ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶೇ.30ರಷ್ಟು ಹೆಚ್ಚಾದ ಬೆಂಗಳೂರು ವಸತಿ ಮಾರುಕಟ್ಟೆ

By Rajendra
|
Google Oneindia Kannada News

ಬೆಂಗಳೂರು, ಏ. 24 : ಬೆಂಗಳೂರು ರಿಯಲ್ ಎಸ್ಟೇಟ್ ಉದ್ಯಮಕ್ಕೆ 2013-14 ಶುಭ ವರ್ಷ. ಪ್ರಸಕ್ತ ಸಾಲಿನಲ್ಲಿ ಅಂದರೆ 2014-15 ನೇ ಸಾಲಿನಲ್ಲೂ ಇದೇ ರೀತಿಯ ಪ್ರಗತಿಯನ್ನು ನಿರೀಕ್ಷಿಸಲಾಗಿದೆ. ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾತನಾಡಿದ ಕ್ರೆಡಾಯ್ ಬೆಂಗಳೂರು ಘಟಕದ ಅಧ್ಯಕ್ಷ ನಾಗರಾಜ ಆರ್ ಅವರು, ಕ್ರೆಡಾಯ್ ಮತ್ತು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಸಹಯೋಗದಲ್ಲಿ ಆಯೋಜಿಸಿರುವ ರಿಯಾಲ್ಟಿ ಎಕ್ಸ್‍ ಪೋ-2014 ರ ಬಗ್ಗೆ ಮಾಹಿತಿ ನೀಡಿದರು.

ಕಳೆದ ಹಣಕಾಸು ಸಾಲಿನಲ್ಲಿ ಇತರೆ ಮೆಟ್ರೋ ನಗರಗಳಿಗೆ ಹೋಲಿಸಿದರೆ ಬೆಂಗಳೂರು ರಿಯಲ್ ಎಸ್ಟೇಟ್ ಮಾರುಕಟ್ಟೆ ಸ್ಥಿರವಾಗಿತ್ತು. ಬೆಂಗಳೂರಿನಲ್ಲಿ ಕಳೆದ ವರ್ಷ 45 ಸಾವಿರಕ್ಕೂ ಅಧಿಕ ಮನೆಗಳು ಮಾರಾಟವಾಗಿವೆ ಎಂದರು.

ಹಲವಾರು ರಿಯಲ್ ಎಸ್ಟೇಟ್ ಉದ್ಯಮಿಗಳು ಚುನಾವಣೆ ಮುಗಿಯುವುದನ್ನು ಕಾಯುತ್ತಿದ್ದಾರೆ. ಚುನಾವಣೆ ಮುಗಿದ ನಂತರ ಉದ್ಯಮಿಗಳು ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಬಂಡವಾಳ ಹೂಡಿಕೆ ಮಾಡಲು ಆರಂಭಿಸಲಿದ್ದಾರೆ. ಏಕೆಂದರೆ, ಕರ್ನಾಟಕ ಸರ್ಕಾರ ಕೇವಲ ಮಾಹಿತಿ ತಂತ್ರಜ್ಞಾನ ಕ್ಷೇತ್ರವಲ್ಲದೇ ಆಟೋಮೋಬೈಲ್ ಮತ್ತು ಎಂಜಿನಿಯರಿಂಗ್ ಕ್ಷೇತ್ರದಲ್ಲೂ ಬಂಡವಾಳ ಹೂಡಿಕೆಗೆ ಸಾಕಷ್ಟು ಅವಕಾಶಗಳನ್ನು ಕಲ್ಪಿಸಿದೆ ಎಂದು ಅವರು ಹೇಳಿದರು.

Bangalore residential market to witness 30 pc increase in sales this fiscal

ಈ ಬಂಡವಾಳ ಹೂಡಿಕೆಯಿಂದ ಸಾಕಷ್ಟು ಉದ್ಯೋಗ ಸೃಷ್ಟಿಯಾಗುತ್ತದೆ. ಈ ಮೂಲಕ ರಿಯಲ್ ಎಸ್ಟೇಟ್ ಕ್ಷೇತ್ರಕ್ಕೆ ಹೆಚ್ಚಿನ ಬೇಡಿಕೆ ಸೃಷ್ಟಿಯಾಗಲಿದೆ. ನೆರೆಯ ಆಂಧ್ರಪ್ರದೇಶದಲ್ಲಿ ತೆಲಂಗಾಣ ವಿವಾದದಿಂದಾಗಿ ಹೆಚ್ಚಿನ ಮಾಹಿತಿ ತಂತ್ರಜ್ಞಾನ ಕಂಪನಿಗಳು ಬೆಂಗಳೂರಿನತ್ತ ಮುಖ ಮಾಡಿವೆ ಎಂದು ತಿಳಿಸಿದರು.

ಅಭಿವೃದ್ಧಿಯತ್ತ ಗಮನ: ಪ್ರಸಕ್ತ ಹಣಕಾಸು ಸಾಲಿನಲ್ಲಿ ವಸತಿ ಸಮುಚ್ಚಯ ಸೇರಿದಂತೆ ಇನ್ನಿತರೆ ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಶೇ. 25 ರಿಂದ 30 ರಷ್ಟು ಹೆಚ್ಚಿನ ಮಾರಾಟವನ್ನು ನಿರೀಕ್ಷಿಸಲಾಗಿದೆ ಎಂದು ತಿಳಿಸಿದ ನಾಗರಾಜ ಅವರು, ಕೇಂದ್ರದಲ್ಲಿ ಯಾವುದೇ ಸರ್ಕಾರ ಬಂದರೂ ಅಭಿವೃದ್ಧಿ ಕಡೆಗೆ ಗಮನ ಹರಿಸುತ್ತದೆ. ಇದು ರಿಯಲ್ ಎಸ್ಟೇಟ್ ಉದ್ಯಮದ ಬೆಳವಣಿಗೆಗೆ ಪೂರಕವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಅಸ್ತಿತ್ವಕ್ಕೆ ಬರಲಿರುವ ಹೊಸ ಸರ್ಕಾರ ಮೂಲಭೂತ ಸೌಲಭ್ಯಗಳಿಗೆ ಹೆಚ್ಚಿನ ಆದ್ಯತೆ ನೀಡಲಿದೆ ಎಂಬ ನಿರೀಕ್ಷೆ ಇದ್ದು, ಬಜೆಟ್ ನಲ್ಲಿ ಈ ಅಂಶಕ್ಕೆ ಒತ್ತು ನೀಡುವ ನಿರೀಕ್ಷೆಯೂ ಇದೆ. ಹೀಗಾಗಿ ನಾವು ಹೊಸ ಬಜೆಟ್ ನಲ್ಲಿ ಮೂಲಭೂತ ಸೌಲಭ್ಯಗಳಿಗೆ ಹೆಚ್ಚಿನ ಪ್ರೊತ್ಸಾಹ ಸಿಗಲಿದೆ ಎಂದು ನಿರೀಕ್ಷೆ ಇಟ್ಟುಕೊಂಡಿದ್ದೇವೆ.

ಈ ಮೂಲಕ ಬೆಂಗಳೂರು ಹೊರವಲಯ ಹೆಚ್ಚು ಅಭಿವೃದ್ಧಿಯಾಗಲಿದೆ. ಇದಲ್ಲದೇ ಮುಂದಿನ ದಿನಗಳಲ್ಲಿ ಬೆಂಗಳೂರು ಹೊರವಲಯದಲ್ಲಿ ವಸತಿ ಯೋಜನೆಗಳು ಕೈಗೆಟುಕವ ಬೆಲೆಗಳಲ್ಲಿ ಸಿಗುವಂತಾಗುತ್ತದೆ ಎಂದು ವಿಶ್ಲೇಷಣೆ ಮಾಡಿದರು.

ರಿಯಾಲ್ಟಿ ಎಕ್ಸ್ ಪೋ: ಕ್ರೆಡಾಯ್-ಕರ್ನಾಟಕ ಎಸ್ ಬಿಐ ರಿಯಾಲ್ಟಿ ಎಕ್ಸ್ ಪೋ-2014 ಏಪ್ರಿಲ್ 26 ಮತ್ತು 27 ರಂದು SBI LHO, St.Marks Road, Bangaloreನಲ್ಲಿ ನಡೆಯಲಿದೆ. ಕ್ರೆಡಾಯ್ ಆಯೋಜಿಸಿರುವ ಮೊದಲ ಎಕ್ಸ್ ಪೋ ಇದಾಗಿದ್ದು, ಬೆಂಗಳೂರು, ಮೈಸೂರು, ಮಂಗಳೂರು, ಉಡುಪಿ, ಹುಬ್ಬಳ್ಳಿ-ಧಾರವಾಡ, ಗುಲ್ಬರ್ಗ, ರಾಯಚೂರು, ಬೆಳಗಾವಿ ಮತ್ತು ಕಾರವಾರದ ಕಟ್ಟಡ ನಿರ್ಮಾಣ ಸಂಸ್ಥೆಗಳು ಪಾಲ್ಗೊಳ್ಳಲಿವೆ.

ಈ ಎರಡು ದಿನಗಳ ಎಕ್ಸ್ ಪೋದಲ್ಲಿ 100ಕ್ಕೂ ಹೆಚ್ಚು ಕಂಪನಿಗಳ ಮಳಿಗೆಗಳು ಇರಲಿದ್ದು, ಸುಮಾರು 25 ಸಾವಿರ ಜನರು ಬರುವ ಸಾಧ್ಯತೆಗಳಿವೆ. ಈ ಮೂಲಕ ಬೆಂಗಳೂರು ನಗರದ ನಾಗರೀಕರು ತಮಗೆ ಸೂಕ್ತವಾದ ವಸತಿಗಳನ್ನು ಹೊಂದಲು ಸುವರ್ಣಾವಕಾಶ ದೊರೆತಂತಾಗುತ್ತದೆ. (ಒನ್ಇಂಡಿಯಾ ಕನ್ನಡ)

English summary
The financial year 2013-14 was a good year for the Bangalore real estate market, and the current fiscal is expected to be better, Mr R.Nagaraj, President, CREDAI - Karnataka, said while announcing the CREDAI - Karnataka SBI Realty Expo 2014 in Bangalore today.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X