ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೋದಿ ಸ್ವಾಗತಿಸಲಿದ್ದಾರೆ 10 ಸಾವಿರ ಕಾರ್ಯಕರ್ತರು

|
Google Oneindia Kannada News

ಬೆಂಗಳೂರು, ಸೆ. 22 : ಪ್ರಧಾನಿಯಾದ ಬಳಿಕ ಮೊದಲ ಬಾರಿಗೆ ಕರ್ನಾಟಕಕ್ಕೆ ಆಗಮಿಸುತ್ತಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಸ್ವಾಗತಿಸಲು ಹತ್ತು ಸಾವಿರ ಬಿಜೆಪಿ ಕಾರ್ಯಕರ್ತರು ಸಜ್ಜಾಗಿದ್ದಾರೆ. ಎಚ್‌ಎಎಲ್ ವಿಮಾನ ನಿಲ್ದಾಣಕ್ಕೆ ಸೆ.23ರ ಮಂಗಳವಾರ ಸಂಜೆ ನರೇಂದ್ರ ಮೋದಿ ಆಗಮಿಸಲಿದ್ದಾರೆ.

ಎರಡು ದಿನಗಳ ಭೇಟಿಯಾಗಿ ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಸಂಜೆ ಬೆಂಗಳೂರಿಗೆ ಆಗಮಿಸಲಿದ್ದು, ರಾಜಭವನದಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಪ್ರಧಾನಿಯಾದ ಬಳಿಕ ಮೊದಲ ಬಾರಿಗೆ ರಾಜ್ಯಕ್ಕೆ ಆಗಮಿಸುತ್ತಿರುವ ಮೋದಿ ಅವರನ್ನು ಸ್ವಾಗತಿಸಲು 20 ಸಾವಿರ ಕಾರ್ಯಕರ್ತರನ್ನು ಸೇರಿಸಲು ಬಿಜೆಪಿ ಸಿದ್ಧತೆ ನಡೆಸಿತ್ತು.

Narendra Modi

ಆದರೆ, ಪ್ರಧಾನಿಗೆ ಭದ್ರತೆ ಒದಗಿಸುವ ವಿಶೇಷ ಭದ್ರತಾ ದಳ 10 ಸಾವಿರ ಜನರಿಗೆ ಮಾತ್ರ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶ ನೀಡಿದೆ ಎಂದು ತಿಳಿದುಬಂದಿದೆ. ಎಚ್‌ಎಎಲ್ ವಿಮಾನ ನಿಲ್ದಾಣದ ವಾಹನ ನಿಲ್ದಾಣ ಸ್ಥಳದಲ್ಲಿ ಮೋದಿ ಅಭಿನಂದನಾ ಸಮಾರಂಭ ನಡೆಯಲಿದೆ. [ಮೋದಿ ಸ್ವಾಗತಿಸಲು ಕರ್ನಾಟಕ ಬಿಜೆಪಿ ಸಜ್ಜು]

ಬಿಜೆಪಿ ರಾಜ್ಯ ಘಟಕದ 12 ಮುಖಂಡರು ಮಾತ್ರ ನರೇಂದ್ರ ಮೋದಿ ಅವರೊಂದಿಗೆ ವೇದಿಕೆ ಹಂಚಿಕೊಳ್ಳಲಿದ್ದು, ಬಿಜೆಪಿಯ ಜಿಲ್ಲಾ ಘಟಕದಕ ಪ್ರಮುಖ ಪದಾಧಿಕಾರಿಗಳು ಮತ್ತು ಮುಖಂಡರಿಗೆ ಮಾತ್ರ ಕಾರ್ಯಕ್ರಮಕ್ಕೆ ಆಹ್ವಾನ ನೀಡಲಾಗಿದೆ. ಅಭಿನಂದನಾ ಸಮಾರಂಭದ ಬಳಿಕ ರಾಜಭವನಕ್ಕೆ ತೆರಳಿರುವ ಮೋದಿ ಅಲ್ಲಿ ವಾಸ್ತವ್ಯ ಹೂಡಲಿದ್ದಾರೆ.

ಮೋದಿ ಕಾರ್ಯಕ್ರಮಗಳ ವೇಳಾಪಟ್ಟಿ
* ಮಂಗಳವಾರ ಸಂಜೆ ಎಚ್‌ಎಎಲ್ ವಿಮಾಣ ನಿಲ್ದಾಣಕ್ಕೆ ಆಗಮನ
* ಬಿಜೆಪಿ ನಾಯಕರು ಕಾರ್ಯಕರ್ತರಿಂದ ಅಭಿನಂದನಾ ಸಮಾರಂಭ
* ರಾಜಭವನದಲ್ಲಿ ವಾಸ್ತವ್ಯ

ಬುಧವಾರದ ಕಾರ್ಯಕ್ರಮಗಳು
* ತುಮಕೂರಿನಲ್ಲಿ ಫುಡ್‌ಪಾರ್ಕ್ ಉದ್ಘಾಟನೆ
* ಇಸ್ರೋಗೆ ಭೇಟಿ
* ದೆಹಲಿಗೆ ವಾಪಸ್

English summary
Around 10,000 BJP activists will attend the felicitation programme being organized by the Karnataka BJP for Prime Minister Narendra Modi at HAL airport Bangalore on Tuesday, September 23 evening.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X