ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಾಯುವಜ್ರ ಪ್ರಯಾಣ ದರ 5 ರೂ. ಹೆಚ್ಚಳ

|
Google Oneindia Kannada News

ಬೆಂಗಳೂರು, ಆ.5 : ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ವಿಮಾನ ನಿಲ್ದಾಣದ ಪ್ರಯಾಣಿಕರಿಗೆ ಬೆಲೆ ಏರಿಕೆ ಬಿಸಿ ಮುಟ್ಟಿಸಿದೆ. ರಾಷ್ಟ್ರೀಯ ಹೆದ್ದಾರಿ 7ರಲ್ಲಿ ಟೋಲ್ ದರ ಹೆಚ್ಚಳವಾಗಿರುವ ಹಿನ್ನಲೆಯಲ್ಲಿ ಕೆಐಎಎಲ್ ಗೆ ಸಂಪರ್ಕ ಕಲ್ಪಿಸುವ ವಾಯುವಜ್ರ ಪ್ರಯಾಣ ದರವನ್ನು 5 ರೂ.ಗೆ ಹೆಚ್ಚಿಸಿದೆ.

ಮೇ ತಿಂಗಳಿನಲ್ಲಿ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ 7ರ ಟೋಲ್ ದರ ಹೆಚ್ಚಳವಾದಾಗ ದರ ಹೆಚ್ಚಳ ಮಾಡಲು ಬಿಎಂಟಿಸಿ ನಿರ್ಧರಿಸಿತ್ತು. ಸದ್ಯ ಅದನ್ನು ಜಾರಿಗೆ ತಂದಿರುವ ಸಂಸ್ಥೆ ವಾಯುವಜ್ರ ಪ್ರಯಾಣದರವನ್ನು ಏರಿಕೆ ಮಾಡಿದೆ.

Vayu Vajra

ಟೋಲ್ ದರ ಹೆಚ್ಚಳವಾಗಿದ್ದರಿಂದ ಬಿಎಂಟಿಸಿಗೆ ಆರ್ಥಿಕವಾಗಿ ನಷ್ಟವಾಗುತ್ತಿದೆ. ಆದ್ದರಿಂದ ಪ್ರಯಾಣ ದರ ಹೆಚ್ಚಳ ಮಾಡಬೇಕು ಎಂದು ಮೂರು ತಿಂಗಳ ಹಿಂದೆ ತೀರ್ಮಾನ ಕೈಗೊಳ್ಳಲಾಗಿತ್ತು. ಆದರೆ, ಪ್ರಯಾಣಿಕರ ವಿರೋಧದಿಂದಾಗಿ ಇದನ್ನು ತಡೆಹಿಡಿಯಲಾಗಿತ್ತು. ಸದ್ಯ ಆ.5ರಿಂದ ಜಾರಿಗೆ ಬರುವಂತೆ ಪ್ರಯಾಣ ದರ ಏರಿಕೆ ಮಾಡಲಾಗಿದೆ. [ಟೋಲ್ ದರ ಎಷ್ಟು ಹೆಚ್ಚಾಗಿದೆ]

ಬೆಂಗಳೂರಿನ ವಿವಿಧ ಪ್ರದೇಶಗಳಿಂದ 66 ಬಸ್ಸುಗಳು ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಪ್ರತಿನಿತ್ಯ ಸಂಚರಿಸುತ್ತವೆ. ಸುಮಾರು 240 ಟ್ರಿಪ್ ಗಳಲ್ಲಿ ಬಸ್ಸುಗಳು ಸಂಚರಿಸಲಿದ್ದು, ಸಂಸ್ಥೆಗೆ ಟೋಲ್ ಶುಲ್ಕ ಕಟ್ಟುವುದು ಹೊರೆಯಾಗಿದೆ. ಆದ್ದರಿಂದ ಪ್ರಯಾಣ ದರ ಹೆಚ್ಚಳ ಮಾಡುವುದು ಅನಿವಾರ್ಯವಾಗಿತ್ತು ಎಂದು ಅಧಿಕಾರಿಗಳು ಹೇಳಿದ್ದಾರೆ. [ಲಾಭದಲ್ಲಿ ಓಡುತ್ತಿದೆ ಬಿಎಂಟಿಸಿ]

ಟೋಲ್‌ ಶುಲ್ಕಕ್ಕೆ ಅನುಗುಣವಾಗಿ ಪ್ರಯಾಣ ದರ ಏರಿಕೆ ಮಾಡುವ ಕುರಿತು ಅಧಿಕಾರಿಗಳು ಮೂರು ತಿಂಗಳ ಹಿಂದೆಯೇ ಚರ್ಚೆ ನಡೆಸಿದ್ದರು. ವಿಭಾಗೀಯ ನಿಯಂತ್ರಣಾಧಿಕಾರಿಗಳು ದರ ಎಷ್ಟು ಹೆಚ್ಚಳ ಮಾಡಬೇಕೆಂದು ಸಂಸ್ಥೆಗೆ ವರದಿ ನೀಡಿದ್ದು, ವರದಿ ಬಂದ ನಂತರ ದರವನ್ನು ಪರಿಷ್ಕರಣೆ ಮಾಡಲಾಗಿದೆ. [ವಾಯುವಜ್ರ ದರ ಪಟ್ಟಿ ಇಲ್ಲಿದೆ]

ಏಪ್ರಿಲ್ ಅಂತ್ಯದಲ್ಲಿ ಬಿಎಂಟಿಸಿ ಪ್ರಯಾಣ ದರದಲ್ಲಿ ಶೇ 15ರಷ್ಟು ಹೆಚ್ಚಳ ಮಾಡಿತ್ತು. ಸದ್ಯ ಟೋಲ್ ಶುಲ್ಕ ಹೆಚ್ಚಳದ ಹಿನ್ನಲೆಯಲ್ಲಿ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಬಸ್ಸುಗಳ ಪ್ರಯಾಣ ದರವನ್ನು ಮಾತ್ರ ಏರಿಕೆ ಮಾಡಲಾಗಿದೆ.

English summary
Bangalore Metropolitan Transport Corporation (BMTC) has increased fares for its Vayu Vajra service by a marginal Rs 5.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X