ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಾದಬ್ರಹ್ಮ ಹಂಸಲೇಖ, ಕಿರಣ್ ಷಾಗೆ ಬೆಂವಿವಿ ಡಾಕ್ಟರೇಟ್

By Srinath
|
Google Oneindia Kannada News

ಬೆಂಗಳೂರು,ಮೇ 13: ರಾಜ್ಯದ ಪ್ರತಿಷ್ಠಿತ ವಿಶ್ವವಿದ್ಯಾಲಯಗಳಲ್ಲಿ ಒಂದಾಗಿರುವ ಬೆಂಗಳೂರು ವಿಶ್ವವಿದ್ಯಾಲಯವು ಈ ಬಾರಿ ನಾಡಿನ 6 ಮಂದಿ ಗಣ್ಯರಿಗೆ ಗೌರವ ಡಾಕ್ಟರೇಟ್ ನೀಡಲು ನಿರ್ಧರಿಸಿದೆ.

ಹಂಸಲೇಖ, ಕಿರಣ್ ಷಾಗೆ ಗೌ.ಡಾ: ಬೆಂಗಳೂರು ವಿಶ್ವವಿದ್ಯಾಲಯವು ತನ್ನ 49ನೇ ಘಟಿಕೋತ್ಸವದ ಅಂಗವಾಗಿ ನಾದ ಬ್ರಹ್ಮ ಹಂಸಲೇಖ, ಬಯೋಕಾನ್ ಸಂಸ್ಥಾಪಕಿ ಕಿರಣ್ ಮಜೂಂದಾರ್ ಷಾ ಸೇರಿದಂತೆ ಒಟ್ಟು 6 ಮಂದಿಗೆ ಇದೇ ಮೇ 20ರಂದು ಗೌರವ ಡಾಕ್ಟರೇಟ್ ನೀಡಿ ಗೌರವಿಸಲು ತೀರ್ಮಾನಿಸಿದೆ.

bangalore-university-to-confer-doctorate-on-kiran-mazumdar-hamsalekha

ಅಧಿಕೃತ ಮೂಲಗಳ ಪ್ರಕಾರ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅವರು ಘಟಿಕೋತ್ಸವದಲ್ಲಿ ಪಾಲ್ಗೊಂಡು ಗೌರವ ಡಾಕ್ಟರೇಟ್ ಪ್ರದಾನ ಮಾಡಲು ಒಪ್ಪಿದ್ದಾರೆ ಎಂದು ತಿಳಿದುಬಂದಿದೆ.

65 ವರ್ಷದ ಮೂಲತಃ ಮೈಸೂರಿನವರಾದ ನಾದಬ್ರಹ್ಮ ಹಂಸಲೇಖ (ಗೋವಿಂದರಾಜು ಗಂಗರಾಜು) ಮತ್ತು ಈಗಾಗಲೇ ಹಲವಾರು ಡಾಕ್ಟರೇಟುಗಳನ್ನು ಪಡೆದಿರುವ ಕಿರಣ್ ಮಜೂಂದಾರ್ ಷಾ ಅವರ ಜತೆಗೆ ಹಿರಿಯ ಪತ್ರಕರ್ತ ಪಿ ರಾಮಯ್ಯ, ರಾಜಾಜಿನಗರ ಪೇರೆಂಟ್ಸ್ ಎಡುಕೇಶನ್ ಸೊಸೈಟಿಯ ಕಾರ್ಯದರ್ಶಿ ಜಿಬಿ ಪರಮಶಿವಯ್ಯ, ಶಿಕ್ಷಣ ತಜ್ಞ ಬಿಟಿ ಲಕ್ಷ್ಮಣ್ ಮತ್ತು ಮಾಜಿ ಮೇಲ್ಮನೆ ಸದಸ್ಯರಾದ ಎಸ್ಎಸ್ ಅರಕೆರೆ ಅವರುಗಳು ಈ ಗೌರವಕ್ಕೆ ಪಾತ್ರರಾಗಿದ್ದಾರೆ.

English summary
Bangalore University will confer an honorary doctorate degree on Biocon CMD Kiran Mazumdar-Shaw, music director Hamsalekha and four others at its 49th convocation scheduled to be held May 20. Also to Rajajinagar Parents' Education Society secretary G B Paramashivaiah, educationist B T Lakshman, journalist P Ramaiah and former MLC SS Arkere.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X