ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮತ್ತೊಂದು ರೇಪ್ : ಬಿಬಿಎಂಪಿ ತೆರಿಗೆ ನಿರೀಕ್ಷಕ ಬಂಧನ

|
Google Oneindia Kannada News

ಬೆಂಗಳೂರು, ಜು. 21 : ಮದುವೆಯಾಗುವುದಾಗಿ ನಂಬಿಸಿ ಯುವತಿಯೊಂದಿಗೆ ದೈಹಿಕ ಸಂಪರ್ಕ ಬೆಳೆಸಿ ವಂಚಿಸಿದ್ದ ಬಿಬಿಎಂಪಿ ತೆರಿಗೆ ನಿರೀಕ್ಷಕನ ವಿರುದ್ಧ ಯಲಹಂಕ ನ್ಯೂ ಟೌನ್ ಠಾಣೆಯಲ್ಲಿ ಅತ್ಯಾಚಾರದ ದೂರು ದಾಖಲಾಗಿದ್ದು, ಪೊಲೀಸರು ಆತನನ್ನು ಬಂಧಿಸಿದ್ದಾರೆ.

ಬಿಬಿಎಂಪಿಯಲ್ಲಿ ತೆರಿಗೆ ನಿರೀಕ್ಷಕನಾಗಿ ಕೆಲಸ ಮಾಡುತ್ತಿದ್ದ ಗದಗ ಮೂಲದ ರಾಘವೇಂದ್ರ ಬಡಿಗೇರ್, ಮದುವೆಯಾಗುವುದಾಗಿ ನಂಬಿಸಿ 21 ವರ್ಷದ ಯುವತಿ ಜೊತೆ ಸತತ ಎರಡು ವರ್ಷಗಳಿಂದ ದೈಹಿಕ ಸಂಪರ್ಕ ಹೊಂದಿದ್ದ ಈತ ನಂತರ ವಂಚಸಿದ್ದಾನೆ ಎಂದು ಯುವತಿ ನೀಡಿದ ದೂರಿನ ಅನ್ವಯ ಸೋಮವಾರ ಪೊಲೀಸರು ರಾಘವೇಂದ್ರನನ್ನು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ.

rape

ಈಗಾಗಲೇ ಮುದುವೆಯಾಗಿರುವ ರಾಘವೇಂದ್ರ ಬಡಿಗೇರ್ ಎರಡು ವರ್ಷಗಳಿಂದ ಯುವತಿಯನ್ನು ಪ್ರೀತಿಸುತ್ತಿದ್ದ. ಯುವತಿಯನ್ನು ಮನೆಗೆ ಕರೆದುಕೊಂಡು ಹೋಗಿದ್ದ ಈತ ಆಕೆಯ ಜೊತೆ ದೈಹಿಕ ಸಂಪರ್ಕ ಬೆಳೆಸಿದ್ದ. ಆದರೆ, ಮದುವೆಯಾಗಲಿ ನಿಕಾರಿಸಿದ್ದ ಈತನ ವಿರುದ್ಧ ಯುವತಿ ಅತ್ಯಾಚಾರದ ದೂರು ದಾಖಲಿಸಿದ್ದಾಳೆ. [ಅತ್ಯಾಚಾರಿಗಳ ವಿರುದ್ಧ ಗೂಂಡಾ ಕಾಯ್ದೆ]

ಕೆಲವು ದಿನಗಳಿಂದ ಮದುವೆಯಾಗೋಣ ಎಂದು ಯುವತಿ ರಾಘವೇಂದ್ರನಿಗೆ ಒತ್ತಾಯಿಸುತ್ತಿದ್ದಳು. ಆದರೆ, ರಾಘವೇಂದ್ರ ಅದನ್ನು ನಿರಾಕರಿಸುತ್ತ ಬಂದಿದ್ದ. ಶನಿವಾರ ಇಬ್ಬರು ದೇವಸ್ಥಾನಕ್ಕೆ ಹೋಗಿ ಬರುವಾಗ ಇದೇ ವಿಚಾರಕ್ಕೆ ಗಲಾಟೆ ನಡೆದು, ರಾಘವೇಂದ್ರ ಯುವತಿ ಮೇಲೆ ಹಲ್ಲೆ ಮಾಡಿದ್ದಾನೆ ಎಂದು ದೂರಿನಲ್ಲಿ ವಿವರಿಸಲಾಗಿದೆ.

ಭಾನುವಾರ ರಾತ್ರಿ ಯುವತಿ ನೀಡಿದ ದೂರಿನ ಅನ್ವಯ ಸೋಮವಾರ ಬೆಳಗ್ಗೆ ಯಲಹಂಕ ನ್ಯೂಟೌನ್ ಪೊಲೀಸರು ಆರೋಪಿ ರಾಘವೇಂದ್ರ ಬಡಿಗೇರ್ ನನ್ನು ಬಂಧಿಸಿದ್ದು, ವಿಚಾರಣೆ ಮುಂದುವರೆಸಿದ್ದಾರೆ. [ಅಪ್ರಾಪ್ತೆ ಜೊತೆ ಒಪ್ಪಿಗೆಯ ಲೈಂಗಿಕತೆ ಕ್ರೈಂ ಅಲ್ಲ]

English summary
Yelahanka New Town police on Monday arrested The Bruhat Bengaluru Mahanagara Palike (BBMP) tax inspector Raghavendra Badiger in the rape case.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X