ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೀದಿ ನಾಟಕದಲ್ಲಿ ಬಸವನಗುಡಿಯ ಗತ ವೈಭವ

By Ashwath
|
Google Oneindia Kannada News

ಬೆಂಗಳೂರು.ಏ.24: ಬೆಂಗಳೂರಿನಲ್ಲಿ ತನ್ನದೇ ಆದ ವಿಶೇಷತೆಗಳಿಗೆ ಹೆಸರುವಾಸಿಯಾದ ಬಸವನಗುಡಿ ಇಂದು ವಿಶಿಷ್ಟ ರಂಗ ಚಟುವಟಿಕೆಗೆ ಸಾಕ್ಷಿಯಾಯಿತು.

ರಾಮಕೃಷ್ಣ ಆಶ್ರಮದ ಆವರಣದ ಸಮೀಪ ಚಿತ್ರಕಲಾ ಪರಿಷತ್‌‌ನ ಸದಸ್ಯರು ಬಸವನಗುಡಿಯ ಹಿಂದಿನ ಸಂಸ್ಕೃತಿ,ಪರಿಸರ,ಇತಿಹಾಸದ ಪರಿಚಯವನ್ನು ಸಾರ್ವ‌ಜನಿಕರಿಗೆ ಬೀದಿ ನಾಟಕದ ಮೂಲಕ ವಿವರಿಸುವ ವಿನೂತನ ಪ್ರಯತ್ನವನ್ನು ನಡೆಸಿಕೊಟ್ಟರು.[ಕಡಲೆ ಕಾಯಿ ಪರಿಷೆ ಐತಿಹಾಸಿಕ ಹಿನ್ನಲೆ]

l Temple Road in Basavanagudi transformed into a hub of
ಈ ಕಾರ್ಯ‌ಕ್ರಮದ ಸಂಘಟಕರಲ್ಲಿ ಒಬ್ಬರಾದ ಡಿಂಪಲ್‌ ಬಿ ಷಾ ಮಾತನಾಡಿ, ಬೆಂಗಳೂರಿನಲ್ಲಿ ಬಸವನಗುಡಿಗೆ ತನ್ನದೇ ಆದ ಒಂದು ಸಾಂಸ್ಕೃತಿಕ ಹಿನ್ನೆಲೆಯಿದೆ.ಇಲ್ಲಿರುವ ದೇವಸ್ಥಾನ ಮತ್ತು ಶಿಕ್ಷಣ ಸಂಸ್ಥೆಗಳಿಂದ ಬಸವನಗುಡಿ ಬೆಂಗಳೂರಿನಲ್ಲಿ ಪ್ರಸಿದ್ಧ ಸ್ಥಳವಾಗಿದೆ. ಆಧುನಿಕತೆ ಹೆಚ್ಚಾದಂತೆ ನಾವು ನಮ್ಮ ಹಳೇಯ ಸಂಸ್ಕೃತಿಯನ್ನು ಮರೆಯುತ್ತಿದ್ದೇವೆ. ಈ ಕಾರಣಕ್ಕಾಗಿ ಯುವ ಜನತೆಗೆ ನಮ್ಮ ಸಂಸ್ಕೃತಿ ಬಗ್ಗೆ ಅರಿವು ಮೂಡಿಸಲು ಮತ್ತುಬಸವನಗುಡಿ ಪರಿಸರದ ಬಗ್ಗೆ ಜಾಗೃತಿ ಮೂಡಿಸಲು ಈ ವಿನೂತನ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದಾಗಿ ಹೇಳಿದರು.

ಬಸವನಗುಡಿ ಲೈವ್‌ ಆರ್ಟ್‌ ಪ್ರೊಜೆಕ್ಟ್‌ ಸಹಯೋಗದೊಂದಿಗೆ ಚಿತ್ರಕಲಾ ಪರಿಷತ್‌ನ ಸದಸ್ಯರು ಈ ಕಾರ್ಯಕ್ರಮವನ್ನು ನಡೆಸಿಕೊಟ್ಟರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X