ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅಬ್ಬಾ ಬೆಂಗಳೂರಿನಲ್ಲಿ ಏನು ಬಿಸಿಲು

By Ashwath
|
Google Oneindia Kannada News

ಬೆಂಗಳೂರು ಏ.25:ದೇಶದ ಉಳಿದ ಮಹಾನಗರಗಳಂತೆ ಬೆಂಗಳೂರಿನಲ್ಲಿ ಬಿಸಿಲು ಹೆಚ್ಚಾಗುತ್ತಿದ್ದು,ನಿನ್ನೆ ಈ ವರ್ಷದ ಬೇಸಗೆಯಲ್ಲೇ ಗರಿಷ್ಠ 36.4 ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶ ದಾಖಲಾಗಿದೆ.

ನಿನ್ನೆ ಸಂಜೆ ಐದು ಗಂಟೆಯ ವೇಳೆಗೆ ಈ ಉಷ್ಣಾಂಶ ದಾಖಲಾಗಿದ್ದು,ಇದೇ ವೇಳೆ ದೇಶದ ಚೆನ್ನೈನಲ್ಲಿ 35.1 ಡಿಗ್ರಿ, ದೆಹಲಿಯಲ್ಲಿ 37.2 ಡಿಗ್ರಿ, ಮುಂಬೈ 33.4 ಡಿಗ್ರಿ, ಹೈದರಾಬಾದ್‌ನಲ್ಲಿ 39 ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶ ದಾಖಲಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

ಬೆಂಗಳೂರಿನಲ್ಲಿ ಅತಿ ಹೆಚ್ಚಿನ ಉಷ್ಣಾಂಶ 38.3 ಡಿಗ್ರಿ 1931ರ ಏ.30ರಂದು ದಾಖಲಾಗಿದ್ದರೆ, ಬಳಿಕ 2010ರ ಏಪ್ರಿಲ್‌ 12 ರಂದು 37.6 ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶ ದಾಖಲಾಗಿತ್ತು.

ಹವಾಮಾನ ಇಲಾಖೆ ನಿರ್ದೇಶಕ ಬಿ.ಪುಟ್ಟಣ್ಣ ಕಳೆದ ವಾರವೇ ಬೆಂಗಳೂರಿನಲ್ಲಿ ಸೋಮವಾರದಿಂದ ಮೂರು ದಿನಗಳ ಕಾಲ ಉಷ್ಣಾಂಶ ಹೆಚ್ಚಾಗಲಿದೆ ಎಂದು ತಿಳಿಸಿದ್ದರು.[ಮೂರು ದಿನ ಬೆಂಗಳೂರಿನಲ್ಲಿ ಭಾರೀ ಬಿಸಿಲು]

Bangalore recorded a maximum temperature
ಈ ಬಾರಿ ಕಡಿಮೆ ಮಳೆ:
ಈ ಬಾರಿ ಜುಲೈ ಆಗಸ್ಟ್‌ನಲ್ಲಿ ಸುರಿಯುವ ಮಳೆ ಪ್ರಮಾಣ ಕಡಿಮೆಯಾಗುವ ಸಾಧ್ಯತೆಯಿದೆ.ಎಲ್‌ ನಿನೋ ಪರಿ­ಣಾಮದಿಂದ ಮುಂಗಾರು ಬಲಹೀನ­ಗೊಳ್ಳಬಹುದು ಎಂದು ದಕ್ಷಿಣ ಏಷ್ಯಾ ಹವಾಮಾನ ಮುನ್ನೋಟ ವೇದಿಕೆ ತನ್ನ ವರದಿಯಲ್ಲಿ ಹೇಳಿದೆ.

ಪೆಸಿಫಿಕ್‌ ಸಮುದ್ರ ಮೇಲ್ಮೈಯಲ್ಲಿ ಸರಾಸರಿಗಿಂತ ಹೆಚ್ಚು ಬಿಸಿಯಾದರೆ ಎಲ್‌ ನಿನೋ ಪ್ರಭಾವ ಉಂಟಾಗುತ್ತದೆ. ಇದರ ಪರಿಣಾಮದಿಂದಾಗಿ ಭಾರತ ಸೇರಿದಂತೆ ದಕ್ಷಿಣ ಏಷ್ಯಾದ ಭಾಗಗಳಲ್ಲಿ ಮಳೆಯ ಪ್ರಮಾಣ ವಾಡಿಕೆಗಿಂತ ಕಡಿಮೆಯಾಗುವ ಸಂಭವ ಶೇ 60ರಷ್ಟುಇದೆ ಎಂದು ಅದು ತನ್ನ ವರದಿಯಲ್ಲಿ ತಿಳಿಸಿದೆ.

ಅಂದಹಾಗೆ ಬೆಳಗ್ಗೆ9 ಗಂಟೆಯ ಬೆಂಗಳೂರಿನ ಉಷ್ಣಾಂಶ ಇಷ್ಟಿದೆ:

English summary
Bangalore recorded a maximum temperature of 36.4 degrees Celsius up to 5:30 pm on April 24, the hottest for this season.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X