ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಗಣೇಶನ ಬಗ್ಗೆ ವರ್ಮಾ ಅಣುಕು ಟ್ವೀಟ್ ರಾದ್ಧಾಂತ

By Mahesh
|
Google Oneindia Kannada News

ಮುಂಬೈ, ಆ.29: ಎಲ್ಲದರಲ್ಲೂ ಮೂಗು ತೂರಿಸಿ ಮುಖಕ್ಕೆ ಮಸಿ ಬಳಿದುಕೊಳ್ಳುವ ಜಾಯಮಾನದ ಬೋಲ್ಡ್ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ತಮ್ಮ ಭೋಳೆತನ ಪ್ರದರ್ಶಿಸಲು ಹೋಗಿ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಸಂಕಷ್ಟ ಹರ ಎನಿಸಿರುವ ಗಣಪತಿಯ ಹುಟ್ಟು, ಆಕೃತಿ, ಪೂಜೆ ಬಗ್ಗೆ ತಮ್ಮ ಅಜ್ಞಾನ ಪ್ರದರ್ಶಿಸಿದ್ದಲ್ಲದೆ ಅಣುಕು ಟ್ವೀಟ್ ಗಳನ್ನು ಮಾಡುವ ಮೂಲಕ ಹಿಂದೂ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಗಣೇಶ ಚತುರ್ಥಿ ಆಚರಣೆಯ ಸಂಭ್ರಮದಲ್ಲಿ ಇಡೀ ದೇಶ ಮುಳುಗಿರುವಾಗ ವರ್ಮಾ ಮಾತ್ರ ಓತಪ್ರೋತವಾಗಿ ತಮ್ಮ ಅನಿಸಿಕೆಗಳನ್ನು ಸಾಮಾಜಿಕ ಜಾಲ ತಾಣ ಟ್ವಿಟ್ಟರ್ ನಲ್ಲಿ ಹರಿದಾಡಿಸಿ ಬಿಜೆಪಿಯ ಕೋಪಕ್ಕೆ ತುತ್ತಾಗಿದ್ದಾರೆ.

ನಾನು ಗಣಪತಿ ವಿಷಯದಲ್ಲಿ ತುಂಬಾ ಮುಗ್ಧ ದಯವಿಟ್ಟು ನನ್ನಲ್ಲಿ ಕೆಲವು ಪ್ರಶ್ನೆಗಳಿಗೆ ಉತ್ತರಿಸಿ.. ಸರ್ವಶಕ್ತನಾದ ಗಣೇಶ ತನ್ನ ತಲೆಯನ್ನೇ ಉಳಿಸಿಕೊಳ್ಳಲಾರದವನು ಬೇರೆಯವರ ತಲೆಯನ್ನು ಹೇಗೆ ಕಾಯಬಲ್ಲನು? ಎಂದು ಪ್ರಶ್ನಿಸಿದ್ದಾರೆ.[ಮದ್ಯದ ಬಾಟ್ಲಿ ಮೇಲೆ ಹಿಂದೂ ದೇವತೆಗಳ ಚಿತ್ರ!]

ವರ್ಮಾ ಅವರು ತಮ್ಮ ಟ್ವೀಟ್ ಗಳನ್ನು ಹಿಂಪಡೆಯಬೇಕು. ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕು. ಒಂದು ಸಮುದಾಯದ ನಂಬಿಕೆಯನ್ನು ಪ್ರಶ್ನಿಸಿದ ರೀತಿ ಸರಿಯಿಲ್ಲ ಎಂದು ಬಿಜೆಪಿ ಆಗ್ರಹಿಸಿದ್ದಾರೆ. ಅದರೆ, ವರ್ಮಾ ಎಂದಿನಂತೆ ವಿವಾದ ಮೈಮೇಲೆ ಎಳೆದುಕೊಂಡು ಸುಮ್ಮನಿದ್ದಾರೆ, ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಕೊನೆಗೆ ಒತ್ತಡ ಹೆಚ್ಚಾಗಿ ಕ್ಷಮೆಯಾಚಿಸಿದ್ದಾರೆ.[ಕಾಗದ ಗಣಪ : ಕಲಾವಿದ ಹುಸೇನಿ ಕೈಚಳಕ]

ಬಹುಶಃ ಇತ್ತೀಚೆಗೆ ನನ್ನ ಚಿತ್ರಗಳು ಸತತವಾಗಿ ಸೋಲುತ್ತಿರಲು ಇದೇ ಕಾರಣವಿರಬೇಕು(ದೇವರ ಬಗ್ಗೆ ಅವರಿಗಿರುವ ನಂಬಿಕೆ) ನಾನು ದೇವರ ಭಕ್ತನಾಗಬೇಕು ಎನಿಸುತ್ತದೆ ಎಂದು ಮತ್ತೊಮ್ಮೆ ಟ್ವೀಟ್ ಮಾಡಿದ್ದಾರೆ. ವರ್ಮಾ ಅವರ ಸರಣಿ ಟ್ವೀಟ್ ಗೆ ಪ್ರತಿಕ್ರಿಯೆಗಳು ಬಂದಿವೆ. ಸದ್ಯಕ್ಕೆ ವರ್ಮಾ ಮಾಡಿದ ಟ್ವೀಟ್ ಗಳ ಸರಣಿ ನಿಮ್ಮ ಮುಂದಿಡುತ್ತಿದ್ದೇವೆ. ಸಭ್ಯತೆಯ ಎಲ್ಲೆ ಮೀರದಂತೆ ಅವರ ಪ್ರಶ್ನೆಗಳಿಗೆ ಉತ್ತರ ತಿಳಿದಿದ್ದರೆ ನೀವು ಉತ್ತರಿಸಬಹುದು.

ಕೊನೆಗೂ ಕ್ಷಮೆಯಾಚಿಸಿದ 'ಸತ್ಯ' ನಿರ್ದೇಶಕ

ಕೊನೆಗೂ ಕ್ಷಮೆಯಾಚಿಸಿದ 'ಸತ್ಯ' ನಿರ್ದೇಶಕ

ಗಣೇಶ ಬಗ್ಗೆ ನನ್ನ ಎಲ್ಲಾ ಟ್ವೀಟ್ ಗಳು ಸಾಮಾನ್ಯವಾಗಿ ಮಾಡುವಂತೆ ಮಾಡಿದ ಟ್ವೀಟ್ಸ್ ಅದರಲ್ಲಿ ಯಾವುದೇ ದುರುದ್ದೇಶವಿರಲಿಲ್ಲ. ಅದರೂ, ಯಾರಿಗಾದರೂ ಇದರಿಂದ ನೋವುಂಟಾಗಿದ್ದಾರೆ. ಅವರ ಭಾವನೆಗಳಿಗೆ ಧಕ್ಕೆಯಾಗಿದ್ದರೆ ನಾನು ಕ್ಷಮೆಯಾಚಿಸುತ್ತೇನೆ ಎಂದು ರಾಮ್ ಗೋಪಾಲ್ ವರ್ಮಾ ಟ್ವೀಟ್ ಮಾಡಿದ್ದಾರೆ.

ಧರ್ಮ ಹಾಗೂ ಅಲ್ಕೋಹಾಲ್

ಧರ್ಮ ಹಾಗೂ ಅಲ್ಕೋಹಾಲ್ ಮಾನವನಿಂದ ಸೃಷ್ಟಿಸಬಲ್ಲ ಅತಿ ದೊಡ್ಡ ಮಾದಕ ವಸ್ತುಗಳು -Friedrich Nietzsche ಎಂದು ಕ್ಷಮೆ ಟ್ವೀಟ್ ಗೂ ಮುನ್ನ ವರ್ಮಾ ಹೇಳಿಕೊಂಡಿದ್ದಾರೆ.

ಗಣಪ ಎಲ್ಲರ ತಲೆ ಕಾಯುವ ದೇವರೇ?

ಗಣಪ ಎಲ್ಲರ ತಲೆ ಕಾಯುವ ದೇವರೇ? ನಿನ್ನ ತಲೆ ಏಕೆ ರಕ್ಷಿಸಿಕೊಳ್ಳಲಿಲ್ಲ ಎನ್ನುತ್ತಾ ಕಡೆಗೆ ವ್ಯಂಗ್ಯವಾಗಿ ಶುಭಹಾರೈಸಿದ ವರ್ಮಾ

ಗಣೇಶನಿಗೆ ಸಿಗುವ ಮಾನ್ಯತೆ ಷಣ್ಮುಖನಿಗೇಕಿಲ್ಲ?

ಗಣೇಶನಿಗೆ ಸಿಗುವ ಮಾನ್ಯತೆ ಷಣ್ಮುಖನಿಗೇಕಿಲ್ಲ? ಗಣಪನಂತೆ ಕುಮಾರ ತಲೆ ಕತ್ತರಿಸಿಕೊಳ್ಳಬೇಕಿತ್ತಾ?

ಗಣೇಶ ಚತುರ್ಥಿ ಅಂದರೆ ಗಣೇಶನ ಬರ್ಥ್ ಡೇನಾ?

ಗಣೇಶ ಚತುರ್ಥಿ ಅಂದರೆ ಗಣೇಶನ ಬರ್ಥ್ ಡೇನಾ? ಅಥವಾ ತಲೆ ಕತ್ತರಿಸಿಕೊಂಡ ದಿನನಾ?

ಗಣೇಶ ಊಟ ಹೇಗೆ ಮಾಡುತ್ತಾನೆ?

ಗಣೇಶ ಊಟ ಹೇಗೆ ಮಾಡುತ್ತಾನೆ? ಸೊಂಡಲಿನಿಂದನಾ? ಅಥವಾ ಕೈಗಳಿಂದನಾ?

ವಿಘ್ನ ನಿವಾರಕ ನಿಮಗೆ ಕೊಟ್ಟ ವರವೇನು?

ವಿಘ್ನ ನಿವಾರಕ ನಿಮಗೆ ಕೊಟ್ಟ ವರವೇನು? ಎಲ್ಲವನ್ನು ಪಟ್ಟಿ ಮಾಡಿ ತಿಳಿಸುವಿರಾ?

ಡೊಳ್ಳು ಹೊಟ್ಟೆ ಗಣಪ ಆಗಿದ್ದು ಯಾವಾಗ?

ಡೊಳ್ಳು ಹೊಟ್ಟೆ ಗಣಪ ಆಗಿದ್ದು ಯಾವಾಗ? ಚಿಕ್ಕಂದಿನಿಂದಲೂ ಇತ್ತೆ ಅಥವಾ ಆನೆ ತಲೆ ಆಪರೇಷನ್ ಆದ ಮೇಲೆ ಮೈ ಬೆಳೆಯಿತೇ?

ಹ್ಯಾಪಿ ಗಣೇಶ ಚತುರ್ಥಿ ಶುಭಹಾರೈಕೆ

ಹ್ಯಾಪಿ ಗಣೇಶ ಚತುರ್ಥಿ ಶುಭಹಾರೈಕೆ ಇನ್ ವರ್ಮಾ ಸ್ಟೈಲ್

ದಯವಿಟ್ಟು ನನ್ನ ಸಮಸ್ಯೆಗೆ ಉತ್ತರಿಸುವಿರಾ?

ದಯವಿಟ್ಟು ನನ್ನ ಸಮಸ್ಯೆಗೆ ಉತ್ತರಿಸುವಿರಾ? ನನ್ನ ಅಜ್ಞಾನ ಹಾಗೂ ನಿಲಕ್ಷ್ಯತೆಯಿಂದ ಗಣೇಶನ ಬಗ್ಗೆ ನಾನು ಹೆಚ್ಚು ಕಲಿತಿಲ್ಲ ಎಂದ ವರ್ಮಾ

English summary
It's Kaliyug indeed. Now, gods also are getting mocked. Bollywood director Ram Gopal Verma, who is known for his wrong statements at wrong place, irked many people with his latest statement mocking Ganapati.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X