ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅಂಬರ ಚುಂಬನ ಪಕ್ಕದ ರಾಜ್ ಪ್ರತಿಮೆಗೆ ಮಾಲಾರ್ಪಣೆ

By Ashwath
|
Google Oneindia Kannada News

ಬೆಂಗಳೂರು. ಏ.24: ಕನ್ನಡದ ಕುಲ ತಿಲಕ, ಪದ್ಮಭೂಷಣ ಡಾ.ರಾಜ್‌ಕುಮಾರ್‌ ಅವರ 86ನೇ ಜನ್ಮ ದಿನೋತ್ಸವ ಕಾರ್ಯಕ್ರಮವನ್ನು ಬಿಬಿಎಂಪಿ ವತಿಯಿಂದ ಯಡಿಯೂರು ವಾರ್ಡ್‌‌ನ ಸೌತ್‌ ಎಂಡ್‌ ವೃತ್ತದ ಬಳಿ ನಿರ್ಮಿಸಲಾಗಿರುವ ಡಾ.ರಾಜ್‌ಕುಮಾರ್‌ ಕಂಚಿನ ಪ್ರತಿಮೆ ಗೌರವಾರ್ಪ‌ಣೆ ಮಾಡುವ ಮೂಲಕ ಆಚರಿಸಲಾಯಿತು.

ಮಾಜಿ ಉಪಮುಖ್ಯಮಂತ್ರಿಗಳಾದ ಆರ್‌. ಅಶೋಕ್‌, ಬಿಬಿಎಂಪಿ ಮಹಾಪೌರರಾದ ಸತ್ಯನಾರಾಯಣ, ಪಾಲಿಕೆಯ ಜಂಟಿ ಆಯುಕ್ತರಾದ ವಿಜಯ ಕುಮಾರ್‌, ಸ್ಥಳೀಯ ನಗರ ಪಾಲಿಕೆ ಸದಸ್ಯರಾದ ರಮೇಶ್‌ ಎನ್‌.ಆರ್‌,ಸಂಗಾತಿ ವೆಂಕಟೇಶ್‌‌, ಚಂದ್ರಶೇಖರ್‌, ಮತ್ತು ಸ್ಥಳೀಯ ಡಾ.ರಾಜ್‌ಕುಮಾರ್‌ ಅಭಿಮಾನಿಗಳು ಈ ಕಾರ್ಯ‌ಕ್ರಮದಲ್ಲಿ ಉಪಸ್ಥಿತರಿದ್ದರು. [ರಾಜ್ ಕುರಿತ ಇನ್ನೊಂದಿಷ್ಟು ಇಂಟರೆಸ್ಟಿಂಗ್ ಸಂಗತಿಗಳು]

 ಪ್ರತಿಮೆ ತೂಕ:

ಪ್ರತಿಮೆ ತೂಕ:


‘ಕಸ್ತೂರಿ ನಿವಾಸ' ಚಿತ್ರದ ಪಾತ್ರವನ್ನು ಹೋಲುವ ಕಂಚಿನ ಪ್ರತಿಮೆ1,750 ಕೆ.ಜಿ. ತೂಕವಿದೆ.

 ಪೀಠದ ಎತ್ತರ ಎಷ್ಟು?

ಪೀಠದ ಎತ್ತರ ಎಷ್ಟು?


ಒಂಬತ್ತು ಅಡಿ ಎತ್ತರದ ಪೀಠದಲ್ಲಿ ಪ್ರತಿಮೆಯನ್ನು ಸ್ಥಾಪಿಸಲಾಗಿದ್ದು,ವಿಜಯನಗರದಲ್ಲಿರುವ ಶಿಲ್ಪ ಕಲಾವಿದ ನಾಗರಾಜು ಅವರು ಸಿದ್ಧಪಡಿಸಿದ್ದಾರೆ.

 ಪೀಠದಲ್ಲಿ ಏನಿದೆ?

ಪೀಠದಲ್ಲಿ ಏನಿದೆ?


ರಾಜ್‌ಕುಮಾರ್‌ ಕುರಿತು 120ಕ್ಕೂ ಹೆಚ್ಚು ಪುಸ್ತಕಗಳು ಪ್ರಕಟಣೆ.. ರಾಜ್‌ಕುಮಾರ್‌ ಕುರಿತು ಹಲವು ವಿಚಾರಗಳನ್ನು ಪೀಠದಲ್ಲಿ ಕೆತ್ತಲಾಗಿದೆ.

 ಅನಾವರಣಗೊಂಡದ್ದು ಯಾವಾಗ?

ಅನಾವರಣಗೊಂಡದ್ದು ಯಾವಾಗ?


ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ಅನಂತ್ ಕುಮಾರ್ ಪ್ರತಿಮೆಯನ್ನು 2013 ಜ.31ರಂದು ಅನಾವರಣಗೊಳಿಸಿದ್ದರು.

English summary
BBMP celbrates Dr Rajkumar 86th birth anniversary in South End Circle Bangalore. Former Karnatka Home Minster R. Ashoka,BBMP Mayor Satyanarayana,corporator NR Ramesh particepated In this function.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X