ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಸವೇಶ್ವರ ನಿಲ್ದಾಣದಿಂದ ಬಿಎಂಟಿಸಿ ಸಂಪರ್ಕ ಸೇವೆ

|
Google Oneindia Kannada News

ಬೆಂಗಳೂರು, ಸೆ. 13 : ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಪ್ರಯಾಣಿಕರ ಅನುಕೂಲಕ್ಕಾಗಿ ಪೀಣ್ಯದ ಬಸವೇಶ್ವರ ಬಸ್ ನಿಲ್ದಾಣದಿಂದ ನಗರದ ವಿವಿಧ ಭಾಗಗಳಿಗೆ ಹೊಸ ಮಾರ್ಗಗಳನ್ನು ಹಾಗೂ ಪ್ರಸ್ತುತ ಆಚರಣೆಯಲ್ಲಿರುವ ಕೆಲವು ಮಾರ್ಗಗಳನ್ನು ವಿಸ್ತರಣೆ ಮಾಡಿದೆ.

ಸೆ.10ರಿಂದ ಪೀಣ್ಯದ ಬಸವೇಶ್ವರ ಬಸ್ ನಿಲ್ದಾಣ ಕಾರ್ಯಾರಂಭ ಮಾಡಿದ್ದು, ಉತ್ತರ ಕರ್ನಾಟಕದ ಕಡೆ ಸಾಗುವ 146 ವೇಗದೂತ ಬಸ್ಸುಗಳು ಇಲ್ಲಿಂದ ಕಾರ್ಯನಿರ್ವಹಿಸುತ್ತಿವೆ. ಆದ್ದರಿಂದ ಈ ನಿಲ್ದಾಣಕ್ಕೆ ಹೋಗುವ ಪ್ರಯಾಣಿಕರಿಗೆ ಅನುಕೂಲವಾಗಲಿ ಎಂದು ಬಿಎಂಟಿಸಿ ನೂತನ ಮಾರ್ಗಗಳಲ್ಲಿ ಬಸ್ ಓಡಿಸಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಕೆಎಸ್ಆರ್‌ಟಿಸಿ ಕೆಂಪೇಗೌಡ ಬಸ್ ನಿಲ್ದಾಣದಿಂದ ಪೀಣ್ಯದ ಬಸವೇಶ್ವರ ಬಸ್ ನಿಲ್ದಾಣಕ್ಕೆ ತೆರಳಲು ಹಗಲು ಹೊತ್ತಿನಲ್ಲಿ ಪ್ರತಿ 15 ನಿಮಿಷಕ್ಕೊಮ್ಮೆ, ರಾತ್ರಿ 30 ನಿಮಿಷಕ್ಕೊಮ್ಮೆ ಸಂಪರ್ಕ ಸಾರಿಗೆ ಬಸ್ ವ್ಯವಸ್ಥೆ ಕಲ್ಪಿಸಿದೆ. ಇದರಲ್ಲಿ ತೆರಳಲು 15 ರೂ. ಪ್ರಯಾಣ ದರ ನೀಡಬೇಕಾಗಿದೆ. ಸದ್ಯ ಬಿಎಂಟಿಸಿಯೂ ಪೀಣ್ಯಕ್ಕೆ ಸಂಪರ್ಕ ಕಲ್ಪಿಸಲು ಹೊಸ ಮಾರ್ಗಗಳನ್ನು ಪರಿಚಯಿಸಿದ್ದು, ಪ್ರಯಾಣಿಕರಿಗೆ ಸಹಾಯಕವಾಗಲಿದೆ. [ಪೀಣ್ಯದ ಬಸವೇಶ್ವರ ಬಸ್ ನಿಲ್ದಾಣ ಹೇಗಿದೆ ಗೊತ್ತೆ?]

Peenya
ಮಾರ್ಗ ಸಂಖ್ಯೆ ಎಲ್ಲಿಂದ-ಎಲ್ಲಿಗೆ ಒಟ್ಟು ಬಸ್ಸುಗಳು ಒಟ್ಟು ಟ್ರಿಪ್‌ಗಳು
252 ಪಿಎಸ್

ಬಸವೇಶ್ವರ ಬಸ್ ನಿಲ್ದಾಣದಿಂದ -ಮೆಜೆಸ್ಟಿಕ್
ಮಾರ್ಗ : ಆರ್‌ಎಂಸಿ ಯಾರ್ಡ್, ಯಶವಂತಪುರ, ಮಲ್ಲೇಶ್ವರಂ

12 150
248 ಪಿಎಸ್
ಬಸವೇಶ್ವರ ಬಸ್ ನಿಲ್ದಾಣ-ಕೆ.ಆರ್.ಮಾರುಕಟ್ಟೆ
ಮಾರ್ಗ : ಜಾಲಹಳ್ಳಿ ಕ್ರಾಸ್, ಸುಂಕದಕಟ್ಟೆ, ವಿಜಯನಗರ, ಸಿರ್ಸಿ ಸರ್ಕಲ್
10 92
410 ಪಿಎಸ್
ಬಸವೇಶ್ವರ ಬಸ್ ನಿಲ್ದಾಣ - ಬೊಮ್ಮನಹಳ್ಳಿ
ಮಾರ್ಗ : ಜಾಲಹಳ್ಳಿ ಕ್ರಾಸ್, ಸುಂಕದಕಟ್ಟೆ, ವಿಜಯನಗರ, ಬನಶಂಕರಿ
5 40
ಬಿಸಿ-7ಬಿ ಬಸವೇಶ್ವರ ಬಸ್ ನಿಲ್ದಾಣ - ಬ್ಯಾಡರಹಳ್ಳಿ
ಮಾರ್ಗ : ದಾಸರಹಳ್ಳಿ 8ನೇ ಮೈಲಿ, ಅಂದ್ರಹಳ್ಳಿ, ತುಂಗಾ ನಗರ
4 48
ಎಎಸ್-9

ಬಸವೇಶ್ವರ ಬಸ್ ನಿಲ್ದಾಣ - ಬ್ಯಾಡರಹಳ್ಳಿ
ಮಾರ್ಗ : ದಾಸರಹಳ್ಳಿ 8ನೇ ಮೈಲಿ, ಅಂದ್ರಹಳ್ಳಿ, ತುಂಗಾ ನಗರ

4
80
ಟಿಆರ್-12
ಬಸವೇಶ್ವರ ಬಸ್ ನಿಲ್ದಾಣ -ಶ್ರೀನಗರ
ಮಾರ್ಗ : ಎಸ್ಆರ್‌ಎಸ್, ರಾಜಾಜಿನಗರ 1ನೇ ಬ್ಲಾಕ್, ಬಿನ್ನಿಮಿಲ್, ಸಿರ್ಸಿ ಸರ್ಕಲ್
11 96
ಕೆ-1
ಬಸವೇಶ್ವರ ನಿಲ್ದಾಣ - ಸೆಂಟ್ರಲ್ ಸಿಲ್ಕ್ ಬೋರ್ಡ್
ಮಾರ್ಗ : ಯಶವಂತಪುರ, ಮೇಖ್ರಿ ಸರ್ಕಲ್, ಶಿವಾಜಿನಗರ, ದೊಮ್ಮಲೂರು, ಕೋರಮಂಗಲ
13 104
English summary
Bangalore Metropolitan Transport Corporation (BMTC) introduces new routes from Basaveshwara bus stand Peenya to connect various parts of city.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X