ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಳವಾಡಿ ನಿರ್ದೇಶನದಲ್ಲಿ ದ್ರೌಪದಿ ಕುರಿತ ನಾಟಕ

By Mahesh
|
Google Oneindia Kannada News

ಬೆಂಗಳೂರು, ಅ.3: ‘ಬೆಂಗಳೂರು ಅಂತರರಾಷ್ಟ್ರೀಯ ಕಲಾ ಉತ್ಸವ 2013' ಅಂಗವಾಗಿ ‘ದಿ ಇಂಪಾರ್ಟೆನ್ಸ್ ಆಫ್ ಬೀಯಿಂಗ್ ದ್ರೌಪದಿ' ನಾಟಕ ನಗರದಲ್ಲಿ ಪ್ರದರ್ಶನಗೊಳ್ಳುತ್ತಿದೆ. ಕೃಷ್ಣನ್ ರಂಗರಾಜು ರಚನೆಯಿರುವ ಈ ನಾಟಕದ ರಂಗ ವಿನ್ಯಾಸ ಹಾಗೂ ನಿರ್ದೇಶನವನ್ನು ಪ್ರಕಾಶ್ ಬೆಳವಾಡಿ ಮಾಡಿದ್ದಾರೆ.

ಸೆಂಟರ್ ಫಾರ್ ಫಿಲಂ ಅಂಡ್ ಡ್ರಾಮಾ ನಿರ್ಮಾಣದ ‘ದಿ ಇಂಪಾರ್ಟೆನ್ಸ್ ಆಫ್ ಬೀಯಿಂಗ್ ದ್ರೌಪದಿ' ಇಂಗ್ಲೀಷ್ ನಾಟಕದ ವಿವರ ಇಂತಿದೆ:
ಸ್ಥಳ : ಚೌಡಯ್ಯ ಸ್ಮಾರಕ ಭವನ, ಬೆಂಗಳೂರು
ದಿನಾಂಕ/ ಸಮಯ: ಅಕ್ಟೋಬರ್ 5, ಶನಿವಾರ, ಸಂಜೆ 7.30
ನಾಟಕದ ಅವಧಿ : 2 ಗಂಟೆ 10 ನಿಮಿಷ

ಟಿಕೆಟ್ ಗಾಗಿ ಸಂಪರ್ಕಿಸಿ: ಬುಕ್ ಮೈ ಶೋ.ಕಾಂ
* ಬಜ್ ಇನ್ ಟೌನ್ .ಕಾಂ ಅಥವಾ
* ಇಂಡಿಯಾ ಸ್ಟೇಜ್.ಕಾಂ

ನಾಟಕದ ಬಗ್ಗೆ : ಭೀಲ್ ಬುಡಕಟ್ಟು ಜನಾಂಗದ ಮಹಾಭಾರತ ಆವೃತ್ತಿಯ ಕಥೆಯಲ್ಲಿ ಧರ್ಮ-ಕರ್ಮದ ಬಗ್ಗೆ ಚರ್ಚೆಯ ಜತೆಗೆ ದ್ರೌಪದಿಯ ಅಸ್ತಿತ್ವದ ಬಗ್ಗೆ ಸೊಗಸಾದ ವ್ಯಾಖ್ಯಾನವಿದೆ. ಪುರುಷ-ಸ್ತ್ರೀ ಸಮಾನ ಹಕ್ಕು, ದುರಂತಗಳಲ್ಲಿ ಪಾತ್ರಗಳ ಪೋಷಣೆ ಸುತ್ತ ನಾಟಕದ ಕಥೆ ಸಾಗಲಿದೆ. ದ್ರೌಪದಿ ಸ್ತ್ರೀ ಕುಲದ ಹೆಮ್ಮೆಯ ಪ್ರತೀಕವಾದರೆ, ವಾಸುಕಿ(ಸರ್ಪಗಳ ರಾಜ) ಪುರುಷಕುಲತಿಲಕನಾಗಿ ನಾಟಕದಲ್ಲಿ ಕಂಡು ಬರುತ್ತಾರೆ.

Importance of being Draupadi Play Prakash Belawadi

ಪಾತವರ್ಗ
ಸೂತ್ರಧಾರ/ವಿದುರ/ಪ್ರತಿಹಾರಿ: ಸುನೀಲ್ ರಾಘವೇಂದ್ರ
ಪ್ರಬಂಧಕ: ಅಭಿಜಿತ್ ರೇವತಿ

ದ್ರೌಪದಿ: ಸಿರಿ ರವಿಕುಮಾರ್
ಪ್ರಿಯಂವದ: ಪ್ರತಿಮಾ ಚೌಧರಿ
ವಾಸುಕಿ: ಅಭಿಜಿತ್ ರಾಮಕೃಷ್ಣ ಶೆಟ್ಟಿ
ಪದ್ಮನಾಗಿನಿ/ಕುಂತಿ: ಸುಷ್ಮಾ
ಅರ್ಜುನ: ಕರಣ್ಬೀರ್ ಸಿಂಗ್
ಕರ್ಣ: ಹರೀಶ್ ಶೇಷಾದ್ರಿ

ಸೂರ್ಯ/ಧೃತರಾಷ್ಟ್ರ: ಅರ್ಜುನ್ ನಿಟ್ಟೂರು
ದುಶ್ಯಾಸನ: ರಣ್ ವಿಜಯ್ ಪ್ರತಾಪ್ ಸಿಂಗ್
ಧುರ್ಯೋಧನ: ಪ್ರಕಾಶ್ ಐಯಂಗಾರ್
ಭೀಷ್ಮ: ವಿಜಯ್ ಕೃಷ್ಣ
ಯುಧೀಷ್ಠರ: ಅನಿರುದ್ಧ್ ಆಚಾರ್ಯ
ಭೀಷ್ಮ : ಲಿಖಿತ್ ಜಿ.ಪಿ
ನಕುಲ: ಶ್ರೀನಿಧಿ ಆಚಾರ್ ಕೆ.ಎಸ್
ಸಹದೇವ: ಸತ್ಯನಾರಾಯಣ ರೂಡಿ ದೀಕ್ಷಿತ್

ಕಲೆ: ಶ್ರೀಧರ್ ಮೂರಿಜಿ.ಜೆ
ರಂಗವಿನ್ಯಾಸ: ಎಂ ಜಯರಾಮ್
ಸಂಗೀತ: ಅಭಿನವ್ ಪಾರ್ಮಾರ್, ಸಹಾಯ ಮೇಘನಾ ಬೆಳವಾಡಿ
ವಸ್ತ್ರ ವಿನ್ಯಾಸ: ಸಂಕೀರ್ತಿ ಐಪಂಜಿಗುಳಿ
ಮೇಕಪ್ : ಉಮಾ ಮಹೇಶ್ವರ್
ಬೆಳಕು, ನಿರ್ದೇಶನ: ಪ್ರಕಾಶ್ ಬೆಳವಾಡಿ

English summary
Bengaluru International Arts Festival 2013 : Center for film and drama presents 'The importance of being Draupadi'. The story directly from the pages of Mahabharat told with nuance, detailing and a refreshing interpretation. Krishnan Rangaraju's play designed and directed by Prakash Belawadi and it will staged at Chowdiah Memorial Hall on Oct. 5, 2013
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X