ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಎಂಟಿಸಿ ಬಸ್‌ಗಳಿಗೂ ಜಿಪಿಎಸ್‌ ಅಳವಡಿಕೆ

|
Google Oneindia Kannada News

ಬೆಂಗಳೂರು, ಸೆ. 1 : ಸೇವೆ ಮತ್ತಷ್ಟು ಉತ್ತಮಗೊಳಿಸಲು ಮುಂದಾಗಿರುವ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಇಂಟಲಿಜೆಂಟ್‌ ಟ್ರಾನ್ಸ್‌ಫೋರ್ಟ್‌ ವ್ಯವಸ್ಥೆ(ಐಟಿಎಸ್‌) ಜಾರಿಗೆ ಮುಂದಾಗಿದೆ. ಬಸ್‌ ವೇಳಾಪಟ್ಟಿ ಗೊಂದಲ, ನಕಲಿ ಟಿಕೆಟ್‌ ಹಾವಳಿ ಎಲ್ಲದಕ್ಕೂ ಇದು ತಡೆ ಹಾಕಲಿದೆ.

ಈ ಬಗ್ಗೆ ಮಾಹಿತಿ ನೀಡಿದ ಬಿಎಂಟಿಸಿ ಐಟಿ ವಿಭಾಗದ ನಿರ್ದೇಶಕ ಕುಮಾರ್‌ ಪುಷ್ಕರ್‌, ಈ ಯೋಜನೆ ಜಾರಿ ಮಾಡಬೇಕು ಎಂದು ವರ್ಷದ ಹಿಂದೆಯೇ ಚಿಂತಿಸಲಾಗಿತ್ತು. ಆದರೆ ಕಾರಣಾಂತರಗಳಿಂದ ಮುಂದೆ ಹೋಗಿತ್ತು. ಈಗ ಯಲಹಂಕ ವಿಭಾಗದಿಂದ ಮೊದಲು ಆರಂಭ ಮಾಡಲಾಗುತ್ತಿದೆ ಎಂದು ತಿಳಿಸಿದರು. (ಬಿಎಂಟಿಸಿ ಬಸ್ಸಿನ ಕ್ಷಣ-ಕ್ಷಣದ ಮಾಹಿತಿ ಇನ್ನು ಲಭ್ಯ)

bmtc

ಬಸ್‌ಗಳಿಗೆ ಜಿಪಿಎಸ್‌ ಅಳವಡಿಕೆ, ಎಲೆಕ್ಟ್ರಾನಿಕ್‌ ಯಂತ್ರದ ಮೂಲಕ ಟಿಕೆಟ್‌ ನೀಡಿಕೆಯಂಥ ಅಂಶ ಅಳವಡಿಸಲಾಗುವುದು. ಇದರಿಂದ ಬಸ್‌ ಯಾವ ಮಾರ್ಗದಲ್ಲಿ ಸಂಚರಿಸುತ್ತಿದೆ? ಸಮಯಕ್ಕೆ ಸರಿಯಾಗಿ ತಲುಪಲಿದೆಯೇ? ಎಂಬೆಲ್ಲಾ ಮಾಹಿತಿ ಸುಲಭವಾಗಿ ಲಭ್ಯವಾಗುತ್ತದೆ ಎಂದು ತಿಳಿಸಿದರು.

ಮೊದಲು ಯಲಹಂಕ ವಿಭಾಗದ 217 ಬಸ್‌ಗಳಿಗೆ ಅಳವಡಿಕೆ ಮಾಡಿ ನವೆಂಬರ್‌ವರೆಗೆ ಪ್ರಾಯೋಗಕವಾಗಿ ಓಡಿಸಲಾಗುವುದು. ನಂತರ ಮಹಾನಗರದ ಎಲ್ಲ 40 ಘಟಕಗಳಿಗೂ ವಿಸ್ತರಿಸುವ ಯೋಚನೆಯಿದೆ ಎಂದು ತಿಳಿಸಿದರು. (ಬಿಎಂಟಿಸಿ ಬಸ್ ಮಾಹಿತಿ ಬೇಕಾ ಮೊಬೈಲ್ ನೋಡಿ!)

ಮುಂಬೈ ಮೂಲದ ಐಟಿ ಕಂಪನಿಯೊಂದಕ್ಕೆ ಯೋಜನೆ ನಿರ್ವಹಣೆ ಹೊಣೆಗಾರಿಕೆ ನೀಡಲಾಗಿದ್ದು ತಿಂಗಳಿಗೆ 1.16 ಕೋಟಿ ರೂ. ವೆಚ್ಚವಾಗಲಿದೆ. ವಿದ್ಯುನ್ಮಾನ ಯಂತ್ರಗಳು ಟಿಕೆಟ್‌ ಕಳ್ಳತನ ಪ್ರಕರಣಕ್ಕೆ ಅವಕಾಶ ನೀಡುವುದಿಲ್ಲ ಎಂದು ಹೇಳಿದರು.

ಸದ್ಯ ವಾಯುವಜ್ರ ಬಸ್‌ಗಳಲ್ಲಿ ಮಾತ್ರ ವಿದ್ಯುನ್ಮಾನ ಯಂತ್ರಗಳಿವೆ. ಮುಂದಿನ ಮೂರು ತಿಂಗಳಲ್ಲಿ ಬಿಎಂಟಿಸಿಯ ಎಲ್ಲ ಕಂಡಕ್ಟರ್‌ ಕೈಯಲ್ಲೂ ವಿದ್ಯುನ್ಮಾನ ಯಂತ್ರಗಳಿರುತ್ತವೆ. ಟಿಕೆಟ್‌ ನೀಡಿದ ಸಮಯ ಮತ್ತು ದಿನಾಂಕ ಎರಡೂ ಮುದ್ರಿತವಾಗಿ ಬರುವುದರಿಂದ ಯಾವುದೇ ಗೊಂದಲಕ್ಕೆ ಅವಕಾಶ ಇರುವುದಿಲ್ಲ ಎಂದು ವಿವರಿಸಿದರು. ಅಲ್ಲದೇ ಮಾರ್ಗದ ಎಲ್ಲ ನಿಲ್ದಾಣಗಳ ಮಾಹಿತಿ ಯಂತ್ರದಲ್ಲಿ ಅಳವಡಿಸಲಾಗಿರುತ್ತದೆ ಎಂದು ಹೇಳಿದರು.

ಪ್ರಯಾಣಿಕರ ಕೈಗೆ ಸ್ಮಾರ್ಟ್‌ ಕಾರ್ಡ್‌
ಬಸ್‌ನಲ್ಲಿ ಹಣದ ವಹಿವಾಟು ಕಡಿತಗೊಳಿಸಲು ಮುಂದಾಗಿರುವ ಬಿಎಂಟಿಸಿ ಡಿಸೆಂಬರ್‌ ವೇಳೆಗೆ ಪರಯಾಣಿಕರಿಗೆ ಸ್ಮಾರ್ಟ್‌ ಕಾರ್ಡ್‌ ನೀಡಲಿದೆ. ಸ್ವತಃ ಕಂಡಕ್ಟರ್‌ಗೆ ಇದನ್ನು ರೀಜಾರ್ಜ್‌ ಮಾಡುವ ಜವಾಬ್ದಾರಿ ನೀಡಲಾಗುವುದು. ಮೊಬೈಲ್‌ ಮೂಲಕ ರೀಜಾರ್ಜ್‌ ಮಾಡಲು ಅವಕಾಶ ಕಲ್ಪಿಸುವ ಚಿಂತನೆಯಿದೆ ಎಂದು ಕುಮಾರ್‌ ತಿಳಿಸಿದರು.

ಈ ಬಗ್ಗೆ ಮಾತನಾಡಿದ ಪ್ರಯಾಣಿಕರ ವೇದಿಕೆ ಸದಸ್ಯ ವಿನಯ್‌ ಶ್ರೀನಿವಾಸ್‌, ಇಂಥ ಕ್ರಮಗಳಿಂದ ಪಾರದರ್ಶಕತೆ ಸಾಧ್ಯವಿಲ್ಲ. ಸ್ಟೇಜ್‌ಗೆ ಸಂಬಂಧಿಸಿ ದರ ತಿಳಿಸುವುದು. ಹೋಗುವಾಗ ಒಂದು ದರ, ಬರುವಾಗ ಇನ್ನೊಂದು ದರ ಇರುವ ಬಗೆಗಿನ ಗೊಂದಲ ಬಗೆಹರಿಸುವುದು ಅಷ್ಟೇ ಮುಖ್ಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

English summary
BMTC introducing much-awaited Intelligent Transport System (ITS), which ensures that buses ply according to schedule and checks malpractices in existing ticketing system. speaking to News persons BMTC Director (IT) Kumar Pushkar said the project, whose launch was postponed several times last year, would be implemented on a pilot basis at Yelahanka Depot.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X