ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಬಿಎಂಪಿ ಕಾರ್ಪೋರೇಟರ್ ಕೈಗೆ ಐಪ್ಯಾಡ್!

|
Google Oneindia Kannada News

iPad
ಬೆಂಗಳೂರು, ಸೆ.28 : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಆರ್ಥಿಕ ಸ್ಥಿತಿ ಅಷ್ಟು ಚೆನ್ನಾಗಿಲ್ಲ ಎಂಬುದು ಎಲ್ಲರಿಗೂ ತಿಳಿದಿದೆ. ಆದರೆ, ಪಾಲಿಕೆ ಕಾರ್ಪೋರೇಟರ್ ಗಳಿಗೆ ಸುಮಾರು ಒಂದು ಕೋಟಿ ರೂ. ವೆಚ್ಚದಲ್ಲಿ ಐಪ್ಯಾಡ್ ವಿತರಿಸಲು ಮುಂದಾಗಿದೆ.

ಬಿಬಿಎಂಪಿಯ ಎಲ್ಲಾ 198 ವಾರ್ಡ್ ಸದಸ್ಯರು ಹಾಗೂ ನಾಮಕರಣ ಸದಸ್ಯರು ಸೇರಿದಂತೆ ಒಟ್ಟು 218 ಮಂದಿಗೆ ಆಪಲ್‌ ಐಪ್ಯಾಡ್ 4 ನೀಡಲು ನಿರ್ಧರಿಸಿರುವ ಪಾಲಿಕೆ, ಐಪ್ಯಾಡ್ ಪೂರೈಕೆ ಮಾಡಲು ಸೆ.20ರಂದು ಟೆಂಡರ್ ಕರೆದಿದೆ.

ಸದ್ಯ ಗುತ್ತಿಗೆದಾರರಿಗೆ ಹಣ ನೀಡಲು, ಕಸದ ಸಮಸ್ಯೆ ನಿವಾರಿಸಲು, ನೌಕರರಿಗೆ ಸಂಬಳ ನೀಡಲು ಹಣದ ಕೊರತೆ ಇದೆ ಎಂದು ಹೇಳುವ ಬಿಬಿಎಂಪಿ ಕಾರ್ಪೋರೇಟರ್ ಗಳ ಕೈಗೆ ಐಪ್ಯಾಡ್ ನೀಡಲು ಹೊರಟಿರುವ ಕ್ರಮ ಭಾರೀ ಚರ್ಚೆಗೆ ಗ್ರಾಸವಾಗಿದೆ.

ಹಿಂದೆಯೂ ಇತ್ತು : ಬಿಬಿಎಂಪಿಗೆ ಎಸ್.ಕೆ.ನಟರಾಜ್ ಅವರು ಮೇಯರ್ ಆಗಿದ್ದ ಅವಧಿಯಲ್ಲೇ ಪಾಲಿಕೆ ಸದಸ್ಯರಿಗೆ ಲ್ಯಾಪ್‌ಟಾಪ್ ನೀಡುವ ಪ್ರಸ್ತಾವವಿತ್ತು. ಬಳಿಕ ಐಪ್ಯಾಡ್ ನೀಡಲು ನಿರ್ಧರಿಸಲಾಯಿತು. ಆಗ ಇದಕ್ಕೆ ಸಂಬಂಧಿಸಿದಂತೆ ಟೆಂಡರ್ ಸಹ ಕರೆಯಲಾಗಿತ್ತು. ಆದರೆ, ಯೋಜನೆ ಕೈಬಿಡಲಾಗಿತ್ತು.

ಸದ್ಯ ಪಾಲಿಕೆ ಸದಸ್ಯರು ಐಪ್ಯಾಡ್ ನೀಡುವಂತೆ ಒತ್ತಾಯಿಸಿದ ಹಿನ್ನೆಲೆಯಲ್ಲಿ ಮತ್ತೆ ಈ ಕಾರ್ಯಕ್ಕೆ ಮತ್ತೆ ಚಾಲನೆ ನೀಡಲಾಗಿದೆ. ಟೆಂಡರ್ ಜತೆಗೆ ಬೇಸಿಕ್ಸ್ ಹಾಗೂ ಆಫೀಸ್ ಅಪ್ಲಿಕೇಷನ್ ಪೂರೈಕೆ ಮಾಡುವಂತೆಯೂ ಟೆಂಡರ್ ನಲ್ಲಿ ಸೂಚಿಸಲಾಗಿದೆ.

1.20 ಕೋಟಿ ರೂ. ವೆಚ್ಚ : ಬಿಬಿಎಂಪಿ ಚುನಾಯಿತ ಸದಸ್ಯರು ಹಾಗೂ ನಾಮಕರಣ ಸದಸ್ಯರಿಗೆ ಐಪ್ಯಾಡ್ ವಿತರಣೆಗೆ ಸುಮಾರು 1.20 ಕೋಟಿ ವೆಚ್ಚವಾಗುವ ಸಾಧ್ಯತೆ ಇದೆ. ಒಂದು ಐಪ್ಯಾಡ್ ಗೆ 50,000 ರೂ. ತಗಲುವ ಸಾಧ್ಯತೆ ಇದ್ದು, ಐಪ್ಯಾಡ್ ಗೆ ಅನುದಾನ ಯಾವ ಯೋಜನೆಯಲ್ಲಿ ನೀಡಲಾಗುತ್ತದೆ ಎಂದು ತಿಳಿದು ಬಂದಿಲ್ಲ.

ಸದ್ಯ ಕರ್ನಾಟಕ ಸರ್ಕಾರ ಎಲ್ಲಾ ಶಾಸಕರ ಕೈಗೆ ಐಪ್ಯಾಡ್ ನೀಡಲು ಯೋಜನೆ ಸಿದ್ದಗೊಳಿಸಿದೆ. ಇದರಿಂದ ಪ್ರೇರಿತವಾದ ಬಿಬಿಎಂಪಿ ಈ ನಿರ್ಧಾರಕ್ಕೆ ಬಂದಿರಬಹುದು. ಇದನ್ನು ಕಾರ್ಪೋರೇಟರ್ ಗಳು ಎಷ್ಟು ಪರಿಣಾಮಕಾರಿಯಾಗಿ ಉಪಯೋಗಿಸುತ್ತಾರೆ ಕಾದು ನೋಡಬೇಕು. (ಶಾಸಕರ ಕೈಗೆ ಐಪ್ಯಾಡ್ ಕೊಡುತ್ತೆ ಸಿದ್ದು ಸರ್ಕಾರ!)

English summary
It’s not just legislators and MPs. In keeping with the IT city image, all 218 Councillors of the Bruhat Bengaluru Mahanagara Palike (BBMP) will soon flaunt the latest iPad from Apple. On September 19, the BBMP’s IT adviser invited tenders to supply the tablets.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X