ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸೆ.5ರಂದು ಬಿಬಿಎಂಪಿಗೆ ಹೊಸ ಮೇಯರ್ ಆಯ್ಕೆ

|
Google Oneindia Kannada News

ಬೆಂಗಳೂರು, ಆ.28 : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಮೇಯರ್ ಮತ್ತು ಉಪ ಮೇಯರ್ ಆಯ್ಕೆಗಾಗಿ ಸೆ.5ರಂದು ಚುನಾವಣೆ ನಡೆಯಲಿದೆ. ಹಾಲಿ ಮೇಯರ್ ಕಟ್ಟೆ ಸತ್ಯನಾರಾಯಣ ಮತ್ತು ಉಪ ಮೇಯರ್ ಇಂದಿರಾ ಅವರ ಅಧಿಕಾರಾವಧಿ ಸೆ.3ರಂದು ಕೊನೆಗೊಳ್ಳಲಿದೆ.

ಬಿಬಿಎಂಪಿ ಚುನಾವಣೆಯ ಅಧಿಸೂಚನೆಯನ್ನು ಪ್ರಾದೇಶಿಕ ಆಯುಕ್ತ ಗೌರವ ಗುಪ್ತ ಅವರ ಬುಧವಾರ ಪ್ರಕಟಿಸಿದ್ದು, ಸೆ.5ರಂದು ಚುನಾವಣೆ ನಡೆಸುವಂತೆ ಪಾಲಿಕೆಯ ಕೌನ್ಸಿಲ್ ಕಾರ್ಯದರ್ಶಿ ಅವರಿಗೆ ಪತ್ರ ಬರೆದಿದ್ದಾರೆ. ಸೆ.5ರಂದು ಬೆಳಗ್ಗೆ ನಾಮಪತ್ರ ಸಲ್ಲಿಕೆಗೆ ಅವಕಾಶ ಕಲ್ಪಿಸಲಾಗಿದ್ದು, ಅಗತ್ಯಬಿದ್ದರೆ, ಮಧ್ಯಾಹ್ನ ಚುನಾವಣೆ ನಡೆಯಲಿದೆ.

BBMP

ಬಿಬಿಎಂಪಿಯ ಮೇಯರ್ ಮತ್ತು ಉಪ ಮೇಯರ್ ಪಟ್ಟವನ್ನು ಈ ಬಾರಿ ಸಾಮಾನ್ಯ ವರ್ಗಕ್ಕೆ ಮೀಸಲಾಗಿಡಲಾಗಿದ್ದು, ಎರಡು ಹುದ್ದೆಗಳಿಗೆ ಭಾರೀ ಪೈಪೋಟಿ ನಡೆಯುತ್ತಿದೆ. ಹಾಲಿ ಮೇಯರ್ ಆಗಿರುವ ಕಟ್ಟೆ ಸತ್ಯನಾರಾಯಣ ಮತ್ತು ಉಪ ಮೇಯರ್ ಇಂದಿರಾ ಅವರ ಅವಧಿ ಸೆ.3ರಂದು ಕೊನೆಗೊಳ್ಳಲಿದೆ. [ಮೇಯರ್, ಉಪ ಮೇಯರ್ ಪಟ್ಟಕ್ಕೆ ಪೈಪೋಟಿ]

ಮಹಾನಗರ ಪಾಲಿಕೆಯ ಕೌನ್ಸಿಲ್‌ನ ಕೊನೆಯ ಅವಧಿ ಇದಾಗಿದ್ದು, 2015ರ ಏಪ್ರಿಲ್‌ನಲ್ಲಿ ಮತ್ತೆ ಪಾಲಿಕೆಗೆ ಚುನಾವಣೆ ನಡೆಯಲಿದೆ. ಆದ್ದರಿಂದ ಆಯ್ಕೆಯಾಗುವ ಮೇಯರ್ ಮತ್ತು ಉಪ ಮೇಯರ್ ಅಧಿಕಾರಾವಧಿ ಆರು ತಿಂಗಳಾಗಿರುತ್ತದೆ.

ಮೇಯರ್ ಗೌನ್ ಧರಿಸಲು ಪೈಪೋಟಿ : ಮೂಡಲಪಾಳ್ಯ ವಾರ್ಡ್‌ನ ಶಾಂತಕುಮಾರಿ, ಡಾ.ರಾಜ್‌ಕುಮಾರ್ ವಾರ್ಡ್‌ನ ಗಂಗಭೈರಯ್ಯ, ಜೆ.ಪಿ.ಪಾರ್ಕ್‌ನ ಬಿ.ಆರ್‌. ನಂಜುಂಡಪ್ಪ, ಬನಶಂಕರಿ ದೇವಸ್ಥಾನದ ಎ.ಎಚ್‌. ಬಸವ­ರಾಜು, ವಿಜಯನಗರದ ಎಚ್.­ರವೀಂದ್ರ ಮತ್ತು ಪಟ್ಟಾಭಿರಾಮನಗರದ ಸಿ.ಕೆ. ರಾಮಮೂರ್ತಿ ಅವರ ಹೆಸರುಗಳು ಮೇಯರ್ ಪಟ್ಟಕ್ಕೆ ಕೇಳಿಬರುತ್ತಿವೆ.

ಮೇಯರ್ ಪಟ್ಟಕ್ಕೆ ಪ್ರತಿ ಬಾರಿಯು ದಕ್ಷಿಣ ವಲಯದ ಸದಸ್ಯರನ್ನು ಆಯ್ಕೆ ಮಾಡಲಾಗುತ್ತದೆ. ಆದ್ದರಿಂದ ಈ ಬಾರಿ ಬೇರೆ ವಲಯಗಳಿಗೆ ಆದ್ಯತೆ ನೀಡಬೇಕು ಎಂಬ ಮಾತು ಕೇಳಿಬರುತ್ತಿದೆ. ಶೀಘ್ರದಲ್ಲೇ ಬಿಜೆಪಿ ನಾಯಕರು ಸಭೆ ಸೇರಿ ಮೇಯರ್ ಆಯ್ಕೆ ಕುರಿತಂತೆ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.

English summary
The Bruhat Bengaluru Mahanagara Palike (BBMP) mayoral election will be held at September 5. The term of Mayor and Deputy Mayor, B S Sathyanarayana and N Indira, will come to an end on September 3.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X