ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚುನಾವಣಾ ಕಾರ್ಯಕ್ಕೆ ಬಸ್ ಬಳಕೆ, ಸಂಚಾರ ಕಡಿಮೆ

|
Google Oneindia Kannada News

ಬೆಂಗಳೂರು, ಏ. 16 : ಲೋಕಸಭೆ ಚುಣಾವಣೆಯ ಮತದಾನ ಗುರುವಾರ ನಡೆಯಲಿದೆ. ಚುನಾವಣಾ ಕಾರ್ಯಕ್ಕಾಗಿ ಬಿಎಂಟಿಸಿ ಮತ್ತು ಕೆಎಸ್ಆರ್ ಟಿಸಿಯ 7000 ಬಸ್ಸುಗಳನ್ನು ಬಳಸಿಕೊಳ್ಳಲಾಗುತ್ತಿದೆ. ಆದ್ದರಿಂದ ಬುಧವಾರ ಮಧ್ಯಾಹ್ನದಿಂದಲೇ ಬಸ್ಸುಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆ ಇದ್ದು, ಸಾರ್ವಜನಿಕರು ಸಹಕಾರ ನೀಡಬೇಕು ಎಂದು ಸಾರಿಗೆ ಸಂಸ್ಥೆಗಳು ಮನವಿ ಮಾಡಿವೆ.

ಬುಧವಾರ ಬೆಳಗ್ಗೆಯಿಂದಲೇ ಬಿಎಂಟಿಸಿ ಮತ್ತು ಕೆಎಸ್ಆರ್ ಟಿಸಿ ಬಸ್ಸುಗಳು ಚುನಾವಣಾ ಕಾರ್ಯಕ್ಕೆ ತೆರಳಿವೆ. ಆದ್ದರಿಂದ ಏ.17ರ ಮಧ್ಯರಾತ್ರಿ ತನಕ ಬಸ್ಸುಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆ ಇದ್ದು, ಮತದಾನ ಮಾಡಲು ತವರಿಗೆ ಮರಳುವ ಸಾರ್ವಜನಿಕರು ಸಂಸ್ಥೆಯೊಂದಿಗೆ ಸಹಕರಿಸಬೇಕಾಗಿದೆ. [ಚಿತ್ರದುರ್ಗದಲ್ಲಿ ಬಸ್ ದುರಂತ 6 ಸಾವು]

ksrtc

ಚುನಾವಣಾ ಸಿಬ್ಬಂದಿಯನ್ನು ಕರೆದೊಯ್ಯಲು ಹಾಗೂ ಮತಗಟ್ಟೆಗಳಿಗೆ ಮತ್ತು ಮತ ಎಣಿಕೆ ಕೇಂದ್ರಗಳಿಗೆ ಮತ ಯಂತ್ರಗಳನ್ನು ಸಾಗಣೆ ಮಾಡಲು ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ 3,037 ಬಸ್ಸುಗಳನ್ನು ಮತ್ತು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಿಂದ 1,150 ಬಸ್ಸುಗಳನ್ನು ಬಳಸಿಕೊಳ್ಳಲಾಗುತ್ತಿದೆ. [ಕೆಎಸ್ಆರ್ ಟಿಸಿ ದರ ದುಪ್ಪಟ್ಟು]

ಆದ್ದರಿಂದ ಬೆಂಗಳೂರು ಜನರ ಜೀವನಾಡಿಯಾದ ಬಿಎಂಟಿಸಿ ಬಸ್ಸುಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಲಿದೆ. ಹಾಗೆಯೇ ಮತದಾನ ಮಾಡಲು ತವರಿಗೆ ಮರಳುವ ಜನರಿಗೂ ಬಸ್ ಸಂಚಾರ ವ್ಯತ್ಯಯದ ಬಿಸಿ ತಟ್ಟಲಿದೆ. ಮತದಾನದ ದಿನ ಮತ್ತು ನಂತರ ಸರ್ಕಾರಿ ರಜಾ ದಿನವಾದ್ದರಿಂದ ಜನರ ಸಂಚಾರವೂ ಕಡಿಮೆ ಇರುತ್ತದೆ. ಆದ್ದರಿಂದ ಸಾರ್ವಜನಿಕರಿಗೆ ಅಂತಹ ತೊಂದರೆ ಆಗುವುದಿಲ್ಲ ಎಂಬುದು ಕೆಎಸ್ಆರ್ ಟಿಸಿ ನಂಬಿಕೆ.

ಚುನಾವಣಾ ಕಾರ್ಯಕ್ಕಾಗಿ ಕೆಎಸ್ಆರ್ ಟಿಸಿಯ ಈಶಾನ್ಯ ಸಾರಿಗೆ ಸಂಸ್ಥೆಯಿಂದ 1,500, ವಾಯುವ್ಯ ಸಾರಿಗೆ ಸಂಸ್ಥೆಯಿಂದ 1,241 ಬಸ್ಸುಗಳನ್ನು ಬಳಸಿಕೊಳ್ಳಲಾಗುತ್ತಿದೆ. ಶಾಂತಿಯುತ ಮತದಾನ ನಡೆಯಲು ಸಹಕರಿಸುವ ಪೊಲೀಸ್ ಸಿಬ್ಬಂದಿಗಳ ಸಂಚಾರಕ್ಕಾಗಿ 50ಕ್ಕೂ ಹೆಚ್ಚು ಬಸ್ಸುಗಳನ್ನು ಬಳಸಿಕೊಳ್ಳಲಾಗುತ್ತಿದೆ.

ಚುನಾವಣೆ ದಿನ ಕಾರ್ಖಾನೆಗಳು, ಕಂಪನಿಗಳು ಹಾಗೂ ಸರ್ಕಾರಿ ರಜೆ ಇರುವುದರಿಂದ ಬೆಂಗಳೂರು ನಗರದಲ್ಲಿ ಸಂಚಾರ ದಟ್ಟಣೆಯೂ ಕಡಿಮೆ ಇರಲಿದೆ. ಪ್ರಯಾಣಿಕರ ಸಂಖ್ಯೆಯೂ ಸಾಮಾನ್ಯಕ್ಕಿಂತ ಕಡಿಮೆ ಇರಲಿದೆ. ಆದ್ದರಿಂದ ದೈನಂದಿನ ಬಸ್ ಸಂಚಾರದಲ್ಲಿ ಕಡಿಮೆಯಾಗಲಿದೆ ಎಂದು ಬಿಎಂಟಿಸಿ ಪ್ರಧಾನ ವ್ಯವಸ್ಥಾಪಕ ವೀರೇಗೌಡ ಹೇಳಿದ್ದಾರೆ.

English summary
Elections 2014 : Bangaloreans may have to brace up for commuting woes as a large number of Bangalore Metropolitan Transport Corporation (BMTC) and Karnataka State Road Transport Corporation (KSRTC) buses will be utilized for election duty.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X