿಗೂ ಇಲ್ವಾ? ಮೋದಿ ಕೇವಲ ಮೇಲ್ವರ್ಗದ ಶ್ರೀಮಂತರ ದೊಡ್ಡ ದೊಡ್ಡ ರಿಯಲ್ ಎಸ್ಟೇಟ್ ನವರ ನಾಯಕ, ಬಡವರ ನಾಯಕ ಅಲ್ಲ-,kannadiga

ಉಡುಪಿ ಬ್ರಾಹ್ಮಣರ ವಿರೋಧ

ಉಡುಪಿ ಬ್ರಾಹ್ಮಣರ ವಿರೋಧ

ಯುಆರ್ ಅನಂತಮೂರ್ತಿಗೆ ಸಿಕ್ಕಿರುವುದು ಜ್ಞಾನಪೀಠ ಪ್ರಶಸ್ತಿಯೇ ವಿನ್ಹ, ಸರ್ವಜ್ಞ ಪ್ರಶಸ್ತಿ ಅಲ್ಲ, ವೇದಾಧ್ಯಯನದಲ್ಲಂತೂ ಜ್ಞಾನಪೀಠ ಪುರಸ್ಕೃತರಂತೂ ಅಲ್ಲ ಎಂದು ವಿಶೇಷವಾಗಿ ಹೇಳಬೇಕಾಗಿಲ್ಲ

ಸನಾತನ ಹಿಂದೂ ಧರ್ಮದ ಅನುಯಾಯಿಗಳಿಗೆ ಈ ಹೇಳಿಕೆ ದುಃಖವನ್ನು ತಂದುಕೊಟ್ಟಿದೆ. ಎಲ್ಲಾ ಬ್ರಾಹ್ಮಣ ಸಮುದಾಯಕ್ಕೆ ಬೇಸರ ತಂದಿದೆ. ಗೋಹತ್ಯೆ ಭಕ್ಷಕರು ಎಂಬ ಯಾವ ಮಂತ್ರವೂ ಇಲ್ಲ. ಅನಂತಮೂರ್ತಿಗಳು ವೇದಗಳ ವಿಶೇಷದಲ್ಲಿ ಅಜ್ಞಾನಿಗಳು ಎಂದು ಉಡುಪಿಯ ಡಾ. ಶಿವಪ್ರಸಾದ್ ತಂತ್ರಿ, ಪಂಡಿತ ನರಸಿಂಹಾಚಾರ್ಯ, ರಾಮಚಂದ್ರ ಭಟ್, ಸೋಂದಾ ಭಾಸ್ಕರ ಭಟ್ ನ್ಯಾಯವಾದಿ ಪಿ.ಪಿ ಹೆಗಡೆ ಅವರು ಪತ್ರಿಕಾ ಹೇಳಿಕೆ ನೀಡಿದ್ದಾರೆ.

English summary
Akhila Karnataka Brahmin Mahasabha President BNV Subramanya said Writer Dr UR Ananthamurthy has mis quoted Vedic verses and humiliated Brahmin community he will face postcard revolution. Prof. URA allegedly said Brahmins ate Beef during Vedic period
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X