ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿಪ್ರೋ ದಕ್ಷ ಟೆಕ್ಕಿಗಳಿಗೆ ಈ ಬಾರಿ ಒಳ್ಳೆ ಇಂಕ್ರಿಮೆಂಟ್

By Srinath
|
Google Oneindia Kannada News

ಬೆಂಗಳೂರು, ಏ.19: ಸಿಲಿಕಾನ್ ವ್ಯಾಲಿಯ ಸಾಫ್ಟ್ ವೇರ್ ಉದ್ಯಮದಿಂದ ಆಶಾದಾಯಕ/ ಹಿತಕರ ಸುದ್ದಿಗಳು ತೇಲಿಬರುತ್ತಿವೆ. ಇನ್ಫೋಸಿಸ್ ಫಲಿತಾಂಶ ಹೊರಬಿದ್ದು, ತನ್ನ ಟೆಕ್ಕಿಗಳಿಗೆ ಶೇ. ಆರೇಳರಷ್ಟು ಸಂಬಳ ಹೆಚ್ಚಳಗಳನ್ನು ನೀಡಲು ನಿರ್ಧರಿಸಿರುವುದರ ಬೆನ್ನಿಗೆ ಮತ್ತೊಂದು ಐಟಿ ದಿಗ್ಗಜ ವಿಪ್ರೋ ಕಂಪನಿ ಸಹ ಉದ್ಯೋಗಿಗಳಿಗೆ ಒಳ್ಳೆ ಇಂಕ್ರಿಮೆಂಟ್ ನೀಡಲು ನಿರ್ಧರಿಸಿದೆ.

Aon Hewitt HR firm ಪ್ರಕಾರ ದೇಶದ ಐಟಿ ವಲಯದಲ್ಲಿ ಒಟ್ಟಾರೆಯಾಗಿ ಶೇ. 10ಕ್ಕಿಂತ ಹೆಚ್ಚು ಇಂಕ್ರಿಮೆಂಟ್ ನಿರೀಕ್ಷಿಸಬಹುದಾಗಿದೆ. 2014ನೇ ಆರ್ಥಿಕ ವರ್ಷದಲ್ಲಿ ಐಟಿ ವಲಯದಲ್ಲಿ ಒಟ್ಟಾರೆ ಶೇ. 15ರಷ್ಟು ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಲಿದೆ. ಕಳೇದ ವರ್ಷ ಈ ಪ್ರಮಾಣ ಶೇ. 14ರಷ್ಟಿತ್ತು.

bangalore-wipro-top-performing-techies-to-get-up-to-20-percent-hike
ಹೆಚ್ಚು ಕಾರ್ಯದಕ್ಷತೆ ಸಾಧಿಸಿರುವ ಟೆಕ್ಕಿಗಳನ್ನು ಗಮನದಲ್ಲಿಟ್ಟುಕೊಂಡು Wipro ಶೇ. 20ರಷ್ಟು ಇಂಕ್ರಿಮೆಂಟ್ ಗಳನ್ನು ಈಗಾಗಲೇ ಘೋಷಿಸಿದೆ. ಆದರೆ ಇದು ಜೂನ್ ನಿಂದ ಅನ್ವಯವಾಗಲಿದೆ. ಕಂಪನಿಯಲ್ಲಿ ದೊಡ್ಡ ಪ್ರಮಾಣದ ದತ್ತಾಂಶ ಮತ್ತು ವಿಶ್ಲೇಷಣಾ ತಜ್ಞರಿಗೆ ದೊಡ್ಡ ಮಟ್ಟದ ಇಂಕ್ರಿಮೆಂಟ್ ಕಟ್ಟಿಟ್ಟಬುತ್ತಿಯಾಗಿದೆ. ಇವರ ಸಂಖ್ಯೆ ಕಡಿಮೆಯಿದ್ದು, ಅವರನ್ನು ಕಂಪನಿಯಲ್ಲೇ ಉಳಿಸಿಕೊಳ್ಳಲು ವಿಪ್ರೋ ಹೆಚ್ಚು ಇಂಕ್ರಿಮೆಂಟ್ ನೀಡುತ್ತಿದೆ ಎಂದು ಮೂಲಗಳು ತಿಳಿಸಿವೆ.

ಕಂಪನಿಯಲ್ಲಿ ಇಂತಹವರ ಸಂಖ್ಯೆ ಶೇ. 25ರಷ್ಟಿದೆ. ಉಳಿದಂತೆ ಇತರೆ ಉದ್ಯೋಗಿಗಳಿಗೆ ಶೇ. 10ರಷ್ಟು ಇಂಕ್ರಿಮೆಂಟ್ ಪ್ರಾಪ್ತಿಯಾಗಲಿದೆ ಎಂದು ತಿಳಿದುಬಂದಿದೆ. 2014ನೇ ಸಾಲಿನಲ್ಲಿ 241 ಮಂದಿಯನ್ನು ಮಾತ್ರ ವಿಪ್ರೋ ನೇಮಕ ಮಾಡಿಕೊಂಡಿದೆ. ಅಂದಹಾಗೆ ಕಂಪನಿಯಲ್ಲಿ ಈಗ ಒಟ್ಟು 1.46 ಲಕ್ಷ ಮಂದಿ ಉದ್ಯೋಗಿಗಳಿದ್ದಾರೆ. ಉತ್ಪಾದಕತೆಯನ್ನು ಹೆಚ್ಚಿಸಿಕೊಳ್ಳುವ ಗುರಿ ಹೊಂದಿರುವ ಕಂಪನಿ ಈ ಬಾರಿ ಶೇ. 4.7ರಷ್ಟು ಅನುತ್ಪಾದಕ ಉದ್ಯೋಗಿಗಳನ್ನು ಕೆಲಸದಿಂದ ತೆಗದುಹಾಕಲಿದೆ.

ಗಮನಾರ್ಹವೆಂದರೆ ಇನ್ಫೋಸಿಸ್ ಕಂಪನಿಯು ಏಪ್ರಿಲ್ ತಿಂಗಳಿಂದಲೇ ಅನ್ವಯವಾಗುವಂತೆ ಇಂಕ್ರಿಮೆಂಟ್ ಘೋಷಿಸಿದೆ. ಜತೆಗೆ, ಒಂಬತ್ತು ತಿಂಗಳ ಹಿಂದಷ್ಟೇ ಇನ್ಫೋಸಿಸ್ ಇದೇ ಪ್ರಮಾಣದ ಇಂಕ್ರಿಮೆಂಟ್ ನೀಡಿತ್ತು. ಕಳೆದ ಅಕ್ಟೋಬರಿನಿಂದೀಚೆಗೆ 12,500 ಟೆಕ್ಕಿಗಳಿಗೆ ಕಂಪನಿಯು ಬಡ್ತಿಯನ್ನು ಸಹ ನೀಡಿ, ಉತ್ತೇಜಿಸಿದೆ.

ಇನ್ಫಿಯಲ್ಲಿ ಪ್ರಸ್ತುತ 1,60,405 ಉದ್ಯೋಗಿಗಳಿದ್ದಾರೆ. 2013-14ರ ಕೊನೆಯ ತ್ರೈಮಾಸಿಕದಲ್ಲಿ ಕಂಪನಿಯು 10,997 ಉದ್ಯೋಗಿಗಳನ್ನು ನೇಮಕ ಮಾಡಿಕೊಂಡಿದೆ. ಒಟ್ಟಾರೆ ವರ್ಷದಲ್ಲಿ 39,985 ಮಂದಿ ನೇಮಕವಾಗಿದೆ.

English summary
Bangalore Wipro top performing techies to get up to 20 per cent hike. These hikes, effective June 1. Country's second largest software services firm Infosys has raised salaries of its employees in the country by 6-7% and by 1-2% for onsite workers, effective April 1. According to global HR firm Aon Hewitt, employees in the IT sector (Hi-Tech industry) can expect an average salary increase of 10.2% during 2014.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X