ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದುಬೈ ಪ್ರವಾಸ ರದ್ದುಗೊಳಿಸಿದ ಬಿಬಿಎಂಪಿ ಮೇಯರ್

|
Google Oneindia Kannada News

ಬೆಂಗಳೂರು, ಜೂ. 19 : ಬೆಂಗಳೂರಿನ ಕಸದ ಸಮಸ್ಯೆ ಬಗೆಹರಿಸಲು ಅಂತಾರಾಷ್ಟ್ರೀಯ ಸಂಸ್ಥೆಯೊಂದು ದುಬೈನಲ್ಲಿ ನಿರ್ಮಿಸಿರುವ ಘಟಕ ವೀಕ್ಷಣೆ ಮಾಡಿಕೊಂಡು ಬರುವ ಪ್ರವಾಸವನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮೇಯರ್ ಕಟ್ಟೆ ಸತ್ಯನಾರಾಯಣ ರದ್ದುಗೊಳಿಸಿದ್ದಾರೆ. ಬಿಬಿಎಂಪಿ ಮೇಯರ್ ವಿದೇಶ ಪ್ರವಾಸಕ್ಕೆ ಸಾರ್ವಜನಿಕರು, ವಿವಿಧ ರಾಜಕೀಯ ಪಕ್ಷಗಳು ಸಹ ವಿರೋಧ ವ್ಯಕ್ತಪಡಿಸಿದ್ದವು.

ಈ ಕುರಿತು ಹೇಳಿಕೆ ನೀಡಿರುವ ಮೇಯರ್ ಕಟ್ಟೆ ಸತ್ಯನಾರಾಯಣ, ಅಂತಾರಾಷ್ಟ್ರೀಯ ಸಂಸ್ಥೆಯೊಂದು ದುಬೈನಲ್ಲಿ ನಿರ್ಮಿಸಿರುವ ಘಟಕ ವೀಕ್ಷಣೆಗೆ ಆಹ್ವಾನ ಬಂದಿತ್ತು. ಆದರೆ, ಸದ್ಯಕ್ಕೆ ವಿದೇಶ ಪ್ರವಾಸ ಕೈಗೊಳ್ಳುವ ಯಾವುದೇ ಚಿಂತನೆ ಇಲ್ಲ. ಸದ್ಯ ತ್ಯಾಜ್ಯ ಸಂಸ್ಕರಣೆಗೆ ಅಗತ್ಯ ವ್ಯವಸ್ಥೆ ಕಲ್ಪಿಸುವ ಕಾರ್ಯಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ ಎಂದು ಹೇಳಿದ್ದಾರೆ. [ಮೇಯರ್ ವಿದೇಶ ಪ್ರವಾಸಕ್ಕೆ ಲೋಕಸತ್ತಾ ವಿರೋಧ]

Katte Satyanarayana

ನಾಗರಿಕ ಸೇವಾ ಸಂಸ್ಥೆಗಳು, ವಿವಿಧ ಕ್ಷೇತ್ರದ ಗಣ್ಯರು, ರಾಜಕೀಯ ಪಕ್ಷಗಳು ಮೇಯರ್ ವಿದೇಶ ಪ್ರವಾಸಕ್ಕೆ ಅಸಮಧಾನ ವ್ಯಕ್ತಪಡಿಸಿದ್ದವು. ಬೆಂಗಳೂರಿಗೆ ಹೊಂದಿಕೊಳ್ಳುವ ವೈಜ್ಞಾನಿಕ ಕಸ ಸಂಸ್ಕರಣಾ ವಿಧಾನ ಕೈಗೊಳ್ಳುವ ಬದಲು ವಿದೇಶಗಳಲ್ಲಿ ನಡೆದ ಪ್ರಯೋಗಗಳ ವೀಕ್ಷಣೆಗೆ ತೆರಳುವುದು ಅರ್ಥಹೀನ ಎಂಬ ಅಭಿಪ್ರಾಯ ವ್ಯಕ್ತವಾಗಿತ್ತು. [ಕಸದ ಸಮಸ್ಯೆ ಬಗೆಹರಿಸಲು ಸ್ಯಾನ್ ಫ್ರಾನ್ಸಿಸ್ಕೋ ನೆರವು]

ಈ ಹಿಂದೆ ಸಹ ಅಧ್ಯಯನ ನೆಪದಲ್ಲಿ ಜನಪ್ರತಿನಿಧಿಗಳ ತಂಡ ದೇಶ ಹಾಗೂ ವಿದೇಶ ಸುತ್ತಿ ಬಂದರೂ ನಗರದಲ್ಲಿ ಹೊಸ ಕಸ ವಿಲೇವಾರಿ ಘಟಕ ನಿರ್ಮಾಣವಾಗಿರಲಿಲ್ಲ. ಆದ್ದರಿಂದ ವಿದೇಶ ಪ್ರವಾಸದ ಅಗತ್ಯವಿಲ್ಲ ಎಂದು ಎಲ್ಲರೂ ಅಭಿಪ್ರಾಯಪಟ್ಟಿದ್ದರು. ಆದ್ದರಿಂದ ಮೇಯರ್ ತಮ್ಮ ದುಬೈ ಪ್ರವಾಸವನ್ನು ರದ್ದುಗೊಳಿಸಿದ್ದು, ನಗರದ ಕಸ ವಿಲೇವಾರಿ ಬಗ್ಗೆ ಗಮನ ಹರಿಸಿದ್ದಾರೆ. [ಕಸ ವಿಲೇವಾರಿ ಸಮಸ್ಯೆಗೆ ತಾತ್ಕಾಲಿಕ ಮುಕ್ತಿ]

ಹಿಂದೆಯೂ ವಿದೇಶ ಪ್ರವಾಸ : 2010ರಲ್ಲಿ ಅಂದಿನ ಮೇಯರ್ ಎಸ್.ಕೆ.ನಟರಾಜ್ ನೇತೃತ್ವದ ತಂಡ ಮುಂಬೈ ಬಾಬಾ ಅಣುಶಕ್ತಿ ಸಂಶೋಧನಾ ಕೇಂದ್ರಕ್ಕೆ ಭೇಟಿ ನೀಡಿತ್ತು. 2012ರಲ್ಲಿ ಅಂದಿನ ಉಪಮೇಯರ್ ಎಸ್.ಹರೀಶ್ ನೇತೃತ್ವದ ನಿಯೋಗ ಇಸ್ರೇಲ್‌ಗೆ ಹೋಗಿಬಂದಿತ್ತು.

ಮೇಯರ್ ಶಾರದಮ್ಮ ನೇತೃತ್ವದ ತಂಡ ಪುಣೆಗೂ ಭೇಟಿ ನೀಡಿ ಪರಿಶೀಲನೆ ನಡೆಸಿತ್ತು. ಆದರೆ, ಈ ಎಲ್ಲಾ ಪ್ರವಾಸಗಳ ಬಳಿಕ ನಗರದಲ್ಲಿ ಯಾವುದೇ ಹೊಸ ಕಸ ವಿಲೇವಾರಿ ಘಟಕಗಳನ್ನು ಬಿಬಿಎಂಪಿ ಆರಂಭಿಸಿಲ್ಲ. ಕಸ ವಿಲೇವಾರಿಯಲ್ಲಿ ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಂಡಿಲ್ಲ.

ಮೇಯರ್ ಪ್ರವಾಸಕ್ಕೆ ವಿರೋಧ ವ್ಯಕ್ತಪಡಿಸಿದ್ದ ಲೋಕಸತ್ತಾ ಪಕ್ಷ, ಮೇಯರ್ ಅವರ ಉದ್ದೇಶಿತ ದುಬೈ ಪ್ರವಾಸ ಈ ಹಿಂದಿನ ವಿದೇಶಿ ಪ್ರವಾಸಗಳಂತೆ ಯಾವುದೇ ಪ್ರಯೋಜನಕ್ಕೆ ಬರುವುದಿಲ್ಲ ಮತ್ತು ಅನವಶ್ಯಕ ಖರ್ಚು ಮತ್ತು ಕಾಲಹರಣಕ್ಕೆ ಕಾರಣವಾಗುತ್ತದೆ ಎಂದು ಆರೋಪಿಸಿತ್ತು. ಸದ್ಯ ಪ್ರವಾಸ ರದ್ದುಗೊಳಿಸಿ ಮೇಯರ್ ಎಲ್ಲಾ ವಿವಾದಗಳಿಗೆ ತೆರೆ ಎಳೆದಿದ್ದಾರೆ.

English summary
Bruhat Bengaluru Mahanagara Palike(BBMP) Mayor Katte Satyanarayana cancelled proposed Dubai and San Francisco tour for find a solution to the city’s garbage crisis. Many organizations and political partys opposed Mayor foreign tour.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X